For Quick Alerts
  ALLOW NOTIFICATIONS  
  For Daily Alerts

  ಆಮಿರ್, ಹೃತಿಕ್ ನಂತರ ಈಗ ಶಾರುಖ್ ಖಾನ್‌ಗೆ ಬಾಯ್‌ಕಾಟ್ ಬಿಸಿ

  |

  ಬಾಲಿವುಡ್‌ಗಿದು ಸಂಕಷ್ಟದ ಸಮಯ. ಹಿಂದಿ ಸಿನಿಮಾಗಳು ಸಾಲು ಸಾಲಾಗಿ ಸೋಲುತ್ತಿರುವ ಬೆನ್ನಲ್ಲೆ ಬಾಯ್‌ಕಾಟ್ ಕಾಟವೂ ಶುರುವಾಗಿದೆ.

  ಈ ಮೊದಲು ಆಮಿರ್ ಖಾನ್ ಸಿನಿಮಾಗಳಿಗೆ ಮಾತ್ರ ಕಾಡುತ್ತಿದ್ದ ಬಾಯ್‌ಕಾಟ್ ಸಮಸ್ಯೆ ಇದೀಗ ಬಾಲಿವುಡ್‌ನ ಎಲ್ಲ ದೊಡ್ಡ ಬಜೆಟ್‌ನ ಸಿನಿಮಾಗಳಿಗೆ ಬೆನ್ನು ಬಿದ್ದಿದೆ.

  ಆಮಿರ್ ಖಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಎಂಟ್ರಿನೇ ಅದ್ಭುತ!ಆಮಿರ್ ಖಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಎಂಟ್ರಿನೇ ಅದ್ಭುತ!

  ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾಕ್ಕೆ ತೀವ್ರವಾಗಿ ಈ ಬಾಯ್‌ಕಾಟ್ ಕಾಡಿತು. ಸಿನಿಮಾವನ್ನು ನಿಷೇಧಿಸುವಂತೆ ಆನ್‌ಲೈನ್‌ನಲ್ಲಿ ಪ್ರತಿಭಟನೆಯ ಫಲವೇನೋ ಎಂಬಂತೆ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸಾಧಾರಣ ಮಟ್ಟದ ಕಲೆಕ್ಷನ್ ಅಷ್ಟನ್ನೆ ಮಾಡುತ್ತಿದೆ.

  'ಲಾಲ್ ಸಿಂಗ್ ಚಡ್ಡ' ಸಿನಿಮಾದ ಜೊತೆಗೇ ಬಿಡುಗಡೆ ಆದ ಅಕ್ಷಯ್ ಕುಮಾರ್‌ ನಟನೆಯ 'ರಕ್ಷಾ ಬಂಧನ್' ಸಿನಿಮಾಕ್ಕೂ ಬಾಯ್‌ಕಾಟ್ ಬಿಸಿ ತಾಗಿತು. ಆಮಿರ್ ಖಾನ್ ನಟನೆಯ ಸಿನಿಮಾದ ಪರವಾಗಿ ಮಾತನಾಡಿದ್ದಕ್ಕಾಗಿ ಅಕ್ಷಯ್ ಕುಮಾರ್‌ ಸಿನಿಮಾವನ್ನು ಬಾಯ್‌ಕಾಟ್ ಮಾಡುವಂತೆ ಒತ್ತಾಯಿಸಲಾಯಿತು.

  ಶಾರುಖ್, ಸಲ್ಮಾನ್ ಅನ್ನು ಟ್ರೋಲ್ ಮಾಡಿ ತಗಲಾಕ್ಕೊಂಡ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕಶಾರುಖ್, ಸಲ್ಮಾನ್ ಅನ್ನು ಟ್ರೋಲ್ ಮಾಡಿ ತಗಲಾಕ್ಕೊಂಡ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ

  ಶಾರುಖ್ ಖಾನ್ ಸಿನಿಮಾದ ವಿರುದ್ಧ ಬಾಯ್‌ಕಾಟ್ ಅಭಿಯಾನ

  ಶಾರುಖ್ ಖಾನ್ ಸಿನಿಮಾದ ವಿರುದ್ಧ ಬಾಯ್‌ಕಾಟ್ ಅಭಿಯಾನ

  ಅದರ ಬಳಿಕ ಹೃತಿಕ್ ರೋಷನ್ ನಟನೆಯ ಇನ್ನೂ ಬಿಡುಗಡೆ ಆಗದ ಸಿನಿಮಾ 'ವಿಕ್ರಂ-ವೇದ'ಕ್ಕೆ ಬಾಯ್‌ ಕಾಟ್ ಕಾಟ ಶುರುವಾಗಿದೆ. ಇತ್ತೀಚೆಗೆ 'ಲಾಲ್ ಸಿಂಗ್ ಚಡ್ಡ' ಸಿನಿಮಾ ವೀಕ್ಷಿಸಿದ್ದ ಹೃತಿಕ್ ರೋಷನ್ ಸಿನಿಮಾವನ್ನು ಹೊಗಳಿದ್ದರು. ಹಾಗಾಗಿ ಹೃತಿಕ್ ರೋಷನ್ ಸಿನಿಮಾದ ವಿರುದ್ಧವೂ ಬಾಯ್‌ಕಾಟ್ ಟ್ರೆಂಡ್ ಹುಟ್ಟಿಕೊಂಡಿತ್ತು. ಈ ಎಲ್ಲ ನಾಯಕ ನಟರ ಬಳಿಕ ಇದೀಗ ಶಾರುಖ್ ಖಾನ್ ಸಿನಿಮಾಕ್ಕೂ ಬಾಯ್‌ಕಾಟ್ ಟ್ರೆಂಡ್ ಶುರುವಾಗಿದೆ. ಈ ಬಾರಿಯಂತೂ ಯಾವುದೇ ನಿಖರ ಕಾರಣವೇ ಇಲ್ಲದೆ ಸುಖಾ ಸುಮ್ಮನೆ ಶಾರುಖ್ ಖಾನ್ ಸಿನಿಮಾದ ವಿರುದ್ಧ ವಿಷ ಕಾರಿಕೊಳ್ಳಲಾಗುತ್ತಿದೆ.

