twitter
    For Quick Alerts
    ALLOW NOTIFICATIONS  
    For Daily Alerts

    ಅಫ್ಘಾನಿಸ್ತಾನದ ಭೀಕರ ಪರಿಸ್ಥಿತಿ; ನಮ್ಮನ್ನು ಕೊಲ್ಲಲು ಬರ್ತಿದ್ದಾರೆ ಎಂದು ಓಡಿದ ನಿರ್ದೇಶಕಿಯ ವಿಡಿಯೋ ವೈರಲ್

    |

    ಅಫ್ಘಾನಿಸ್ತಾನದಲ್ಲಿ ಭೀಕರ ಪರಿಸ್ಥಿತಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಬಹುತೇಕ ಪ್ರದೇಶವನ್ನು ವಶಪಡಿಸಿಕೊಂಡಿದ್ದಾರೆ. ರಾಜಧಾನಿ ಕಾಬೂಲ್ ನಗರವನ್ನು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಉಗ್ರರು ಹಿಡಿತ ಸಾಧಿಸುತ್ತಿದ್ದಂತೆ ಸಾವಿರಾರು ಮಂದಿ ದೇಶ ತೊರೆದು ಕಾಬೂಲ್ ನಿಂದ ಓಟಕಿತ್ತಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಬೇರೆ ಬೇರೆ ದೇಶದ ಪ್ರಜೆಗಳು ತಮ್ಮ ದೇಶ ಸೇರಲು ಹರಸಾಹಸ ಪಡುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನ ಜಮಾಯಿಸಿದ್ದು, ಸಾವಿರಾರು ಮಂದಿ ವಿಮಾನ ಏರಲು ಮುಗಿಬಿದ್ದಿದ್ದಾರೆ. ಈ ವೇಳೆ ಅನೇಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ವಿಮಾನ ನಿಲ್ದಾಣದಲ್ಲಿ ಜಮಾಯಿಸಿರುವ ಜನರು ಗುಂಪು ಮತ್ತು ವಿಮಾನ ಏರಲು ಮುಗಿಬಿದ್ದಿರುವ ಜನರ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾಬೂಲ್ ಪರಿಸ್ಥಿತಿ ನೋಡಿ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿ ಅಫ್ಘಾನಿಸ್ತಾನ ಉಳಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

    ಕಾಬೂಲ್ ವಶಪಡಿಸಿಕೊಂಡ ತಾಲಿಬಾನ್; ಅಫ್ಘಾನ್ ಮಹಿಳೆಯರಿಗಾಗಿ ಪ್ರಾರ್ಥಿಸಿ ಎಂದ ಬಾಲಿವುಡ್ಕಾಬೂಲ್ ವಶಪಡಿಸಿಕೊಂಡ ತಾಲಿಬಾನ್; ಅಫ್ಘಾನ್ ಮಹಿಳೆಯರಿಗಾಗಿ ಪ್ರಾರ್ಥಿಸಿ ಎಂದ ಬಾಲಿವುಡ್

    ಕಾಬೂಲ್ ವಶಪಡಿಸಿಕೊಳ್ಳುವ ಮೊದಲು ಅಫ್ಘಾನಿಸ್ತಾನದ ನಿರ್ದೇಶಕಿಯೊಬ್ಬರು ಪ್ರಾಣ ಉಳಿಸಿಕೊಳ್ಳಲು ರಸ್ತೆಗಿಳಿದು ಓಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಫ್ಘಾನಿಸ್ತಾನದ ಸಿನಿಮಾ ನಿರ್ದೇಶಕಿ ಮತ್ತು ಅಫ್ಘಾನಿಸ್ತಾನದ ರಾಷ್ಟ್ರೀಯ ಚಲನಚಿತ್ರ ಕಂಪನಿಯ ನಿರ್ದೇಶಕಿಯೂ ಆಗಿರುವ ಸಹ್ರಾ ಕರಿಮೀ ಓಡುತ್ತಲೆ 'ದಯವಿಟ್ಟು ಮೌನವಾಗಿ ಇರಬೇಡಿ, ಅವರ ನಮ್ಮನ್ನು ಕೊಲ್ಲು ಬರ್ತಿದ್ದಾರೆ' ಎಂದು ಹೇಳುತ್ತಾ ಓಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಪಂಚದ ಎಲ್ಲಾ ಚಲನಚಿತ್ರ ಸಮುದಾಯಗಳಲ್ಲೂ ಮನವಿ ಮಾಡಿಕೊಂಡಿದ್ದು, ಸಹಾಯ ಮಾಡಿ ಎಂದು ಕೇಳಿದ್ದಾರೆ. ಮುಂದೆ ಓದಿ.

    ಪ್ರಾಣ ಉಳಿಸಿಕೊಳ್ಳಲು ಓಡಿದ ನಿರ್ದೇಶಕಿ

    ನಿರ್ದೇಶಕಿ ಸಹ್ರಾ ಕರಿಮಿ, ವಿಡಿಯೋ ಮಾಡುತ್ತಲೇ ರಸ್ತೆಯಲ್ಲಿ ಓಡುತ್ತಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಸಹ್ರಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, "ಛಿದ್ರವಾದ ಹೃದಯದಿಂದ ಇದನ್ನು ಬರೆಯುತ್ತಿದ್ದೀನಿ. ನನ್ನ ಸುಂದರ ಜನರನ್ನು ವಿಶೇಷವಾಗಿ ಸಿನಿಮಾ ನಿರ್ದೇಶಕರನ್ನು ತಾಲಿಬಾನಿಗಳಿಂದ ರಕ್ಷಿಸಲು ನೀವು ನನ್ನೊಂದಿಗೆ ಸೇರಿಕೊಳ್ಳಬಹುದು" ಎಂದು ಕೇಳಿಕೊಂಡಿದ್ದಾರೆ.

    ಪ್ರಪಂಚ ಮೌನವಾಗಿದೆ

    "ಅವರು ನಮ್ಮ ಜನರನ್ನು ಕೊಲ್ಲುತ್ತಿದ್ದಾರೆ. ಅವರು ಅನೇಕ ಮಕ್ಕಳನ್ನು ಅಪಹರಿಸಿದ್ದಾರೆ. ಹುಡುಗಿಯನ್ನು ಮಾರಾಟ ಮಾಡುತ್ತಿದ್ದಾರೆ. ಮಾನವೀಯ ಬಿಕ್ಕಟ್ಟು. ಇಡೀ ಪ್ರಪಂಚ ಮೌನವಾಗಿದೆ. ಅವರು ಎಲ್ಲಾ ಕಲೆಯನ್ನು ಬ್ಯಾನ್ ಮಾಡಿದ್ದಾರೆ. ನಾನು ಮತ್ತು ಇನ್ನು ಕೆಲವು ನಿರ್ದೇಶಕರು ಅವರ ಹಿಟ್ ಲಿಸ್ಟ್ ನಲ್ಲಿದ್ದೀವಿ" ಎಂದು ಬರೆದುಕೊಂಡಿದ್ದಾರೆ.

    ಬಾಲಿವುಡ್ ಅನೇಕ ನಿರ್ದೇಶಕರ ಬೆಂಬಲ

    ಬಾಲಿವುಡ್ ಅನೇಕ ನಿರ್ದೇಶಕರ ಬೆಂಬಲ

    ಕರಿಮಿ ಪೋಸ್ಟ್ ಬಳಿಕ ಪ್ರಪಂಚದ ಅನೇಕ ನಿರ್ದೇಶಕರು ಬೆಂಬಲ ಸೂಚಿಸಿದ್ದಾರೆ. ಭಾರತ ನಿರ್ದೇಶಕರಾದ ವಿವೇಕ್ ರಂಜನ್, ಅನುರಾಗ್ ಕಶ್ಯಪ್, ಲೀನಾ ಮಣಿಮಕಲೈ ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಿನಿಮಾದಲ್ಲಿ ಪಿ ಎಚ್ ಡಿ ಮಾಡಿದ ಮೊದಲ ಮತ್ತು ಏಕೈಕ ಮಹಿಳೆ ಕರಿಮಿ.

