ಇವರು ಅವರೇನಾ ? ವರ್ಷಗಳ ಹಿಂದೆ ಹೀಗಿದ್ದ ಆದಿತಿ ರಾವ್ ಹೈದರಿ ಹೀಗಾಗಿದ್ದು ಹೇಗೆ..?
ಬದುಕಿನಲ್ಲಿ ಅನೇಕ ವಿಚಿತ್ರ ತಿರುವುಗಳು ಬರುತ್ತವೆ. ಅವುಗಳನ್ನ ನಿರ್ಲಕ್ಷಿಸದೇ ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಬದುಕು ಬದಲಾಗುತ್ತದೆ. ಇದಕ್ಕೆ ಆದಿತಿ ರಾವ್ ಹೈದರಿ ಸದ್ಯದ ನಿದರ್ಶನ
ಹೌದು. ಆದಿತಿ ರಾವ್ ಹೈದರಿ .. ಕೇವಲ 21ರ ಪ್ರಾಯದಲ್ಲಿಯೇ ಮದುವೆಯಾದ ಚೆಲುವೆ. ಮನೆ-ಗಂಡ ಎಂದು ಸಂಸಾರದ ಸಾಗರದಲ್ಲಿ ಮುಳುಗುತ್ತಿದ್ದ ಆದಿತಿಯನ್ನ ದಡಕ್ಕೆ ಕರೆತಂದಿದ್ದು ಬದುಕಿನ ಇದೇ ವಿಚಿತ್ರ ತಿರುವುಗಳು. ಗಂಡ ಸತ್ಯದೀಪ್ ಅವರಿಂದ ದೂರವಾದ ಆದಿತಿ ಆ ನಂತರ ಸೀದಾ ಬಂದಿದ್ದು ಬಣ್ಣದ ಪ್ರಪಂಚಕ್ಕೆ. ಮಲಯಾಳಂ ಚಿತ್ರದ ಮೂಲಕ ರೆಕ್ಕೆ ಕಟ್ಟಿಕೊಂಡು ಹಾರಲು ಶುರು ಮಾಡಿದ ಆದಿತಿ ರಾವ್ ಹೈದರಿ ಇವತ್ತು ಉತ್ತರದಿಂದ- ದಕ್ಷಿಣದವರೆಗೆ ಚಿರಪರಿಚಿತ.

ಇನ್ನೂ ಆದಿತಿ ರಾವ್ ಹೈದರಿಯನ್ನ ಮೊನ್ನೆ ಬಿಡುಗಡೆಯಾದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಾಮಂಡಿ ವೆಬ್ ಸರಣಿಯಲ್ಲಿ ನೋಡುವುದೇ ಹಿತವಾದ ಅನುಭವ. ಅದರಲ್ಲಿಯೂ ಚಿತ್ರದಲ್ಲಿನ ಇವರ ಗಜಗಾಮಿನಿ ನಡಿಗೆಗೆ ಮನ ಸೋಲದವರಿಲ್ಲ.
ಇಂಥ ಆದಿತಿ ರಾವ್ ಹೈದರಿಯ ಗತಕಾಲದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಫೋಟೋ ನೋಡಿದರೆ ನಿಜಕ್ಕೂ ಇದು ಆದಿತಿ ರಾವ್ ಹೈದರಿನೇನಾ ಅನ್ನುವ ಅನುಮಾನ ಮೂಡುವುದು ಖಚಿತ. ಯಾಕೆಂದರೆ ಆ ಆದಿತಿ ರಾವ್ ಹೈದರಿ ಮತ್ತು ಈ ಆದಿತಿ ರಾವ್ ಹೈದರಿ ನಡುವೆ ಅಜಗಜಾಂತರ ವ್ಯತ್ಯಾಸ ಇದೆ.

