ನಟಿಯ ಮೇಲೆ ಅತ್ಯಾಚಾರ ಕೇಸ್: ಬಾಲಿವುಡ್ ನಟನಿಗೆ ಮಧ್ಯಂತರ ರಿಲೀಫ್

ಬಾಲಿವುಡ್ ನಟಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಎದುರಿಸುತ್ತಿರುವ ನಟ ಆದಿತ್ಯ ಪಾಂಚೋಲಿಗೆ ಮುಂಬೈ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಈ ಮೂಲಕ ಬಂಧನ ಭೀತಿಯಲ್ಲಿದ್ದ ನಟನಿಗೆ ಕೊಂಚ ರಿಲೀಫ್ ಸಿಕ್ಕಿದೆ. ಆಗಸ್ಟ್ 3ರ ವರೆಗೂ ಬಂಧಿಸುವ ಅಗತ್ಯವಿಲ್ಲ ಎಂದು ವಿಚಾರಣೆ ಬಳಿಕ ಕೋರ್ಟ್ ತಿಳಿಸಿದೆ.

ಆದಿತ್ಯ ಪಾಂಚೋಲಿ 2004 ರಿಂದ 2006ರ ವರೆಗೂ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಹಿಂದಿ ಚಿತ್ರರಂಗದ ಖ್ಯಾತ ನಟಿ ಆರೋಪ ಮಾಡಿದ್ದಾರೆ. 'ಮದ್ಯಪಾನ ಸೇವಿಸಿ ತನ್ನನ್ನು ದೈಹಿಕವಾಗಿ ಅನುಭವಿಸಲು ಪ್ರಯತ್ನಿಸಿದ್ದರು. ಕೆಲವು ಸಮಯದಲ್ಲಿ ತನ್ನ ಜೊತೆ ಸ್ನೇಹಪೂರ್ವಕವಾಗಿ ಇದ್ದ ಫೋಟೋಗಳನ್ನ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ, ದುಡ್ಡಿಗಾಗಿ ಪೀಡಿಸುತ್ತಿದ್ದ' ಎಂದು ಆ ನಟಿ ದೂರು ನೀಡಿದ್ದರು.

'ಈ ಸಂಬಂಧ ಈ ಹಿಂದೆಯೊಮ್ಮೆ ಪೊಲೀಸ್ ದೂರು ನೀಡಿದ್ದೆ. ಆ ಸಮಯದಲ್ಲಿ ಪೊಲೀಸರು ಆದಿತ್ಯ ಪಾಂಚೋಲಿ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಬಿಟ್ಟು ಕಳುಹಿಸಿದರು. ಈ ಘಟನೆ ಆದ ಬಳಿಯೂ ಆ ನಟ ತನ್ನ ಸ್ವಭಾವವನ್ನ ಬದಲಾಯಿಸಿಕೊಂಡಿಲ್ಲ. ಆತನಿಂದ ಮತ್ತೆ ಮತ್ತೆ ಬೆದರಿಕೆ ಬರುತ್ತಿದ್ದ ಕಾರಣ ನಾನು ಮತ್ತೆ ಪೊಲೀಸ್ ದೂರು ನೀಡಿದ್ದೇನೆ' ಎಂದು ಆ ನಟಿ ಉಲ್ಲೇಖಿಸಿದ್ದಾರೆ.

 Aditya Pancholi gets interim protection in rape case

ಆ ನಟಿ ನೀಡಿದ ದೂರಿನ ಅನ್ವಯ ಮುಂಬೈ ಪೊಲೀಸರು ಆದಿತ್ಯ ಪಾಂಚೋಲಿ ವಿರುದ್ಧ ಹಲವು ಸೆಕ್ಷನ್ ಗಳ ಅಡಿ ಎಫ್.ಐ.ಆರ್ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 376 (ಅತ್ಯಾಚಾರ), ಸೆಕ್ಷನ್ 378, ಸೆಕ್ಷನ್ 384 (ಸುಲಿಗೆ) ಸೇರಿದಂತೆ 341, 342, 323 ಹಾಗೂ 506 ಸೆಕ್ಷನ್ ಅಡಿ ದೂರು ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿತ್ಯ ಪಾಂಚೋಲಿ ಪ್ರತಿಕ್ರಿಯೆ ನೀಡಿದ್ದರು. ''ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದೆ. ನಾನು ತಪ್ಪು ಮಾಡಿಲ್ಲ. ಅದಕ್ಕೆ ನನ್ನ ಬಳಿ ಸಾಕ್ಷಿಗಳಿವೆ. ಎಫ್.ಐ.ಆರ್ ದಾಖಲಾದ ಬಳಿಕ ನನ್ನನ್ನು ಪೊಲೀಸರು ಸಂಪರ್ಕಿಸಿದ್ದರು. ಅವರ ವಿಚಾರಣೆಗೆ ನಾನು ಎಲ್ಲ ರೀತಿಯಲ್ಲೂ ಸ್ಪಂದಿಸಿದ್ದೇನೆ'' ಎಂದು ತಿಳಿಸಿದ್ದಾರೆ.

ಸದ್ಯ ಈ ಪ್ರಕರಣದ ವಿಚಾರಣೆ ನಡೆಸಿದ್ದ ಮುಂಬೈ ಕೋರ್ಟ್ ನಟ ಆದಿತ್ಯ ಪಾಂಚೋಲಿ ಅವರಿಗೆ ಆಗಸ್ಟ್ 3ರ ವರೆಗೂ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

More from Filmibeat

English summary
Bollywood actor Aditya Pancholi gets interim protection till August 3 from Mumbai court in rape case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X