    ಅಪ್ಘಾನಿಸ್ತಾನಕ್ಕಾಗಿ ಪ್ರಾರ್ಥಿಸಿ ಎಂದ ಬಾಲಿವುಡ್

    ಅಪ್ಘಾನಿಸ್ತಾನಕ್ಕಾಗಿ ಪ್ರಾರ್ಥಿಸಿ ಎಂದ ಬಾಲಿವುಡ್

    ಅಫ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆ ಮತ್ತು ಅಲ್ಲಿನ ಮಹಿಳೆಯರ ಬಗ್ಗೆ ಬಾಲಿವುಡ್ ನಟಿಯರು ಪ್ರತಿಕ್ರಿಯೆ ನೀಡಿ, ಅವರಿಗಾಗಿ ಪ್ರಾರ್ಥಿಸುತ್ತಿದ್ದಾರೆ ಮತ್ತು ಎಲ್ಲರೂ ಪ್ರಾರ್ಥಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಸ್ವರಾ ಭಾಸ್ಕರ್, ರಿಯಾ ಚಕ್ರವರ್ತಿ, ಕಂಗನಾ ರಣಾವತ್, ಅರ್ಮನ್ ಮಲ್ಲಿಕ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ಶೇರ್ ಮಾಡಿ ಅಫ್ಘಾನಿಸ್ತಾನದ ಜನರಿಗಾಗಿ ಪ್ರಾರ್ಥಿಸಿದ್ದಾರೆ.

    ರಿಯಾ ಚಕ್ರವರ್ತಿ ಬೇಸರ

    ರಿಯಾ ಚಕ್ರವರ್ತಿ ಬೇಸರ

    ರಿಯಾ ಚಕ್ರವರ್ತಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ ಶೇರ್ ಮಾಡಿ ಅಫ್ಘಾನಿಸ್ತಾನದ ಮಹಿಳೆಯರ ಬಗ್ಗೆ ನೋವು ಹೊರಹಾಕಿದ್ದಾರೆ. "ಜಗತ್ತಿನಾದ್ಯಂತ ಮಹಿಳೆಯರು ವೇತನ ಸಮಾನತೆಗೆ ಹೋರಾಡುತ್ತಿದ್ದರೆ, ಅಫ್ಘಾನಿಸ್ತಾನದಲ್ಲಿ ಮಹಿಳೆಯರೇ ವೇತನ ಆಗಿ ಮಾರ್ಪಟ್ಟಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸ್ಥಿತಿಯನ್ನು ಕಂಡು ಹೃದಯಛಿದ್ರವಾಗಿದೆ. ಜಾಗತಿಕ ನಾಯಕರಿಗೆ ಇದನ್ನು ನಿಯಂತ್ರಿಸುವಂತೆ ಒತ್ತಾಯಿಸಿ. ಮಹಿಳೆಯರು ಕೂಡ ಮನುಷ್ಯರೇ" ಎಂದು ಬರೆದುಕೊಂಡಿದ್ದಾರೆ.

    ಸ್ವರಾ ಭಾಸ್ಕರ್ ಪ್ರತಿಕ್ರಿಯೆ

    ಸ್ವರಾ ಭಾಸ್ಕರ್ ಪ್ರತಿಕ್ರಿಯೆ

    ಬಾಲಿವುಡ್ ನ ಮತ್ತೋರ್ವ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯೆ ನೀಡಿ, ವಿಮಾನ ನಿಲ್ದಾಣದ ಹೃದಯ ವಿದ್ರಾವಕ ಘಟನೆ ಶೇರ್ ಮಾಡಿ ಹಾರ್ಟ್ ಬ್ರೇಕ್ ಇಮೋಜಿ ಇರಿಸಿದ್ದಾರೆ. ಖ್ಯಾತ ಗಾಯಕ ಅರ್ಮನ್ ಮಲಿಕ್ ಕೂಡ ಅಫ್ಘಾನ್ ಸ್ಥಿತಿಗೆ ಮರುಕ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸದ್ಯ ನಡೆಯುತ್ತಿರುವ ಪರಿಸ್ಥಿತಿ ನೋಡಲು ನಿಜಕ್ಕೂ ದುಃಖವಾಗುತ್ತಿದೆ. ನನ್ನ ಪ್ರಾರ್ಥನೆ ಮತ್ತು ಆಲೋಚನೆ ಜನರೊಂದಿಗೆ ಇದೆ" ಎಂದು ಹೇಳಿದ್ದಾರೆ.

    English summary
    Afghan filmmaker Sahraa Karimi Calls for Help from global film community as the country falls to the Taliban.
    Monday, August 16, 2021, 19:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X