ದೊಡ್ಡ ಚಿತ್ರಗಳು ರಿಲೀಸ್ ಪಟ್ಟಿ: ದಿನಾಂಕ ಘೋಷಿಸಿದ ಆದಿಪುರುಷ್

ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳಿಗೆ 100 % ಅನುಮತಿ ಸಿಗುತ್ತಿದ್ದಂತೆ ದೇಶದ ಬಹುನಿರೀಕ್ಷೆಯ ಚಿತ್ರಗಳು ರಿಲೀಸ್ ದಿನಾಂಕ ಘೋಷಿಸಿ ಚಿತ್ರಮಂದಿರಗಳನ್ನು ಕಾಯ್ದಿರಿಸುತ್ತಿವೆ. 2021 ಹಾಗೂ 2022ರ ನಿರೀಕ್ಷೆಯ ಚಿತ್ರಗಳು ಹಾಗೂ ಹಲವು ಪ್ಯಾನ್ ಇಂಡಿಯಾ ಚಿತ್ರಗಳು ಬಿಡುಗಡೆ ದಿನಾಂಕ ಪ್ರಕಟಿಸಿದೆ. ಈಗ ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರದ ಸರದಿ.

ಕೋವಿಡ್ ಕಾರಣದಿಂದ ಈ ಹಿಂದೆ ನಿರ್ಧರಿಸಿದ್ದ ಎಲ್ಲ ದಿನಾಂಕಗಳನ್ನು ನಿರ್ಮಾಪಕರು ಬದಲಿಸಿದ್ದಾರೆ. ಆದರೆ, ಆದಿಪುರುಷ್ ಚಿತ್ರತಂಡ ಈ ಹಿಂದೆ ಪ್ರಕಟಿಸಿದ್ದ ದಿನಾಂಕಕ್ಕೆ ಬದ್ಧವಾಗಿದೆ. ಹಳೆಯ ದಿನಾಂಕವನ್ನು ಬದಲಿಸಿದೆ ಅದೇ ದಿನ ಬರುವುದಾಗಿ ಸ್ಪಷ್ಟನೆ ನೀಡಿದೆ.

ಆದರೆ, ಆದಿಪುರುಷ್ ಸಿನಿಮಾ ಎದುರು ಅಕ್ಷಯ್ ಕುಮಾರ್ ನಟನೆಯ ಚಿತ್ರವೊಂದು ರಿಲೀಸ್ ಆಗುತ್ತಿರುವುದು ಸಹಜವಾಗಿ ಬಾಲಿವುಡ್ ಪಾಲಿಗೆ ಚರ್ಚೆಯ ವಿಷಯವಾಗಿದೆ. ಮುಂದೆ ಓದಿ...

ಆಗಸ್ಟ್ 11ಕ್ಕೆ ಆದಿಪುರುಷ್

ಆಗಸ್ಟ್ 11ಕ್ಕೆ ಆದಿಪುರುಷ್

ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಆದಿಪುರುಷ್' ಸಿನಿಮಾ 2022ರ ಆಗಸ್ಟ್ 11 ರಂದು ವರ್ಲ್ಡ್‌ವೈಡ್ ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ. ಈ ಪ್ರಾಜೆಕ್ಟ್ ಘೋಷಿಸಿದಾಗಲೇ ರಿಲೀಸ್ ದಿನಾಂಕ ಪ್ರಕಟಿಸಿದ್ದರು. ಕೋವಿಡ್ ಕಾರಣದಿಂದ ಈ ದಿನಾಂಕ ಬದಲಾಗಬಹುದು ಎಂದು ಹೇಳಲಾಯಿತು. ಆದರೀಗ ಅದೇ ದಿನಾಂಕ ನಾವು ಬರಲು ಸಿದ್ಧರಿದ್ದೇವೆ ಎಂದು ಚಿತ್ರತಂಡ ಘೋಷಿಸಿದೆ.

ಪ್ರಭಾಸ್ ಚಿತ್ರದ ಎದುರು ರಕ್ಷಾ ಬಂಧನ್?