  'ಪಠಾಣ್' ನಿಷೇಧಿಸಿ 'ಆದಿಪುರುಷ್' ಬೆಂಬಲಿಸಿ ಅಭಿಯಾನ

  'ಪಠಾಣ್' ನಿಷೇಧಿಸಿ 'ಆದಿಪುರುಷ್' ಬೆಂಬಲಿಸಿ ಅಭಿಯಾನ

  ಸಾಮಾಜಿಕ ಜಾಲತಾಣದಲ್ಲಿ ಕೆಲವು ಪೋಸ್ಟರ್‌ಗಳು ಹರಿದಾಡುತ್ತಿದ್ದು, 'ಆಮಿರ್ ಖಾನ್‌ರ 'ಲಾಲ್ ಸಿಂಗ್ ಚಡ್ಡ' ಸಿನಿಮಾಕ್ಕೆ ಮಣ್ಣು ಮುಕ್ಕಿಸಿದ್ದಾಯಿತು ಈಗ ಶಾರುಖ್ ಖಾನ್ ಸರದಿ' ಎಂಬ ಕ್ಯಾಪ್ಷನ್ ಜೊತೆಗೆ ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾದ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಇನ್ನು ಕೆಲವರು ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾವನ್ನು ಬಾಯ್‌ಕಾಟ್ ಮಾಡಿ, ಪ್ರಭಾಸ್ ನಟಿಸುತ್ತಿರುವ 'ಆದಿಪುರುಷ್' ಸಿನಿಮಾವನ್ನು ಬೆಂಬಲಿಸಿ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಧರ್ಮದ ಕಾರಣಕ್ಕೆ ಶಾರುಖ್ ಖಾನ್ ಸಿನಿಮಾವನ್ನು ಬಾಯ್‌ಕಾಟ್ ಮಾಡುವಂತೆ ಮನವಿ ಮಾಡಲಾಗುತ್ತಿದೆ.

  ದೀಪಿಕಾ ಪಡುಕೋಣೆ ಸಿನಿಮಾ ಬ್ಯಾನ್‌ಗೆ ಒತ್ತಾಯ

  ದೀಪಿಕಾ ಪಡುಕೋಣೆ ಸಿನಿಮಾ ಬ್ಯಾನ್‌ಗೆ ಒತ್ತಾಯ

  ದೀಪಿಕಾ ಪಡುಕೋಣೆ ಈ ಹಿಂದೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಮೇಲೆ ಹಲ್ಲೆ ನಡೆದಾಗ ಆಕೆಯನ್ನು ಭೇಟಿ ಮಾಡಿ ಬೆಂಬಲಿಸಿದ್ದ ಚಿತ್ರವನ್ನು ಹಂಚಿಕೊಂಡು, 'ದೀಪಿಕಾ ಪಡುಕೋಣೆ ದೇಶವಿರೋಧಿ, ಆಕೆ ನಟಿಸಿರುವ 'ಪಠಾಣ್' ಸಿನಿಮಾವನ್ನು ಬಾಯ್‌ಕಾಟ್ ಮಾಡಿ ಎಂದು ಕರೆ ನೀಡಿದ್ದಾರೆ. ಒಟ್ಟಾರೆಯಾಗಿ ಬಾಯ್‌ಕಾಟ್ ಎಂಬುದು ಬಾಲಿವುಡ್‌ ಅನ್ನು ವಿಪರೀತವಾಗಿ ಕಾಡುತ್ತಿದೆ. ದೊಡ್ಡ ಸ್ಟಾರ್ ನಟರ ಸಿನಿಮಾಗಳನ್ನೇ ಗುರಿ ಮಾಡಿ ಏನೇನೋ ಕಾರಣಗಳನ್ನು ನೀಡಿ ಬಾಯ್‌ಕಾಟ್ ಅಭಿಯಾನ ನಡೆಸಲಾಗುತ್ತಿದೆ.

  ಪಠಾಣ್ ಹಾಗೂ ಜವಾನ್ ಬರಲಿವೆ

  ಪಠಾಣ್ ಹಾಗೂ ಜವಾನ್ ಬರಲಿವೆ

  ಶಾರುಖ್ ಖಾನ್ ನಟನೆಯ 'ಪಠಾಣ್' ಹಾಗೂ 'ಜವಾನ್' ಸಿನಿಮಾಗಳು ಮುಂದಿನ ಕೆಲವು ದಿನಗಳಲ್ಲಿ ತೆರೆಗೆ ಬರಲಿದೆ. ಮೊದಲಿಗೆ 'ಪಠಾಣ್' ಸಿನಿಮಾ ಬಿಡುಗಡೆ ಆಗಲಿದ್ದು, ಆ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಅವರುಗಳ ