ಮದುವೆ ಮುರಿದು ಬಿದ್ದಿದೆ ಅಷ್ಟೇ ; ಮೊದಲ ಪತಿಯ ಬಗ್ಗೆ ಸಿದ್ದಾರ್ಥ್‌ನ ಸುಂದರಿ ಆದಿತಿ ಹೇಳಿದ್ದೇನು..?

ಬಣ್ಣದ ಲೋಕದಲ್ಲಿ ಪ್ರೀತಿ ಹುಟ್ಟುವುದು ಗೊತ್ತಾಗಲ್ಲ. ಪ್ರೀತಿ ಕೊನೆಯುಸಿರೆಳೆಯುವುದು ಗೊತ್ತಾಗಲ್ಲ. ಇಲ್ಲಿ ಇವತ್ತು ''ಹಮ್ ಸಾಥ್ ಸಾಥ್ ಹೈ'' ಅನ್ನುವವರು, ಮಾರನೇ ದಿನ ''ಹಮ್ ಆಪ್ಕೇ ಹೈ ಕೌನ್'' ಎಂದು ಬಿಡುತ್ತಾರೆ. ''ನಾನೊಂದು ತೀರ.. ನೀನೊಂದು ತೀರ.. ಮನಸು ಮನಸು ದೂರಾ, ಪ್ರೀತಿ ಹೃದಯ ಭಾರ'' ಎಂದು ಹಾಡು ಹಾಡುತ್ತಾ ಹೊರಟು ಬಿಡುತ್ತಾರೆ. ಹಾಗಂಥ ದೂರವಾದವರು ಮತ್ಯಾವತ್ತು ಮುಖಾಮುಖಿಯಾಗುವುದೇ ಇಲ್ಲ.. ಮಾತನಾಡುವುದೇ ಇಲ್ಲ ಅಂತಲ್ಲ. ಸಮಯ ಸಂದರ್ಭ ಬಂದಾಗ ಎದುರು ಬದುರಾಗ್ತಾರೆ. ಮನ ಬಿಚ್ಚಿ ಮಾತನಾಡುತ್ತಾರೆ. ''ಪ್ರೇಮ''ದ ಬದಲು ತಮ್ಮ ಸಂಬಂಧಕ್ಕೆ ''ಸ್ನೇಹ''ದ ಹೆಸರನ್ನಿಟ್ಟು ಬದುಕಿನಲ್ಲಿ ಮುಂದುವರೆಯುತ್ತಾರೆ. ಇದಕ್ಕೆ ''ಆದಿತಿ ರಾವ್ ಹೈದರಿ'' ಸದ್ಯದ ಉದಾಹರಣೆ.

ಹೌದು, ಕಳೆದ ಕೆಲ ದಿನಗಳಿಂದ ''ಆದಿತಿ ರಾವ್ ಹೈದರಿ'' ಹಾಗೂ ''ಸಿದ್ಧಾರ್ಥ್'' ನಿಶ್ಚಿತಾರ್ಥದ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಶುಭಾಶಯಗಳ ಮಹಾಪೂರ ಕೂಡ ಹರಿದು ಬರುತ್ತಿದೆ. ಇನ್ನೂ ''ಮೊಸರಲ್ಲಿ ಕಲ್ಲು ಹಾಗೂ ದೇವರಲ್ಲಿ ತಪ್ಪು'' ಹುಡುಕುವ ಕಾಲ ಇದು. ಈ ಕಾಲಘಟ್ಟದಲ್ಲಿ ಕೆಲವರು ''ಆದಿತಿ ರಾವ್ ಹೈದರಿ ಹಾಗೂ ಸಿದ್ಧಾರ್ಥ್'' ಅವರನ್ನ ಕೆಟ್ಟಾ ಕೊಳಕಾಗಿ ನಿಂದಿಸುತ್ತಿದ್ದಾರೆ. ಕೆಲವರು ''ಟ್ರೋಲ್'' ಕೂಡ ಮಾಡುತ್ತಿದ್ದಾರೆ. ಇಬ್ಬರಿಗೂ ಇದು ''ಎರಡನೇ ಮದುವೆ'' ಅನ್ನುವುದು ಇದಕ್ಕೆ ಕಾರಣ. ಇರಲಿ.. ವಿಷಯ ಅದಲ್ಲ. ಸದ್ಯದ ವಿಷಯ ಏನೆಂದರೆ, ಹಿಂದೊಮ್ಮೆ ಆದಿತಿ ರಾವ್ ಹೈದರಿ ತಮ್ಮ ''ಮದುವೆ'' ಹಾಗೂ ''ವಿಚ್ಚೇದನ''ದ ಬಗ್ಗೆ ಹಂಚಿಕೊಂಡಿದ್ದ ಮನದ ಮಾತುಗಳು ಅನೇಕರ ಕಿವಿಗಳಿಗೆ ಈಗ ತಲುಪುತ್ತಿವೆ.

Aditi Rao Who Got Engaged To Siddarth Spoke About Her Failed Marriage With Satyadeep Mishra

ಯೆಸ್, ಹಿಂದೊಮ್ಮೆ ''ಸಂದರ್ಶನ''ವೊಂದರಲ್ಲಿ ಮಾತನಾಡಿದ್ದ ಆದಿತಿ ರಾವ್ ಹೈದರಿ, ನಾನು ''ಸತ್ಯದೀಪ್'' ಜೊತೆ ''ಸಪ್ತಪದಿ'' ತುಳಿದಾಗ, ನನಗೆ ಆಗಿನ್ನೂ ''21'' ವಯಸ್ಸಾಗಿತ್ತಷ್ಟೇ ಎಂದಿದ್ದರು. ನಾನು ಕಂಡಿದ್ದ ಕನಸುಗಳೆಲ್ಲ ಅಷ್ಟೇ ಬೇಗ ''ನುಚ್ಚು ನೂರಾದವು'' ಎಂದು ಹೇಳಿದ್ದರು. ಇನ್ನೂ ಆಗ ''ಸತ್ಯದೀಪ್'' ಇನ್ನೂ ಚಿತ್ರರಂಗಕ್ಕೆ ಬಂದಿರಲಿಲ್ಲ. ಬದುಕಿನ ಬಂಡಿಯನ್ನ ಎಳೆಯಲು ''ವಕೀಲ''ರಾಗಿದ್ದರು. ಆದರೆ ಆ ನಂತರ ''ಬಣ್ಣದ ಹುಚ್ಚು'', ವಕೀಲಿ ವೃತ್ತಿಗೆ ಸತ್ಯದೀಪ್ ಗೋಲಿ ಹೊಡೆದರು. ಈ ಕಡೆ ಬಂದರು ಎಂದಿದ್ದರು ಆದಿತಿ.

Aditi Rao Who Got Engaged To Siddarth Spoke About Her Failed Marriage With Satyadeep Mishra

ನಿಜಾ.. ಮದುವೆಯ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ನಾವೂ ದೂರವಾದೆವು. ಆದರೆ ''ಮುರಿದು'' ಬಿದ್ದಿದ್ದು ''ಸತಿ-ಪತಿ'' ಅನ್ನುವ ಸಂಬಂಧವಷ್ಟೇ ಹೊರತು, ''ಸ್ನೇಹ'' ಅಲ್ಲ ಎಂದು ಹೇಳಿದ್ದ ಆದಿತಿ ರಾವ್ ಹೈದರಿ, ಇವತ್ತು ಕೂಡ ನಾನು ಹಾಗೂ ಸತ್ಯದೀಪ್ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ, ಆಗಾಗ ಭೇಟಿಯಾಗುತ್ತೇವೆ, ಹರಟೆ ಹೊಡೆಯುತ್ತೇವೆ ಎಂದು ಕೂಡ ಹೇಳಿದ್ದರು. ಇನ್ನೂ ಸತ್ಯದೀಪ್ ಅವರ ತಾಯಿಗೆ ನಾನು ಇವತ್ತು ಕೂಡ ಮಗಳು, ನನ್ನ ತಾಯಿಗೆ ಸತ್ಯದೀಪ್ ಇವತ್ತು ಕೂಡ ಮಗ ಎಂದು ತಮ್ಮ ಮನದ ಮಾತನ್ನ ಹಂಚಿಕೊಂಡಿದ್ದರು ಆದಿತಿ. ಈ ಎಲ್ಲ ಮಾತುಗಳಿಗೆ ಪೂರಕವಾಗಿ ಕಳೆದ ವರ್ಷ ಸತ್ಯದೀಪ್ ಎರಡನೇ ಮದುವೆಯಾದಾಗ ಆದಿತಿ ರಾವ್ ಹೈದರಿ ತಮ್ಮ ಮೊದಲ ಪತಿಗೆ ಮನಸಾರೆ ಶುಭಾಶಯವನ್ನ ಕೋರಿದ್ದರು ಆದಿತಿ ರಾವ್ ಹೈದರಿ

Aditi Rao Who Got Engaged To Siddarth Spoke About Her Failed Marriage With Satyadeep Mishra

ಆದಿತಿ ರಾವ್ ಈ ಹಿಂದೆ ಹೇಳಿದ್ದ ಈ ಮಾತುಗಳ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಸಿದ್ದಾರ್ಥ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಆದಿತಿ ಹಸೆಮಣೆ ಏರುವುದು ಯಾವಾಗ ಅನ್ನುವ ಪ್ರಶ್ನೆ ಅನೇಕರಿಗೆ ಕಾಡುತ್ತಿದೆ. ಮಿಕ್ಕಂತೆ ಆದಿತಿ ರಾವ್ ಹೈದರಿ ತಮ್ಮ ಹೀರಾಮಂಡಿ ವೆಬ್ ಸರಣಿಯ ಬಿಡುಗಡೆಯ ದಿನವನ್ನ ಎದುರು ನೋಡುತ್ತಿದ್ದಾರೆ. ಸಿದ್ಧಾರ್ಥ್ ಸಿನಿಮಾ ಹಾಗೂ ರಾಜಕೀಯ ಎಂಬ ಎರಡು ದೋಣಿಯ ಮೇಲೆ ಕಾಲಿಟ್ಟಿದ್ದಾರೆ.

More from Filmibeat

English summary
Post Engagement An old interview of Actress Aditi Rao Hydari Surfaced online where actress spoke about her failed first marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X