For Quick Alerts
  ALLOW NOTIFICATIONS  
  For Daily Alerts

  30,000 ಸಿನಿ ಕಾರ್ಮಿಕರಿಗೆ ಉಚಿತ ಲಸಿಕೆ: ಆದಿತ್ಯ ಚೋಪ್ರಾ ಭರವಸೆ

  |

  'ಯಶ್ ಚೋಪ್ರಾ ಫೌಂಡೇಶನ್' ವತಿಯಿಂದ ಹಿಂದಿ ಸಿನಿಮಾ ಕಾರ್ಮಿಕರಿಗೆ ಉಚಿತವಾಗಿ ಲಸಿಕೆ ಹಾಕಿಸುವುದಾಗಿ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ ಹೇಳಿದ್ದಾರೆ.

  ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿಮಾ ಎಂಪ್ಲೋಯಿಸ್ ಸಂಸ್ಥೆಯಲ್ಲಿ ನೊಂದಾವಣಿ ಮಾಡಿಕೊಂಡಿರುವ 30,000 ಕ್ಕೂ ಹೆಚ್ಚು ಸಿನಿಮಾ ಕಾರ್ಮಿಕರಿಗೆ ಲಸಿಕೆಗೆ ತಗಲುವ ಪೂರ್ಣ ವೆಚ್ಚವನ್ನು ಭರಿಸುವುದಾಗಿ ಆದಿತ್ಯ ಹೇಳಿದ್ದಾರೆ.

  ಯಶ್ ರಾಜ್ ಫೌಂಡೇಶನ್ ವತಿಯಿಂದ ಮಹಾರಾಷ್ಟ್ರ ಸಿಎಂ ರಾಜ್ ಠಾಕ್ರೆಗೆ ಪತ್ರ ಬರೆದಿದ್ದು, 'ಸಿನಿಮಾ ಕಾರ್ಮಿಕರಿಗಾಗಿ ಲಸಿಕೆಯನ್ನು ಖರೀದಿಸಲು ಅನುಮತಿ ಕೊಡಬೇಕು. ಹಾಗೂ ಸಿನಿಮಾ ಕಾರ್ಮಿಕರಿಗೆ ಪ್ರತ್ಯೇಕವಾಗಿ ಲಸಿಕೆ ಹಾಕಲು ಅವಕಾಶ ಕೊಡಬೇಕು' ಎಂದು ಮನವಿ ಮಾಡಲಾಗಿದೆ.

  ಪತ್ರದಲ್ಲಿ, 'ಸಿನಿ ಕಾರ್ಮಿಕರಿಗೆ ಲಸಿಕೆಯನ್ನು ಖರೀದಿಸಲು ಯಶ್ ರಾಜ್ ಫೌಂಡೇಶನ್‌ಗೆ ಅವಕಾಶ ಮಾಡಿಕೊಡಬೇಕು. ಲಸಿಕೆ ಹಾಕಲು ತಗಲಬಹುದಾದ ಇತರೆ ವೆಚ್ಚಗಳಾದ ಜಾಗೃತಿ ಮೂಡಿಸುವಿಕೆ, ಲಸಿಕೆ ಸಾಗಾಟದ ವೆಚ್ಚ, ಲಸಿಕೆ ಹಾಕಲು ಸೂಕ್ತ ವ್ಯವಸ್ಥೆ ನಿರ್ಮಾಣ, ಲಸಿಕೆ ದಾಸ್ತಾನು ಇನ್ನಿತರೆ ವೆಚ್ಚಗಳನ್ನು ಸಹ ಯಶ್ ಫೌಂಡೇಶನ್ ಭರಿಸಲಿದೆ' ಎಂದು ಹೇಳಿದೆ.

  ಯಶ್ ರಾಜ್ ಫೌಂಡೇಶನ್ ವತಿಯಿಂದ ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿಮಾ ಎಂಪ್ಲೋಯಿಸ್ ಸಂಸ್ಥೆಯ ಅಧ್ಯಕ್ಷ ಅಕ್ಷಯ್ ವಿಧಾನಿ ಅವರಿಗೂ ಈ ಬಗ್ಗೆ ಪತ್ರ ರವಾನಿಸಲಾಗಿದ್ದು, ದಿನದ ಬಹುಸಮಯ ಕೆಲಸದಲ್ಲಿ ಕಳೆವ ಸಿನಿ ಕಾರ್ಮಿಕರು ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಹಾಕಿಸುವುದು ಕಷ್ಟದ ಕಾರ್ಯ ಹಾಗಾಗಿ ಒಟ್ಟಿಗೆ ಲಸಿಕೆ ಹಾಕಿಸಲು ಅಭಿಯಾನದ ಮಾದರಿ ಯೋಜನೆ ಇದು ಎಂದು ಹೇಳಿದೆ ಯಶ್ ರಾಜ್ ಫೌಂಡೇಶನ್.

  ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಉಚಿತವಾಗಿ ಹಾಕಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಹಣ ನಿಗದಿ ಪಡಿಸಲಾಗಿದೆ.

  Corona ರೋಗಿಗಳಿಗೆ 300 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ Kichcha Sudeep ಚಾರಿಟೇಬಲ್ ಸೊಸೈಟಿ

  ಬಾಲಿವುಡ್‌ನ ಹಲವು ಮಂದಿ ನಟ-ನಟಿಯರು, ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು ಕೋವಿಡ್‌ಗೆ ಕೆಲವೇ ದಿನಗಳಲ್ಲಿ ಬಲಿಯಾಗಿದ್ದಾರೆ. ಹಲವಾರು ಖ್ಯಾತ ನಟ-ನಟಿಯರು ಕೋವಿಡ್‌ ಸೋಂಕಿತರಾಗಿ ನಂತರ ಗುಣಮುಖರಾಗಿದ್ದಾರೆ.

  English summary
  Producer Aditya Chopra to sponsor free COVID 19 for 30,000 film workers. Wrote letter to Maharashtra CM asking permission to purchase vaccine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X