ಆ ಕಾಲದ ಫೋಟೋದಲ್ಲಿ ಬಬ್ಲಿ & ಹೋಮ್ಲಿಯಾಗಿ ಕಾಣಿಸುವ ಆದಿತಿ ರಾವ್ ಹೈದರಿ, ಈಗ ಬಳುಕುವ ಬಳ್ಳಿಯಂತೆ ಇದ್ದಾರೆ. ಇನ್ನೂ ಅಂದು ಮತ್ತು ಇಂದಿನ ಮುಖಚಹರೆಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗಿವೆ. ಈ ಕಾರಣಕ್ಕೆ ಬೆಕ್ಕಸ ಬೆರಗಾಗಿರುವ ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು ಆದಿತಿ ರಾವ್ ಹೈದರಿಯ ಅಂದಿನ ಮತ್ತು ಇಂದಿನ ಫೋಟೋವನ್ನ ಅಕ್ಕ-ಪಕ್ಕ ಇಟ್ಟು ಈಗ ಹೋಲಿಕೆ ಮಾಡಲು ಶುರು ಮಾಡಿದ್ದಾರೆ. ಈ ಫೋಟೋಗಳಲ್ಲಿರುವ ವ್ಯತ್ಯಾಸಗಳನ್ನ ಗುರುತಿಸಿ ಎಂದು ಬುದ್ದಿವಂತಿಕೆಗೆ ಸವಾಲು ಹಾಕುತ್ತಿದ್ದಾರೆ. ನಿಜಾ ಹೇಳಿ ಆದಿತಿ ಇದು ನೀವೇನಾ ಎಂಬ ಪ್ರಶ್ನೆಯನ್ನೂ ಕೂಡ ನೇರಾನೇರವಾಗಿಯೇ ಕೇಳುತ್ತಿದ್ದಾರೆ.
ಇನ್ನೂ ಕೆಲವರು ಆದಿತಿ ರಾವ್ ಹೈದರಿಯ ರೂಪ ಬದಲಾಗಲು ಪ್ಲ್ಯಾಸ್ಟಿಕ್ ಸರ್ಜರಿ ಕಾರಣ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ನಾಯಕಿಯಾಗುವ ಆಸೆ ಮತ್ತು ಕನಸು ಆದಿತಿ ರಾವ್ ಹೈದರಿಯ ಸಹಜ ಸೌಂದರ್ಯವನ್ನೇ ಹಾಳು ಗೆಡವಿದೆ ಎಂಬ ವಾದವನ್ನೂ ಮಾಡುತ್ತಿದ್ದಾರೆ.
ಹಣ ಇದ್ದರೆ ಈ ಕಾಲದಲ್ಲಿ ಯಾವುದು ಅಸಾಧ್ಯ ಅಲ್ಲ ಅನ್ನುವುದಕ್ಕೂ ಕೂಡ ಆದಿತಿ ರಾವ್ ಹೈದರಿಯ ಈ ಬದಲಾದ ಅವತಾರವೇ ಅತ್ಯುತ್ತಮ ಉದಾಹರಣೆ ಎಂದು ಕೂಡ ಹೇಳುತ್ತಿರುವ ಅನೇಕರು, ವ್ಯಾಯಾಮದಿಂದ.. ಪಥ್ಯದಿಂದ.. ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು ಹೊರತು ಮೂಗಿನ ಆಕಾರವನ್ನ ಸಹಜವಾಗಿ ಬದಲಿಸಿಕೊಳ್ಳಲು ಸಾಧ್ಯವೇ ಇಲ್ಲ ಅನ್ನುತ್ತಿದ್ದಾರೆ. ಯಾರಲ್ಲಿ ಆದರೂ ಅನುಮಾನ ಇದ್ದರೆ ಚರ್ಚೆಗೆ ಬನ್ನಿ ಎಂದು ಸವಾಲನ್ನೂ ಹಾಕುತ್ತಿದ್ದಾರೆ
ಒಟ್ನಲ್ಲಿ ಸದ್ಯಕ್ಕೆ ಆದಿತಿ ರಾವ್ ಹೈದರಿಯ ಹಳೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಚರ್ಚೆಯನ್ನೂ ಈ ಫೋಟೋಗಳು ಹುಟ್ಟು ಹಾಕಿವೆ. ನಿಜಕ್ಕೂ ಆದಿತಿ ರಾವ್ ಹೈದರಿ ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ..? ಉತ್ತರ ಆ ದೇವರಿಗೆ ಗೊತ್ತು


Click it and Unblock the Notifications











