Don't Miss!
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಕರ್ಕ, ಕುಂಭ, ಮೀನ ರಾಶಿಯ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ
- News
ಉದ್ಧವ್ ಠಾಕ್ರೆ ರಾಜೀನಾಮೆ; ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ
- Sports
IND vs ENG: ಮೊದಲ ಟಿ20 ಕಳೆದುಕೊಳ್ಳಲಿದ್ದಾರೆ ಕೊಹ್ಲಿ, ಪಂತ್, ಜಸ್ಪ್ರೀತ್ ಬುಮ್ರಾ; ಕಾರಣ?
- Education
CBSE Result 2022 : 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ ಯಾವಾಗ ?
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
'ಮೇಜರ್' ಸಿನಿಮಾದ ಟಿಕೆಟ್ ದರ ನಿರ್ಮಾಪಕರು ಇಳಿಸಿದ್ಯಾಕೆ ಗೊತ್ತಾ?
ಸೌತ್ ಸ್ಟಾರ್ ನಟ ಅದಿವಿ ಸೇಶ್ ಅಭಿನಯದ 'ಮೇಜರ್' ಸಿನಿಮಾ ಜೂನ್ 3 ರಂದು ದೇಶದಾದ್ಯಂತ ರಿಲೀಸ್ ಆಗಲಿದೆ. ಈಗಾಗಲೇ ಸಿನಿಮಾ ಟ್ರೈಲರ್ ಮೂಲಕ ಜನರಲ್ಲಿ ಕುತೂಹಲ ಹೆಚ್ಚಿಸಿದೆ. ಸಿನಿಮಾ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳು ವ್ಯಕ್ತವಾಗಿದೆ.
ಸದ್ಯ ಇದೇ ಸಿನಿಮಾದ ಬಗ್ಗೆ ಸಿನಿಮಾ ನಿರ್ಮಾಪಕರು ಪ್ರೇಕ್ಷಕರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಜೂನ್ 3 ರಂದು ಸಿನಿಮಾ ರಿಲೀಸ್ ಆಗಲಿದ್ದು, ಅಂದು ಎಲ್ಲಾ ಮಲ್ಟಿಪ್ಲೆಕ್ಸ್ ಹಾಗೂ ಇತರ ಥಿಯೇಟರ್ಗಳಲ್ಲಿ ಸಾಮಾನ್ಯ ಟಿಕೆಟ್ ದರ ಇರಲಿದೆ ಎಂದು ಘೋಷಿಸಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಕೈಗೆಟುಕುವ ದರದಲ್ಲಿ ಸಿನಿಮಾ ಟಿಕೆಟ್ ದರ ಇರಲಿದೆ ಎಂದು ಘೋಷಿಸಿದ್ದಾರೆ. ಅಲ್ಲದೆ ಈ ಸಿನಿಮಾ ಎಲ್ಲಾ ವರ್ಗದ ಜನರಿಗೂ ತೀರ ಹತ್ತಿರವಾಗುವ ಸಿನಿಮಾವಾಗಿದೆ. ಹೀಗಾಗಿ ಈ ಸಿನಿಮಾ ಹೆಚ್ಚಿನ ಪ್ರೇಕ್ಷಕರನ್ನು ತಲುಪಲಿದೆ ಎಂದು ಹೇಳಿದ್ದಾರೆ.
'ಸರ್ಕಾರು
ವಾರಿ
ಪಾಟ'
ಮೊದಲ
ದಿನದ
ಕಲೆಕ್ಷನ್
ಎಷ್ಟು?
ಎಲ್ಲೆಲ್ಲಿ
ಎಷ್ಟೆಷ್ಟು?
