ಆದಿತ್ಯ ನಾರಾಯಣ್ ದುರಂಹಕಾರ ; ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದಿರುವ ಮಗ

ಶ್ರೀಮಂತಿಕೆಯ ತಿಮಿರು, ಅಮಲು, ಸ್ಟಾರ್ ಗಾಯಕನ ಮಗನೆಂಬ ದೌಲತ್ತುಗಳೆಲ್ಲ ಒಟ್ಟೊಟ್ಟಿಗೆ ಸೇರಿದರೆ ಏನಾಗುತ್ತೆ ಅನ್ನುವುದಕ್ಕೆ ಆದಿತ್ಯ ನಾರಾಯಣ್ ಜ್ವಲಂತ ಸಾಕ್ಷಿ. ಅಪ್ಪ ಉದಿತ್ ನಾರಾಯಣ್ ಹಾಕಿದ ಆಲದ ಮರಕ್ಕೆ ಜೋತು ಬಿದ್ದ, ತನ್ನಲ್ಲಿದ್ದ ಪ್ರತಿಭೆಯನ್ನೆಲ್ಲ ಗಂಟು ಮೂಟೆ ಕಟ್ಟಿ ಅಟ್ಟಕ್ಕೆಸೆದಿರುವ ಆದಿತ್ಯ ನಾರಾಯಣ್ ಇನ್ನೊಮ್ಮೆ ತನ್ನ ಪ್ರತಾಪವನ್ನ ತೋರಿಸಿದ್ದಾನೆ. ಮೊಬೈಲ್ ಎಸೆದು ದರ್ಪ ಮೆರೆದಿದ್ದಾನೆ

ಅಸಲಿಗೆ ತನ್ನ ಅಹಂಕಾರಗಳಿಂದ, ತನ್ನ ಭವಿಷ್ಯಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡಿರುವ ಆದಿತ್ಯ ನಾರಾಯಣ್ ಕೈಯಲ್ಲಿ ಹೆಚ್ಚೇನು ಕೆಲಸ ಇಲ್ಲ. ಹೆಸರಿಗೆ ರಿಯಾಲಿಟಿ ಶೋವೊಂದರ ನಿರೂಪಣೆಯನ್ನ ಸದ್ಯಕ್ಕೆ ಈತ ಮಾಡ್ತಿದ್ದಾನೆ. ಇಂಥಹ ಆದಿತ್ಯ ನಾರಾಯಣ್ ನನ್ನ ಇತ್ತೀಚೆಗೆ ಚತ್ತೀಸಗಢದ ಕಾಲೇಜ್‌ವೊಂದು ಆಹ್ವಾನಿಸಿತ್ತು. ಆಹ್ವಾನದ ಮೇರೆಗೆ ಸಂಗೀತ ಕಾರ್ಯಕ್ರಮ ನೀಡಲು ಹೋದ ಆದಿತ್ಯ ನಾರಾಯಣ್, ಇದೇ ಸಮಯದಲ್ಲಿ ಕಾರ್ಯಕ್ರಮವನ್ನ ಕಣ್ತುಂಬಿಕೊಳ್ತಿದ್ದ ಸಂಗೀತ ಪ್ರೇಮಿಯ ಮೊಬೈಲ್ ಕಿತ್ತುಕೊಂಡು ಎಸೆದಿದ್ದಾನೆ

Aditya Narayan Snatches & Throws Concert Attendees Phone

ಅಷ್ಟಕ್ಕೂ ಆ ಸಂಗೀತ ಪ್ರೇಮಿ ಅಲ್ಲಿ ಹಾಡು ಕೇಳಲು ಬಂದಿದ್ದ. ಆದಿತ್ಯ ಕಂಠದಲ್ಲಿ ಹೊರ ಹೊಮ್ಮುತ್ತಿದ್ದ 'ಡಾನ್' ಚಿತ್ರದ ಹಾಡನ್ನ ಕೇಳಿ, ಎಕ್ಸಾಯಟ್ಮೆಂಟ್ ನಲ್ಲಿ ಮೊಬೈಲ್ ತೆಗೆದು ಚಿತ್ರೀಕರಿಸುತ್ತಿದ್ದ. ಇದರಲ್ಲಿ ತಪ್ಪೇನಿದೆ..? ಆದರೆ. ಕಾರ್ಯಕ್ರಮ ನೀಡಲು ಹಣ ಪಡೆದು ಬಂದಿದ್ದ ಆದಿತ್ಯಗೆ ಇದನ್ನ ಸಹಿಸಲು ಸಾಧ್ಯವಾಗಿಲ್ಲ. ಕೂಡಲೇ ಆ ಸಂಗೀತ ಪ್ರೇಮಿ ಬಳಿ ತೆರಳಿದ ಆದಿತ್ಯ, ಆತನ ಮೊಬೈಲ್ ಕಸಿದು ಜನರತ್ತ ಎಸೆದಿದ್ದಾನೆ.

