ಹೈ ಸ್ಕೋಲ್ ನಲ್ಲೇ ಲವ್ ಬ್ರೇಕಪ್ ಮಾಡಿಕೊಂಡು ತುಂಬಾ ನೋವು ಅನುಭವಿಸಿದ್ದರಂತೆ ನಟ ಆದಿತ್ಯ

ಬಣ್ಣದ ಲೋಕದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಛೇದನದ ಬಗ್ಗೆ ಆಗಾಗ ಸುದ್ದಿಗಳನ್ನು ಕೇಳುತ್ತಲೇ ಇರುತ್ತೀರಿ. ಇಂದು ಪ್ರೀತಿಯಲ್ಲಿ ಇದ್ದವರು ನಾಳೆ ಬ್ರೇಕಪ್ ಅಂತ ಅನೌನ್ಸ್ ಮಾಡಿ ಅಚ್ಚರಿ ಮೂಡಿಸಿರುವ ಅನೇಕ ಉದಾಹರಣೆಗಳಿವೆ. ಅದರಲ್ಲೂ ಬಾಲಿವುಡ್ ನಲ್ಲಿ ಇದೆಲ್ಲ ಕಾಮನ್ ಆಗಿದೆ.

ಆದರೆ ಚಿಕ್ಕ ಮಯಸ್ಸಿನಲ್ಲೇ ಲವ್ ಮಾಡಿ ಬಳಿಕ ಬ್ರೇಕಪ್ ಮಾಡಿಕೊಂಡು ಭಾರಿ ನೋವು ಅನುಭವಿಸಿದ ಬಾಲಿವುಡ್ ನಟನ ಬಾಲ್ಯದ ಕಥೆ ಈಗ ರಿವೀಲ್ ಆಗಿದೆ. ಹಿಂದಿ ಸಿನಿಮಾರಂಗದ ಖ್ಯಾತ ನಟ, ಲವರ್ ಬಾಯ್ ಆದಿತ್ಯ ರಾಯ್ ಕಪೂರ್ ಚಿಕ್ಕ ವಯಸ್ಸಿನಲ್ಲೇ ಪ್ರೀತಿಯ ಬಲೆಯಲ್ಲಿ ಸಿಲುಕ್ಕಿದ್ದರಂತೆ. ಈ ಬಗ್ಗೆ ಸಂದರ್ಶವೊಂದರಲ್ಲಿ ನಟ ಆದಿತ್ಯ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

9ನೇ ತರಗತಿಯಲ್ಲೇ ಪ್ರೀತಿಯಲ್ಲಿ ಬಿದ್ದಿದ್ದ ಆದಿತ್ಯ

9ನೇ ತರಗತಿಯಲ್ಲೇ ಪ್ರೀತಿಯಲ್ಲಿ ಬಿದ್ದಿದ್ದ ಆದಿತ್ಯ

ಬಾಲಿವುಡ್ ನಲ್ಲಿ ಸದ್ಯ ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಯಾವ ನಟಿಯ ಜೊತೆಯೂ ಹೆಸರು ತಳುಕು ಹಾಕಿಕೊಳ್ಳದೆ, ಸದ್ಯ ತನ್ನ ಪಾಡಿಗೆ ತಾನಿರುವ ನಟ ಅದಿತ್ಯ. ಲವ್, ಗಾಸಿಪ್ ನಿಂದ ಕೊಂಚ ದೂರ ಇರುವ ಆದಿತ್ಯ ಬಾಲ್ಯದ ಲವ್ ಸ್ಟೋರಿ ರಿವೀಲ್ ಮಾಡಿದ್ದಾರೆ. 9ನೇ ತರಗತಿಯಲ್ಲೇ ಆದಿತ್ಯ ಪ್ರೇಮಪಾಶದಲ್ಲಿ ಸಿಲುಕಿದ್ದರಂತೆ.