ದೇಶಕ್ಕಾಗಿ ಸೇವೆ ಸಲ್ಲಿಸುವ ಆರ್ಮಿಯ ಬಗ್ಗೆ ಸಿನಿಮಾ ಕಥಾಹಂದರವಿದ್ದು, 'ಮೇಜರ್' ಸಂದೀಪ್ ಉನ್ನಿಕೃಷ್ಣನ್ರವರ ಬಯೋಪಿಕ್ ಇಟ್ಟುಕೊಂಡೇ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಈ ಸಿನಿಮಾ ಮೂಲಕ ನಮ್ಮ ದೇಶದ ಎಲ್ಲಾ ಸೈನಿಕರಿಗೂ ಗೌರವ ಸಲ್ಲಿಸಿದಂತಾಗುತ್ತದೆ ಜೊತೆಗೆ ಇದು ರಾಷ್ಟ್ರ ಹೆಮ್ಮೆ ಹಾಗೂ ಗೌರವದ ವಿಷಯವಾಗಿದೆ. ಹೀಗಾಗಿ ಎಲ್ಲರೂ ಬಂದು ಸಿನಿಮಾ ನೋಡಲೇಬೇಕು ಎಂದು ಸಿನಿಮಾ ತಂಡ ಮನವಿ ಮಾಡಿಕೊಂಡಿದೆ.
#MajorOnJune3rd will have NORMAL prices because it’s an Extraordinary Story for Normal people :) #AskSesh https://t.co/v2kpH9B4vc
— Adivi Sesh (@AdiviSesh) May 21, 2022
'ಮೇಜರ್' ಚಿತ್ರದ ಟ್ರೈಲರ್ನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಬಿಡುಗಡೆಗೊಳಿಸಿದ್ದಾರೆ. ತೆಲುಗಿನಲ್ಲಿ ಮಹೇಶ್ ಬಾಬು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಸಿನಿಮಾ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಬಿಡುಗಡೆ ಮಾಡಿದ್ದರೆ, ತೆಲುಗಿನಲ್ಲಿ ಮಹೇಶ್ ಬಾಬು ಟ್ರೈಲರ್ ಬಿಡುಗಡೆ ಮಾಡಿ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
'ಬ್ರಿಟಿಷರು
ನಮ್ಮನ್ನು
ಒಡೆದಿದ್ದು
ಹೀಗೆ':
ಕಿಚ್ಚನ
ಹೇಳಿಕೆಗೆ
ಅಕ್ಷಯ್
ಪರೋಕ್ಷ
ಪ್ರತಿಕ್ರಿಯೆ
2008 ರಲ್ಲಿ ಮುಂಬೈ ಮೇಲಿನ 28/11 ದಾಳಿಯ ಸಮಯದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡ 'ಮೇಜರ್' ಸಂದೀಪ್ ಉನ್ನಿಕೃಷ್ಣ್ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ಸದ್ಯ ಈ ಸಿನಿಮಾ ಮೂಲಕ ಸೌತ್ ಸ್ಟಾರ್ ಅದಿವಿ ಸೇಶ್ ಬಾಲಿವುಡ್ಗೆ ಪಾದರ್ಪಣೆ ಮಾಡಿದ್ದಾರೆ.

ಒಟ್ಟಿನಲ್ಲಿ 'ಮೇಜರ್' ಸಿನಿಮಾ ದೇಶ ಸೇವೆಯಲ್ಲಿ ತೊಡಗಿರುವ ಯೋಧರಿಗೆ ಸಮರ್ಪಣೆ ಮಾಡುತ್ತಿದ್ದು, ಈ ಸಿನಿಮಾವನ್ನು ಎಲ್ಲರೂ ಬಂದು ನೋಡಿ ಹಾರೈಸಿ ಎಂದು ಚಿತ್ರತಂಡ ಮನವಿ ಮಾಡಿದೆ. ಅಲ್ಲದೆ ಸಿನಿಮಾದ ಟಿಕೆಟ್ ದರವನ್ನು ಕೂಡ ಕಡಿಮೆ ಮಾಡಿ ಎಲ್ಲಾ ಪ್ರೇಕ್ಷಕರಿಗೂ ಸಿನಿಮಾ ನೋಡುವ ಅವಕಾಶ ಮಾಡಿಕೊಟ್ಟಿದೆ.