For Quick Alerts
  ALLOW NOTIFICATIONS  
  For Daily Alerts

  ಆದಿತ್ಯ ರಾಯ್ ಕಪೂರ್ ನಟನೆಯಲ್ಲಿ 'ಓಂ' ಸಿನಿಮಾ ಆರಂಭ

  |

  ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಅಭಿಮಾನಿಗಳಿಗೆ ಸಿಹಿ ಸುದ್ದಿ. 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಆದಿತ್ಯ ರಾಯ್ ತಮ್ಮ ಹೊಸ ಸಿನಿಮಾ ಘೋಷಿಸಿದ್ದಾರೆ.

  ಈ ಚಿತ್ರಕ್ಕೆ 'ಓಂ' ಎಂದು ಹೆಸರಿಡಲಾಗಿದ್ದು, 'ದಿ ಬ್ಯಾಟಲ್ ವಿತಿನ್' ಎಂಬ ಅಡಿಬರಹ ಹೊಂದಿದೆ. ಅಹ್ಮದ್ ಖಾನ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಆದಿತ್ಯ ರಾಯ್ ಕಪೂರ್ ಆಕ್ಷನ್ ಅವತಾರ್ ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸುಳಿವು ನೀಡಿದ್ದಾರೆ.

  ದಕ್ಷಿಣದ ಖ್ಯಾತ ನಟನೊಂದಿಗೆ ದುಬೈನಲ್ಲಿ ದೀಪಾವಳಿ ಆಚರಿಸಿದ ಸಂಜಯ್ ದತ್ದಕ್ಷಿಣದ ಖ್ಯಾತ ನಟನೊಂದಿಗೆ ದುಬೈನಲ್ಲಿ ದೀಪಾವಳಿ ಆಚರಿಸಿದ ಸಂಜಯ್ ದತ್

  ಹಿಂದಿಯಲ್ಲಿ ಓಂ ಚಿತ್ರವನ್ನು ಕಪಿಲ್ ವರ್ಮಾ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಸಹ ನಿರ್ಮಾಪಕನಾಗಿಯೂ ಕೆಲಸ ಮಾಡಲಿದ್ದಾರೆ.

  ಮುಂದಿನ ತಿಂಗಳು ಅಂದ್ರೆ ಜನವರಿ 2021ಕ್ಕೆ ಈ ಪ್ರಾಜೆಕ್ಟ್ ಅಧಿಕೃತವಾಗಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಅಂದ್ಹಾಗೆ, ನಿರ್ದೇಶಕ ಟಿನು ವರ್ಮಾ ಅವರ ಪುತ್ರ ಕಪಿಲ್ ವರ್ಮಾ ಅವರಿಗೆ ಇದು ಚೊಚ್ಚಲ ಚಿತ್ರವಾಗಿದ್ದು, ಭಾರತದ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಯಲಿದೆ.

  ಆದಿತ್ಯ ರಾಯ್ ಕಪೂರ್ ನಟನೆಯ ಲುಡೋ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ಅನುರಾಗ್ ಬಸು ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ರಾಜ್ ಕುಮಾರ್ ರಾವ್, ಪಂಕಜ್ ತ್ರಪಾಠಿ, ಸನ್ಯಾ ಮಲ್ಹೋತ್ರ ಸೇರಿದಂತೆ ಹಲವರು ನಟಿಸಿದ್ದರು.

  ವಿರೋಧಿಸುವವರಿಗೆ ಟಾಂಗ್ ಕೊಟ್ಟ Rachita Ram | Filmibeat Kannada

  2009ರಲ್ಲಿ ಲಂಡನ್ ಡ್ರೀಮ್ಸ್ ಚಿತ್ರದ ಮೂಲಕ ಬಿಟೌನ್ ಪ್ರವೇಶಿಸಿದ ನಟ ಕಳಂಕ್ 2, ಫಿಟೂರ್, ಸಡಕ್ 2, ಆಶಿಕಿ 2, ಒಕೆ ಜಾನು, ಯೆ ಜವಾನಿ ಹೈ ದಿವಾನಿ ಮತ್ತು ಆಕ್ಷನ್ ರಿಪ್ಲೇ ಚಿತ್ರಗಳಲ್ಲಿ ನಟಿಸಿದ್ದಾರೆ.

  English summary
  Producers Zee Studios, Ahmed Khan and Shaira Khan announce new film starring Aditya Roy Kapur Titled 'Om'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X