ಜನವರಿ 19ಕ್ಕೆ 'ಆದಿಪುರುಷ್' ಚಿತ್ರತಂಡದಿಂದ ಪ್ರಮುಖ ಘೋಷಣೆ
ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರತಂಡದಿಂದ ಹೊಸದೊಂದು ಅಪ್‌ಡೇಟ್ ಹೊರಬೀಳಲಿದೆ. ಜನವರಿ 19 ರಂದು ಬೆಳಗ್ಗೆ 7.11ಕ್ಕೆ ಆದಿಪುರುಷ್ ಚಿತ್ರಕ್ಕೆ ಸಂಬಂಧಿಸಿದಂತೆ ಪ್ರಮುಖವಾದ ಘೋಷಣೆಯೊಂದನ್ನು ಮಾಡಲಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.
ಹೊಸ ಅಪ್‌ಡೇಟ್ ಏನಿರಬಹುದು ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಆದಿಪುರುಷ್ ಚಿತ್ರದಲ್ಲಿ ಸೀತೆ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ವಿಚಾರ ಹೇಳಬಹುದು ಎಂದು ಊಹಿಸಲಾಗುತ್ತಿದೆ.
ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದರೆ, ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡು ಪಾತ್ರಗಳ ಕುರಿತು ಸ್ವತಃ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಆದರೆ, ಸೀತೆಯ ಪಾತ್ರಕ್ಕೆ ಯಾವ ನಟಿ ಬರಬಹುದು ಎನ್ನುವುದಕ್ಕೆ ಹಲವರು ಹೆಸರು ಸಾಲಿನಲ್ಲಿದೆ.

ಸದ್ಯದ ಮಾಹಿತಿ ಪ್ರಕಾರ, ಸೀತೆ ಪಾತ್ರದಲ್ಲಿ ಕೃತಿ ಸನೊನ್ ನಟಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಇನ್ನುಳಿದಂತೆ ಓಂ ರಾವತ್ ಈ ಚಿತ್ರ ನಿರ್ದೇಶಿಸುತ್ತಿದ್ದು, ಭೂಷಣ್ ಕುಮಾರ್ ನಿರ್ಮಾಣ ಮಾಡಲಿದ್ದಾರೆ.
ತೆಲುಗು ಮತ್ತು ಹಿಂದಿಯಲ್ಲಿ ಈ ಸಿನಿಮಾ ತಯಾರಾಗಲಿದ್ದು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಡಬ್ಬಿಂಗ್ ಆಗಿ ತೆರೆಕಾಣಲಿದೆ. ಸುಮಾರು 400 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಆದಿಪುರುಷ್ ಸಿದ್ಧವಾಗಲಿದೆಯಂತೆ. ಇನ್ನು 2022ರ ಆಗಸ್ಟ್ 11ಕ್ಕೆ ಆದಿಪುರುಷ್ ಸಿನಿಮಾ ರಿಲೀಸ್ ಎಂದು ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದೆ.
ಆದಿಪುರುಷ್ ಸಿನಿಮಾದ ಜೊತೆ ಜೊತೆಗೆ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ ಸಲಾರ್ ಚಿತ್ರವನ್ನು ಆರಂಭಿಸಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಹೊಸ ಸಿನಿಮಾ ಚಿತ್ರೀಕರಣ ಆರಂಭಿಸಬೇಕಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ. ರಾಧೇ ಶ್ಯಾಮ್ ಬಿಡುಗಡೆಗೆ ತಯಾರಾಗಿದೆ.


Click it and Unblock the Notifications