ಪ್ರಭಾಸ್ ಚಿತ್ರದ ಎದುರು ರಕ್ಷಾ ಬಂಧನ್?

'ಆದಿಪುರುಷ್' ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಇಂತಹ ಮೆಗಾ ಚಿತ್ರದ ಬಿಡುಗಡೆಯಂದೇ ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಚಿತ್ರ ರಿಲೀಸ್ ಆಗುತ್ತಿದೆ. ಆಗಸ್ಟ್ 11ಕ್ಕೆ ರಕ್ಷಾ ಬಂಧನ್ ಚಿತ್ರ ಚಿತ್ರಮಂದಿರಕ್ಕೆ ಲಗ್ಗೆಯಿಡಲಿದೆ. ಈ ಕುರಿತು ಸ್ವತಃ ನಿರ್ಮಾಪಕರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದಕ್ಕೂ ಮುಂಚೆ ಈ ಚಿತ್ರ 2021ರ ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಹೊಸ ದಿನಾಂಕ ಕಂಡುಕೊಂಡಿದೆ. ಆನಂದ್ ಎಲ್ ರೈ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಭೂಮಿ ಪಡ್ನೆಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ರಜೆಯ ಲೆಕ್ಕಾಚಾರ

ರಜೆಯ ಲೆಕ್ಕಾಚಾರ

ಆದಿಪುರುಷ್ ಮತ್ತು ರಕ್ಷಾ ಬಂಧನ್ ಎರಡು ಚಿತ್ರಗಳು ಆಗಸ್ಟ್ ಎರಡನೇ ವಾರದಲ್ಲಿ ರಿಲೀಸ್ ಆಗುತ್ತಿದೆ. ಆಗಸ್ಟ್ 11 ಅಂದ್ರೆ ಗುರುವಾರ ಎರಡು ಚಿತ್ರವೂ ಬಿಡುಗಡೆಯಾಗಲಿದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ವೀಕೆಂಡ್ ರಜೆ ಸಿಗಲಿದೆ. ಜೊತೆಗೆ ಆಗಸ್ಟ್ 15 ಸ್ವಾತಂತ್ರ ದಿನಾಚರಣೆಯ ರಜೆಯೂ ಇರಲಿದೆ. ಹೀಗಾಗಿ, ಮೊದಲ ಐದು ದಿನದ ಲೆಕ್ಕಾಚಾರದಲ್ಲಿ ಈ ಎರಡು ಚಿತ್ರಗಳು ಥಿಯೇಟರ್‌ಗೆ ಬರ್ತಿದೆ.

ಶ್ರೀರಾಮ ಪ್ರಭಾಸ್, ರಾವಣ ಸೈಫ್

ಶ್ರೀರಾಮ ಪ್ರಭಾಸ್, ರಾವಣ ಸೈಫ್

ಓಂ ರಾವುತ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿಹಾಗೂ ಕೃತಿ ಸನೂನ್ ಸೀತೆಯಾಗಿ ಅಭಿನಯಿಸುತ್ತಿದ್ದಾರೆ. ಭೂಷಣ್ ಕುಮಾರ್, ಟಿ-ಸಿರೀಸ್‌ನ ಕೃಷ್ಣ ಕುಮಾರ್ ಮತ್ತು ಓಂ ರಾವುತ್, ಪ್ರಸಾದ್ ಸುತಾರ್ ಮತ್ತು ರೆಟ್ರೊಫೈಲ್ಸ್ ನ ರಾಜೇಶ್ ನಾಯರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ 400-450 ಕೋಟಿ ಬಜೆಟ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಆದಿಪುರುಷ್ ಚಿತ್ರಕ್ಕೂ ಮುಂಚೆ ಪ್ರಭಾಸ್ ನಟನೆಯ ಸಲಾರ್, ರಾಧೆಶ್ಯಾಮ್ ಚಿತ್ರಗಳು ರಿಲೀಸ್ ಆಗಲಿದೆ.

More from Filmibeat

English summary
The highly anticipated PAN India biggie Adipurush to hit the BIG screens on 11 Aug 2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X