ಆದಿತ್ಯ ಮಾಡಿರುವ ಈ ಘನಂದಾರಿ ಕೆಲಸಕ್ಕೆ ಸದ್ಯಕ್ಕೆ ವ್ಯಾಪಕವಾದ ಠೀಕೆ ವ್ಯಕ್ತವಾಗ್ತಿದೆ. ಅಪ್ಪನ ದುಡ್ಡಿನಲ್ಲಿ ಬದುಕುತ್ತಿರುವ, ಏನೆಂದರೆ ಏನನ್ನೂ ಸಾಧಿಸದ ವ್ಯಕ್ತಿಗೆ ಇಷ್ಟೊಂದು ದುರಂಹಕಾರ ಇರಬಾರದು ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗ್ತಿದೆ. ಕಾರ್ಯಕ್ರಮದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

Aditya Narayan Snatches & Throws Concert Attendees Phone

ಹಿಂದೆಯೂ ರಂಪ-ರಾಮಾಯಣದಿಂದ ಸುದ್ದಿಯಾಗಿದ್ದ ಆದಿತ್ಯ

2011ರಲ್ಲಿ ಪಬ್ ವೊಂದರಲ್ಲಿ ಮಹಿಳೆಯೊಬ್ಬರಿಂದ ಕಪಾಳಮೋಕ್ಷಕ್ಕೊಳಗಾಗಿದ್ದ ಆದಿತ್ಯ, 2017ರಲ್ಲಿ ಇಂಡಿಗೋ ಏರ್ ಲೈನ್ಸ್ ಸಿಬ್ಬಂದಿ ಜೊತೆ ಖ್ಯಾತೆ ತೆಗೆದಿದ್ದ. ಆ ನಂತರ 2018ರಲ್ಲಿ ರಿಕ್ಷಾಗೆ ಕಾರನ್ನ ಗುದ್ದಿದ್ದ. ಪೊಲೀಸರ ಅತಿಥಿಯೂ ಆಗಿದ್ದ. ಆದರೆ ಆ ನಂತರ ಜಾಮೀನಿನ ಮೇಲೆ ಹೊರ ಬಂದಿದ್ದ. ಇಂಥಹ ಇತಿಹಾಸವನ್ನ ಹೊಂದಿರುವ ಆದಿತ್ಯ ಈಗ ಇನ್ನೊಮ್ಮೆ ವಿವಾದಕ್ಕೀಡಾಗಿದ್ದಾನೆ. ತನ್ನ ವರ್ತನೆಯಿಂದ ಸಂಗೀತ ಪ್ರಿಯರನ್ನ ಕೆರಳಿಸಿದ್ದಾನೆ

ಒಟ್ಟಿನಲ್ಲಿ ದುಡ್ಡು ಖರ್ಚು ಮಾಡಿ ಕರೆಸಿಕೊಂಡು ಕಾಲೇಜ್ ನ ಆಡಳಿತ ಮಂಡಳಿಗೆ ಕ್ಯಾರೇ ಅನ್ನದ ಆದಿತ್ಯ ನಾರಾಯಣ್, ಸದ್ಯಕ್ಕೆ ಇನ್ನೊಮ್ಮೆ ದೇಶವ್ಯಾಪಿ ಸುದ್ದಿಯಾಗಿದ್ದಾನೆ. ತನ್ನ ದುರಂಹಕಾರದ ವರ್ತನೆಯಿಂದ ಇನ್ನೊಮ್ಮೆ ಜನಪ್ರಿಯನಾಗಿದ್ದಾನೆ. ನಾಯಿ ಬಾಲ ಡೊಂಕೇ ಎಂಬಂತೆ ಹಳೇ ಚಾಳಿಯನ್ನೇ ಮುಂದುವರಿಸಿದ್ದಾನೆ

More from Filmibeat

English summary
Singer Aditya Narayan gets angry, throws away a fan's phone in the crowd during a live concert at Chattisgarh, netizens express disappointment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X