ಲವ್ ಬ್ರೇಕಪ್ ಆಗಿ ತುಂಬಾ ನೋವು ಅನುಭವಿಸಿರುವ ಆದಿತ್ಯ

ಲವ್ ಬ್ರೇಕಪ್ ಆಗಿ ತುಂಬಾ ನೋವು ಅನುಭವಿಸಿರುವ ಆದಿತ್ಯ

ಚಿಕ್ಕ ವಯಸ್ಸಿನಲ್ಲೇ ಪ್ರೀತಿ, ಪ್ರೇಮ ಅಂತ ತಲೆಗೆ ಹಚ್ಚಿಕೊಂಡಿದ್ದ ಆದಿತ್ಯಗೆ ಆ ಪ್ರೀತಿಯನ್ನು ತುಂಬಾ ದಿನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲವಂತೆ. ಪ್ರೀತಿಸಿದ ಹುಡುಗಿಯ ಜೊತೆ ಬ್ರೇಕಪ್ ಮಾಡಿಕೊಳ್ಳುವಂತ ಪರಿಸ್ಥಿತಿ ಬಂದು, ಇಬ್ಬರು ದೂರ ದೂರ ಆದರಂತೆ. ಬಳಿಕ ಆದಿತ್ಯ ಪ್ರೀತಿಯನ್ನು ಬಿಟ್ಟಿರಲಾರದೆ ತುಂಬಾ ನೋವು ಅನುಭಿವಿಸಿದ್ದರಂತೆ. ಜಗತ್ತೇ ಮುಗಿದು ಹೋಯಿತು ಎನ್ನುಷ್ಟರ ಮಟ್ಟಿಗೆ ಆಗಿದ್ದರಂತೆ. ಬಾಲ್ಯದಲ್ಲಿ ಆದ ಪ್ರೀತಿಯ ವಿಚಾರವನ್ನು ಈಗ ಬೇಸರದಿಂದ ವಿವರಿಸಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಆದಿತ್ಯ

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಆದಿತ್ಯ

ಅಂದಹಾಗೆ ನಟ ಆದಿತ್ಯ ರಾಯ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಆದಿತ್ಯ ರಾಯ್ ತಮ್ಮ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಚಿತ್ರಕ್ಕೆ 'ಓಂ' ಎಂದು ಹೆಸರಿಡಲಾಗಿದೆ. ಅಹ್ಮದ್ ಖಾನ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಆದಿತ್ಯ ರಾಯ್ ಕಪೂರ್ ಆಕ್ಷನ್ ಅವತಾರ್ ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸುಳಿವು ನೀಡಿದ್ದಾರೆ.

2009ರಲ್ಲಿ ಚಿತ್ರರಂಗ ಪ್ರವೇಶ

2009ರಲ್ಲಿ ಚಿತ್ರರಂಗ ಪ್ರವೇಶ

2009ರಲ್ಲಿ ಲಂಡನ್ ಡ್ರೀಮ್ಸ್ ಚಿತ್ರದ ಮೂಲಕ ಬಿಟೌನ್ ಪ್ರವೇಶಿಸಿದ ಆದಿತ್ಯ 2013ರಲ್ಲಿ ತೆರೆಗೆ ಬಂದ ಆಶಿಕಿ-2 ಸಿನಿಮಾ ಮೂಲಕ ದೊಡ್ಡ ಗೆಲವು ಪಡೆದರು. ನಂತರ ಮಲಂಗ್, ಯೇ ಜವಾನಿ ಹೈ ದಿವಾನಿ, OK ಜಾನು ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

Recommended Video

ರೆಬಲ್ ಸ್ಟಾರ್ ಮೇಲಿನ ಪ್ರೀತಿಯನ್ನು ಮತ್ತೆ ಸಾಬೀತು ಪಡಿಸಿದ ಮಂಡ್ಯ ಜನ | Filmibeat Kannada
ಲುಡೋ ಸಿನಿಮಾ ರಿಲೀಸ್ ಆಗಿದೆ

ಲುಡೋ ಸಿನಿಮಾ ರಿಲೀಸ್ ಆಗಿದೆ

ಆದಿತ್ಯ ರಾಯ್ ಕಪೂರ್ ಲುಡೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇತ್ತೀಚಿಗಷ್ಟೆ ಸಿನಿಮಾ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ. ಅನುರಾಗ್ ಬಸು ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ರಾಜ್ ಕುಮಾರ್ ರಾವ್, ಪಂಕಜ್ ತ್ರಿಪಾಠಿ ಸೇರಿದಂತೆ ಹಲವರು ನಟಿಸಿದ್ದರು.

More from Filmibeat

English summary
Bollywood Actor Aditya Roy Kapur reveals his high school love story and first break up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X