ಸಾಹೋ ಲೈಫ್‌ಟೈಮ್ ಕಲೆಕ್ಷನ್ ಮುರಿದ ಆದಿಪುರುಷ್; ಪ್ರಭಾಸ್ ಕೊನೆಯ 5 ಚಿತ್ರಗಳ ಕಲೆಕ್ಷನ್ ವಿವರ
ಜೂನ್ 16ರ ಶುಕ್ರವಾರ ವಿಶ್ವದಾದ್ಯಂತ ಬಿಡುಗಡೆಗೊಂಡ ಆದಿಪುರುಷ್ ಚಿತ್ರ ಮೊನ್ನೆ ( ಜೂನ್ 25 ) 10 ದಿನಗಳ ಪ್ರದರ್ಶನವನ್ನು ಪೂರೈಸಿದೆ. ಬಿಡುಗಡೆಗೂ ಮುನ್ನವೇ ಟೀಸರ್ ರಿಲೀಸ್ ಮಾಡಿ ಅದರಲ್ಲಿನ ಕಳಪೆ ವಿಎಫ್ಎಕ್ಸ್ ಕಾರಣದಿಂದಾಗಿ ಹೀನಾಯವಾಗಿ ಟ್ರೋಲ್‌ಗೆ ಒಳಗಾಗಿದ್ದ ಆದಿಪುರುಷ್ ತೆರೆಗೆ ಬಂದ ನಂತರವೂ ಸಹ ಅದೇ ರೀತಿಯ ರಿಪೋರ್ಟ್ ಪಡೆದುಕೊಂಡಿದೆ.
ಹೌದು, ಆದಿಪುರುಷ್ ಚಿತ್ರವನ್ನು ವೀಕ್ಷಿಸಿದ ಸಿನಿ ರಸಿಕರ ಪೈಕಿ ಬಹುತೇಕರು ಚಿತ್ರದ ಬಗ್ಗೆ ಕೆಟ್ಟ ವಿಮರ್ಶೆಗಳನ್ನು ನೀಡಿದ್ದಾರೆ. ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ಹಾಗೂ ಕೃತಿ ಸೆನನ್ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ.

ಮೂಲ ಹಿಂದಿ ಚಿತ್ರವಾಗಿರುವ ಈ ಚಿತ್ರ ಪ್ರಭಾಸ್ ನಟನೆಯ ಮೊದಲ ಬಾಲಿವುಡ್ ಸಿನಿಮಾವಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಸಹ ಈ ಚಿತ್ರ ಡಬ್ ಆಗಿದ್ದು ಪ್ಯಾನ್ ಇಂಡಿಯಾ ಬಿಡುಗಡೆಯಾಗಿದೆ.
ಚಿತ್ರ ವೀಕ್ಷಿಸಿ ಹೊರಬಂದ ಸಿನಿ ರಸಿಕರು ಪಾತ್ರಗಳ ವಸ್ತ್ರ, ವೇಷದ ಕುರಿತು ವ್ಯಂಗ್ಯವಾಡಿದರು ಹಾಗೂ ಹೀನಾಯವಾಗಿ ಟ್ರೋಲ್ ಮಾಡಿದರು. ಅಲ್ಲದೇ ಚಿತ್ರದಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ ಎಂಬ ಕಾರಣಕ್ಕೂ ಸಹ ಚಿತ್ರತಂಡ ಹೀನಾಯವಾಗಿ ಟೀಕೆಗೆ ಒಳಗಾಯಿತು.
