ಸಲ್ಮಾನ್ ಖಾನ್ ಅಸಲಿ ಮುಖ ಬಯಲಾಗಲು ಎರಡು ಪೆಗ್ ಸಾಕು - ಖ್ಯಾತ ಗಾಯಕನ ಶಾಕಿಂಗ್ ಹೇಳಿಕೆ..!
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಆದರೂ ಕೂಡ ಅಮಲಿನಲ್ಲಿ ಅನೇಕರು ತೇಲುತ್ತಾರೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಇನ್ನು, ಚಿತ್ರರಂಗದಲ್ಲಿ ಕೂಡ ಅನೇಕರು ದೇಹದ ದಣಿವು ನೀಗಿಸಲು ಎಣ್ಣೆ ಹೊಡೆಯುತ್ತಾರೆ. ಸಂಪೂರ್ಣ ಬಾಟಲಿ ಖಾಲಿ ಮಾಡದಿದ್ದರೂ ಒಂದೆರಡು ಪೆಗ್ ಆದರೂ ಕೂಡ ಹೊಡೆದೆ ಹೊಡೆಯುತ್ತಾರೆ. ಇದಕ್ಕೆ ಸಲ್ಮಾನ್ ಖಾನ್ ಸದ್ಯದ ಉದಾಹರಣೆ.
ಆದರೆ.. ಇಂತಹ ಸಲ್ಮಾನ್ ಖಾನ್ ಎಣ್ಣೆ ಹೊಡೆದ ಮೇಲೆ ಹೇಗಿರುತ್ತಾರೆ ಎನ್ನುವ ಕುತೂಹಲ ಅನೇಕರದ್ದು ? ಯಾಕೆಂದರೆ ಸಲ್ಮಾನ್ ಖಾನ್ ಹೇಳಿ ಕೇಳಿ ಸೂಪರ್ ಸ್ಟಾರ್. ಕಂಠಪೂರ್ತಿ ಕುಡಿದು ಎಲ್ಲರೆದುರು ತೂರಾಡಲು ಆಗುವುದಿಲ್ಲ. ಸಿಕ್ಕ ಸಿಕ್ಕವರ ಜೊತೆ ಕುಳಿತು ಕುಡಿಯೋಕೂ ಆಗುವುದಿಲ್ಲ. ಕುಡಿದರೂ ಕೂಡ ಮಾತುಗಳ ಮೇಲೆ ನಿಗಾ ವಹಿಸಬೇಕಾಗುತ್ತೆ. ಇದೆಲ್ಲದಕ್ಕೆ ಈಗ ಮಿಕಾ ಸಿಂಗ್ ಉತ್ತರವನ್ನು ನೀಡಿದ್ದಾರೆ.

ಶುಭಾಂಕರ್ ಮಿಶ್ರಾ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಿಕಾ ಸಿಂಗ್ ಎರಡು ಪೆಗ್ ನಂತರ ಸಲ್ಮಾನ್ ಖಾನ್ ವ್ಯಕ್ತಿತ್ವದಲ್ಲಿ ಬದಲಾವಣೆಯಾಗುತ್ತೆ ಎಂದು ಹೇಳಿದ್ದಾರೆ.
ನಾನು ಅವರನ್ನು ಭೇಟಿಯಾದಾಗೆಲ್ಲ ಅವರು ತುಂಬಾನೇ ಮುಕ್ತವಾಗಿ ಆತ್ಮೀಯತೆಯಿಂದ ಮಾತನಾಡುತ್ತಾರೆ ಎಂದಿರುವ ಮಿಕಾ ಸಿಂಗ್ ಎರಡು ಪೆಗ್ ಹೊಡೆದ ನಂತರ ಅವರು ನನ್ನ ಅಣ್ಣನಂತೆ ಪರಿಗಣಿಸಲು ಶುರು ಮಾಡುತ್ತಾರೆ ಎಂದು ಹೇಳಿದ್ದಾರೆ. ಅವರಷ್ಟೇ ಎತ್ತರಕ್ಕೆ ನಾನು ಬೆಳೆದಿದ್ದೀನಾ ಎನ್ನುವ ಪ್ರಶ್ನೆ ನಮ್ಮಲ್ಲಿಯೇ ಮೂಡಬೇಕು ಆ ರೀತಿ ನೋಡಿಕೊಳ್ಳಲು ಶುರು ಮಾಡುತ್ತಾರೆ ಎಂದು ಹೇಳಿದ್ದಾರೆ.
