Adipurush Trailer Twitter Review: ತೆರೆಮೇಲೆ ರಾಮನಾಗಿ ಪ್ರಭಾಸ್‌ನ ನೋಡಿದವರು ಏನಂದ್ರು?
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ಟ್ರೈಲರ್ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಕೆಲವೆಡೆ ಥಿಯೇಟರ್‌ಗಳಲ್ಲಿ ದೃಶ್ಯಕಾವ್ಯದ ಝಲಕ್ ನೋಡಿದವರು ಫಿದಾ ಆಗಿದ್ದಾರೆ. ಹೈದರಾಬಾದ್‌ನ ಎಎಂಬಿ ಸಿನಿಮಾಸ್‌ನಲ್ಲಿ ನಡೆದ ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಯಂಗ್ ರೆಬಲ್ ಸ್ಟಾರ್ ಕೂಡ ಭಾಗಿ ಆಗಿದ್ದರು. ಅಭಿಮಾನಿಗಳಂತೂ ತೆರೆಮೇಲೆ ನೆಚ್ಚಿನ ನಟನನ್ನು ಶ್ರೀರಾಮನ ಅವತಾರದಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆ ತಪ್ಪುಗಳನ್ನೆಲ್ಲಾ ಸರಿಪಡಿಸಿಕೊಂಡು ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೀತಿದೆ. ಟೀಸರ್‌ಗಿಂತ ಟ್ರೈಲರ್ ಚೆನ್ನಾಗಿದೆ ಎಂದು ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ. ಚಿತ್ರದಲ್ಲಿ ರಾಮನಾನಿ ಪ್ರಭಾಸ್ ನಟಿಸಿದ್ರೆ, ಸೀತೆಯಾಗಿ ಕೃತಿ ಸನೂನ್, ರಾವಣನಾಗಿ ಸೈಫ್ ಅಲಿಖಾನ್, ಲಕ್ಷ್ಮಣನಾಗಿ ಸನ್ನಿಸಿಂಗ್, ಹನುಮಂತನಾಗಿ ದೇವದತ್ತ ನಟಿಸಿದ್ದಾರೆ.

ರಾಮಾಯಣ ಕಾವ್ಯ ಸಾಕಷ್ಟು ಜನರಿಗೆ ಗೊತ್ತೇಯಿದೆ. ಅದನ್ನು ಇವತ್ತಿನ ತಂತ್ರಜ್ಞಾನ ಬಳಸಿ ಬಹಳ ಅದ್ಧೂರಿಯಾಗಿ ಕಟ್ಟಿಕೊಡಲಾಗಿದೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ತ್ರೀಡಿ ಕನ್ನಡದಲ್ಲಿ ಬಿಗ್‌ಸ್ಕ್ರೀನ್‌ನಲ್ಲಿ ನೋಡುವುದಕ್ಕಾಗಿ ಈ ಸಿನಿಮಾ ಮಾಡಿರೋದು. ಹಾಗಾಗಿ ಟ್ರೈಲರ್‌ನ ಕೂಡ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡುವುದಕ್ಕು ಮುನ್ನ ಅಭಿಮಾನಿಗಳಿಗೆ ಥಿಯೇಟರ್‌ಗಳಲ್ಲಿ ಪ್ರದರ್ಶಿಸಲಾಗಿದೆ.
ನಿರ್ದೇಶಕರ ಮೇಲೆ ನಂಬಿಕೆ ಇಡಿ
ವಿಕ್ಕಿ ಎನ್ನುವವರು ಟ್ವೀಟ್ ಮಾಡಿ "ಆದಿಪುರುಷ್' ಟ್ರೈಲರ್ ಚೆನ್ನಾಗಿದೆ. ರಾಮನ ಪಾತ್ರಕ್ಕೆ ಪ್ರಭಾಸ್ ಹೊಂದಿಕೊಂಡಿದ್ದಾರೆ. ಡೈಲಾಗ್ಸ್ ಅಂತೂ ಅದ್ಭುತ. ವಿಎಫ್‌ಎಕ್ಸ್ ಥಿಯೇಟರ್‌ಗಳಲ್ಲಿ ಚೆನ್ನಾಗಿ ಕಾಣಿಸುತ್ತಿದೆ. ಕಂಟೆಂಟ್ ಹಾಗೂ ಎಮೋಷನ್ ಚೆನ್ನಾಗಿ ಇರುತ್ತದೆ ಅನ್ನಿಸ್ತಿದೆ. ತಾಳ್ಮೆಯಿಂದ ನಿರ್ದೇಶಕ ಓಂ ರಾವುತ್ ಮೇಲೆ ನಂಬಿಕೆ ಇಡಿ" ಎಂದು ಬರೆದುಕೊಂಡಿದ್ದಾರೆ.