ಹೀಗೆ ದೊಡ್ಡ ಮಟ್ಟದಲ್ಲಿ ಟೀಕೆಗೆ ಒಳಗಾಗಿರುವ ಆದಿಪುರುಷ್ ಕಲೆಕ್ಷನ್ ವಿಷಯದಲ್ಲಿಯೂ ಸಹ ಹಿನ್ನಡೆ ಅನುಭವಿಸಿದೆ. ಹೌದು, ಮೊದಲ ದಿನ 140 ಕೋಟಿ ಗಳಿಸುವ ಮೂಲಕ ಸಮಾಧಾನಕರ ಕಲೆಕ್ಷನ್ ಮಾಡಿದ ಆದಿಪುರುಷ್ ಹತ್ತು ದಿನಗಳಲ್ಲಿ 450 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದೆ. ಬಜೆಟ್‌ಗೆ ಹಾಗೂ ಹೈಪ್‌ಗೆ ಹೋಲಿಸಿದರೆ ಈ ಕಲೆಕ್ಷನ್ ಅಷ್ಟು ದೊಡ್ಡ ಮಟ್ಟದಲ್ಲಿ ಇಲ್ಲದೇ ಇದ್ದರೂ ಸಮಾಧಾನಕರ ಎನ್ನಬಹುದಾಗಿದೆ.
ಈ ಮೂಲಕ ಆದಿಪುರುಷ್ ಚಿತ್ರ ಸಾಹೋ ಚಿತ್ರದ ಲೈಫ್‌ಟೈಮ್ ಕಲೆಕ್ಷನ್ ಅನ್ನು ಹಿಂದಿಕ್ಕಿದೆ. ಹಾಗಿದ್ದರೆ ಸಾಹೋ ಚಿತ್ರ ಎಷ್ಟು ಕಲೆಕ್ಷನ್ ಮಾಡಿತ್ತು ಮತ್ತು ಪ್ರಭಾಸ್ ನಟನೆಯ ಕೊನೆಯ 5 ಚಿತ್ರಗಳು ಎಷ್ಟು ಗಳಿಕೆ ಮಾಡಿದ್ದವು ಎಂಬ ಮಾಹಿತಿ ಈ ಕೆಳಕಂಡಂತಿದೆ..
* ಬಾಹುಬಲಿ ದ ಬೆಗಿನಿಂಗ್ ಚಿತ್ರ ಒಟ್ಟಾರೆ 600 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು.
* ಬಾಹುಬಲಿ ದ ಕನ್ಲ್ಕೂಷನ್ ಚಿತ್ರ ಒಟ್ಟಾರೆ 1850 ಕೋಟಿ ಗಳಿಕೆ ಮಾಡಿತ್ತು.
* ಸಾಹೋ ಚಿತ್ರ ಒಟ್ಟಾರೆ 420 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು.
* ರಾಧೆ ಶ್ಯಾಮ್ ಚಿತ್ರ 200 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು.
* ಆದಿಪುರುಷ್ ಹತ್ತು ದಿನಗಳಲ್ಲಿ 450 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
500 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಆದಿಪುರುಷ್ ಇನ್ನೂ ಸಹ ತನ್ನ ಬಜೆಟ್‌ಗಿಂತ ಹೆಚ್ಚು ಗಳಿಸಲಾಗದೇ ಒದ್ದಾಡುತ್ತಿದೆ. ಹೀಗೆ ಹಿನ್ನಡೆ ಅನುಭವಿಸುತ್ತಿರುವ ಆದಿಪುರುಷ್ ಚಿತ್ರತಂಡ ಸಿನಿ ರಸಿಕರನ್ನು ತನ್ನತ್ತ ಸೆಳೆಯಲು ದುಬಾರಿಯಾಗಿದ್ದ ಟಿಕೆಟ್ ದರವನ್ನು ಇಳಿಸಿದ್ದು, 112 ರೂಪಾಯಿಗಳಿಗೆ ಒಂದು ಟಿಕೆಟ್ ಎಂದು ಘೋಷಿಸಿದೆ. ಜತೆಗೆ ಈ ಘೋಷಣೆಯ ಪೋಸ್ಟರ್‌ನ ಕೊನೆಯಲ್ಲಿ 'ಎಡಿಟ್ ಮಾಡಲಾದ ಹಾಗೂ ಬದಲಾಯಿಸಿದ ಸಂಭಾಷಣೆಗಳೊಂದಿಗೆ' ಎಂದು ಬರೆದುಕೊಂಡಿದೆ.


Click it and Unblock the Notifications