ಹಾಗಂಥ ತೀರಾ ಸಲುಗೆಯಲ್ಲಿ ಅವರೆದುರು ಬಾಯಿಗೆ ಬಂದಂತೆ ಮಾತನಾಡಬಾರದು, ನಾವು ಎಷ್ಟೇ ಕುಡಿದಿದ್ದರೂ ಕೂಡ ನಮ್ಮ ಇತಿ ಮಿತಿಗಳ ಬಗ್ಗೆ ನಮಗೆ ಗೊತ್ತಿರಬೇಕು, ನನ್ನೆದುರು ಕುಳಿತ ವ್ಯಕ್ತಿ ಸಲ್ಮಾನ್ ಖಾನ್ ಎನ್ನುವುದು ನೆನಪಿರಬೇಕು ಎಂದು ಹೇಳಿರುವ ಮಿಕಾ ಸಿಂಗ್ ಇದೆಲ್ಲ ನಿಮಗೆ ನೆನಪಿದ್ದರೆ ಅವರಿಂದ ಹೊಡೆಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಸಲ್ಮಾನ್ ಖಾನ್ ಬೆಳಗ್ಗೆ ಇದ್ದಂತೆ ರಾತ್ರಿ ಇರಲ್ಲ, ರಾತ್ರಿ ಇದ್ದಂತೆ ಬೆಳಗ್ಗೆ ಇರಲ್ಲ ಎನ್ನುವುದಕ್ಕೆ ಉದಾಹರಣೆಯನ್ನು ಕೂಡ ನೀಡಿರುವ ಮಿಕಾ ಸಿಂಗ್, ಒಮ್ಮೆ ಸಂಗೀತ ನಿರ್ದೇಶಕರಾಗಿ ಗಾಯಕರಾಗಿ ಗುರುತಿಸಿಕೊಂಡಿರುವ ಮೀಟ್ ಬ್ರದರ್ಸ್ ಜೊತೆ ಸಲ್ಮಾನ್ ಖಾನ್ ರಾತ್ರಿ ಬಿರಿಯಾನಿ ತಿಂದಿದ್ದರು. ಜೊತೆಯಲ್ಲಿ ಕುಳಿತು ಬಿರಿಯಾನಿ ತಿಂದ ಮಾತ್ರಕ್ಕೆ ನಾವು ಸಲ್ಮಾನ್ ಖಾನ್ ಸ್ನೇಹಿತರಾದೆವು ಎಂದು ಅವರು ಭಾವಿಸಿದ್ದರು. ಆದರೆ ಸಲ್ಮಾನ್ ಖಾನ್ ವ್ಯಕ್ತಿತ್ವ ಹೇಗೆ ಎನ್ನುವುದು ನನಗೆ ಗೊತ್ತಿತ್ತು ಆದರೆ ಅವರಿಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಆ ನಂತರ ಮರುದಿನ ರೇಸ್ 3 ಚಿತ್ರದ ಪ್ರೀಮಿಯರ್ ಪ್ರದರ್ಶನ ಇತ್ತು. ಮೀಟ್ ಬ್ರದರ್ಸ್ ಎದುರು ನಿಂತಿದ್ದರು ಕೂಡ ಸಲ್ಮಾನ್ ಖಾನ್ ಅವರ ಕಡೆ ನೋಡಲಿಲ್ಲ, ಒಂದು ಮಾತನ್ನು ಕೂಡ ಹೇಳಲಿಲ್ಲ, ಇದರಿಂದ ಮೀಟ್ ಬ್ರದರ್ಸ್‌ಗೆ ಶಾಕ್ ಆಯ್ತು ಎಂದು ಹೇಳಿರುವ ಮಿಕಾ ಸಿಂಗ್ ಆ ನಂತರ ನಾನು ಅವರಿಬ್ಬರ ಬಳಿ ಹೋಗಿ ಸಲ್ಮಾನ್ ಖಾನ್ ಹಗಲಿನಲ್ಲಿ ತಮ್ಮದೇ ಆಲೋಚನೆಯಲ್ಲಿ ಕಳೆದು ಹೋಗಿರುತ್ತಾರೆ, ಅವರನ್ನು ಭೇಟಿಯಾಗಬೇಕೆಂದರೆ ಸಂಜೆ 6ರ ಮೇಲೆ ಭೇಟಿಯಾಗಿ ಎಂದು ಹೇಳಿದ್ದೆ ಎಂದಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅವರಿಗೆ ಸುಖಾ ಸುಮ್ಮನೆ ಭೇಟಿಯಾಗಲು ಹೋಗಲೇಬೇಡಿ ಎಂದು ಸಲಹೆಯನ್ನು ನೀಡಿದ್ದೆ ಎಂದು ಹೇಳಿದ್ದಾರೆ.
ಮುಂದುವರೆದು ನಡುರಾತ್ರಿ ಕಂಡ ಕಂಡವರಿಗೆಲ್ಲ ಕರೆ ಮಾಡುವ ಕೆಟ್ಟ ಚಾಳಿ ಸಲ್ಮಾನ್ ಖಾನ್‌ಗೆ ಇದೆ ಎಂದು ಹೇಳಿರುವ ಮಿಕಾ ಸಿಂಗ್, ಅವರ ಫೋನ್ ಕಾಲ್ ನ ರಿಸೀವ್ ಮಾಡದಿದ್ದರೆ ಅವರಿಗೆ ತುಂಬಾ ಕೆಟ್ಟ ಕೋಪ ಕೂಡ ಬರುತ್ತೆ ಎಂದು ಹೇಳಿದ್ದಾರೆ.


Click it and Unblock the Notifications