ಜೂನ್ 16ರ ತನಕ ಕಾಯಿರಿ
ಮತ್ತೊಬ್ಬರು "ಆದಿಪುರುಷ್' ಟ್ರೈಲರ್ ಅಮೋಘ. ಟೀಸರ್‌ಗಿಂತ ವಿಎಫ್‌ಎಕ್ಸ್ ಟ್ರೈಲರ್‌ನಲ್ಲಿ ಚೆನ್ನಾಗಿದೆ. ಶ್ರೀರಾಮನಾಗಿ ಪ್ರಭಾಸ್ ಅಂತೂ ಸೊಗಸಾಗಿ ಕಾಣಿಸುತ್ತಾರೆ. ಪ್ರಭಾಸ್ ನೋಡಿ ಥಿಯೇಟರ್‌ನಲ್ಲಿರುವವರು ಹುಚ್ಚೆದ್ದು ಕುಣಿತ್ತಾರೆ. ಜೂನ್ 16ರ ತನಕ ಕಾಯಿರಿ. ಬಾಕ್ಸಾಫೀಸ್ ಧೂಳಿಪಟವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬ್ಲಾಕ್‌ಬಸ್ಟರ್ ಟ್ರೈಲರ್
ಪಿಬಿ ಸೇನ ಎಂಬುವವರು "ಜಬರ್ದಸ್ತ್ ಹಿನ್ನೆಲೆ ಸಂಗೀತ ಹಾಗೂ ಡೈಲಾಗ್ಸ್ ಜೊತೆಗೆ ಕಟ್ ಮಾಡಿಡುವ ಬ್ಲಾಕ್‌ಬಸ್ಟರ್ ಟ್ರೈಲರ್. ವಿಎಫ್‌ಎಕ್ಸ್ ಓಕೆ, ಮಾಸ್ ಥಿಯೇಟರ್‌ಗಳಿಗೆ ಅಷ್ಟು ಸಾಕು, ಜಾನಕಿಯಾಗಿ ಕೃತಿ ಮಿಂಚಿದ್ಧಾರೆ. ಪರಾಕ್ರಮ ರಾಮನಾಗಿ ಪ್ರಭಾಸ್ ಬಹಳ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಓಂ ರಾವುತ್ ಅವರ ರಾಘವನನ್ನು ಬೇರೆ ವರ್ಷನ್‌ಗಳ ಜೊತೆ ಹೋಲಿಸಿಕೊಳ್ಳಬೇಡಿ ಎಂದು ಬರೆದಿಕೊಂಡಿದ್ದಾರೆ.
ಸಿನಿಮಾಗಾಗಿ ಕಾಯ್ತಿದ್ದೀನಿ
ಕುಮಾರ್ ಸ್ವಯಂ ಟ್ವೀಟ್ ಮಾಡಿ "ಟ್ರೈಲರ್ ಚೆನ್ನಾಗಿದೆ. ಪ್ರಭಾಸ್ ಲುಕ್ಸ್ ಕೂಡ ಚೆನ್ನಾಗಿದೆ. ಇನ್ನುಳಿದಂತೆ ಅದರಲ್ಲೂ ಮುಖ್ಯವಾಗಿ ಸನ್ನಿಸಿಂಗ್ ಪಾತ್ರಕ್ಕೆ ಹೊಂದಿಕೆಯಾಗಿದ್ದಾರೆ. ಬಿಜಿಎಂ ಪರಿಣಾಮಕಾರಿಯಾಗಿದೆ. ಡೈಲಾಗ್ಸ್ ಚೆನ್ನಾಗಿದೆ. ಬೇಕಾದ ಫೀಲ್ ಕೂಡ ಇದೆ. ವಿಎಫ್‌ಎಕ್ಸ್ ಕೆಲವೆಡೆ ಚೆನ್ನಾಗಿಲ್ಲ. ಆದರೂ ಕೂಡ ಟೀಸರ್‌ಗಿಂತ ಪರವಾಗಿಲ್ಲ. ಸಿನಿಮಾ ನೋಡಲು ಕಾಯುತ್ತಿದ್ದೇನೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೈವಿಕ ಅನುಭವ ನೀಡುತ್ತದೆ
ಇನ್ನೊಬ್ಬರು "ಆದಿಪುರುಷ್ ಟ್ರೈಲರ್‌ಗೆ 5ಕ್ಕೆ 5 ಅಂಕ. ನಿಜಕ್ಕೂ ನೋಡೋಕೆ ಅದ್ಭುತ ಅನುಭವ ನೀಡುತ್ತದೆ. ಓಂ ರಾವುತ್ ಬಹಳ ಚೆನ್ನಾಗಿ ಕತೆ ಹೇಳುತ್ತಾರೆ. ರಾಮನಾಗಿ ಪ್ರಭಾಸ್ ಆಯ್ಕೆ ಉತ್ತಮವಾಗಿದೆ. ಇಡೀ ಟ್ರೈಲರ್ ದೈವಿಕ ಅನುಭವ ನೀಡುತ್ತದೆ. ಸಿಜಿ, ವಿಎಫ್‌ಎಕ್ಸ್ ವರ್ಕ್ ಓಕೆ" ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆ ಆದಿಪುರುಷ್ ಟ್ರೈಲರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಆದರೂ ಕೂಡ ವಿಎಫ್ಎಕ್ಸ್ ಬಗ್ಗೆ ಬೇಸರ ವ್ಯಕ್ತವಾಗುತ್ತಿದೆ. ಜೂನ್ 16ಕ್ಕೆ ವಿಶ್ವದಾದ್ಯಂತ ಸಾವಿರಾರು ಸ್ಕ್ರೀನ್‌ಗಳಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











