ಸೌತ್‌ನಲ್ಲಿ ಹಿಟ್ ಆದ ಮತ್ತೊಂದು ಚಿತ್ರ ಬಾಲಿವುಡ್‌ಗೆ ಎಂಟ್ರಿ
ದಕ್ಷಿಣದ ಸಿನಿಮಾಗಳನ್ನು ರಿಮೇಕ್ ಮಾಡುವ ಟ್ರೆಂಡ್ ಬಾಲಿವುಡ್‌ನಲ್ಲಿ ಮುಂದುವರಿದಿದೆ. ಸೌತ್‌ನಲ್ಲಿ ಯಶಸ್ವಿಯಾದ ಮತ್ತೊಂದು ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ನಿರ್ಮಾಪಕರು ನಿರ್ಧರಿಸಿರುವ ವಿಚಾರ ವರದಿಯಾಗಿದೆ.
2019ರಲ್ಲಿ ತೆರೆಕಂಡಿದ್ದ 'ತಡಂ' ಚಿತ್ರ ಬಿಟೌನ್‌ನಲ್ಲಿ ತಯಾರಾಗುತ್ತಿದ್ದು, ಈ ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್ ನಟಿಸುತ್ತಿದ್ದಾರೆ. ತಮಿಳಿನಲ್ಲಿ ತೆರೆಕಂಡಿದ್ದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅರುಣ್ ವಿಜಯ್ ನಾಯಕನಾಗಿ ಅಭಿನಯಿಸಿದ್ದರು. ಅರುಣ್ ಪಾತ್ರವನ್ನು ಹಿಂದಿಯಲ್ಲಿ ಆದಿತ್ಯ ರಾಯ್ ಕಪೂರ್ ಮಾಡುತ್ತಿದ್ದಾರೆ.
ಹಿಂದಿಯಲ್ಲಿ ಭೂಷಣ್ ಕುಮಾರ್ ಮತ್ತು ಮುರಾದ್ ಖೇತಾನಿ ಜಂಟಿ ನಿರ್ಮಾಣ ಮಾಡಲಿದ್ದು, ಚೊಚ್ಚಲ ನಿರ್ದೇಶಕ ವರ್ಧನ್ ಕೇಟ್ಕರ್ ಆಕ್ಷನ್ ಕಟ್ ಹೇಳಲಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಮಾಡಿದ್ದ ಈ ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ.

ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಯೋಜಿಸಿದ್ದಾರೆ. 'ತಡಂ' ರಿಮೇಕ್ ಹೊರತುಪಡಿಸಿ, 'ಓಂ: ದಿ ಬ್ಯಾಟಲ್ ವಿತಿನ್' ಸಿನಿಮಾದಲ್ಲಿ ಆದಿತ್ಯ ರಾಯ್ ಕಪೂರ್ ಅಭಿನಯಿಸಿದ್ದಾರೆ.
'ತಡಂ' ಚಿತ್ರದ ಕುರಿತು
2019ರಲ್ಲಿ ರಿಲೀಸ್ ಆಗಿದ್ದ ತಡಂ ಚಿತ್ರವನ್ನು ಮಗಿ ತಿರುಮೇನಿ ನಿರ್ದೇಶಿಸಿದ್ದರು. ಅರುಣ್ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಾನ್ಯ ಹೋಪ್, ಸ್ಮೃತಿ ವೆಂಕಟ್, ವಿದ್ಯಾ ಪ್ರದೀಪ್ ಮುಖ್ಯ ಭೂಮಿಕೆಯಲ್ಲಿದ್ದರು.
ಒಂದು ಕೊಲೆಯ ಸುತ್ತ ತನಿಖೆ ಮಾಡುವ ಪೊಲೀಸರಿಗೆ ಇಬ್ಬರು ಶಂಕಿತರು ಸಿಕ್ತಾರೆ. ಈ ಇಬ್ಬರಲ್ಲಿ ಕೊಲೆಗಾರ ಯಾರು ಎಂದು ಪತ್ತ ಹಚ್ಚುವುದು ರೋಚಕತೆಯಿಂದ ಕೂಡಿದೆ. ವಿಮರ್ಶಾತ್ಮಕವಾಗಿ ಸಿನಿಮಾ ಮೆಚ್ಚುಗೆ ಗಳಿಸಿಕೊಂಡಿತ್ತು.


Click it and Unblock the Notifications










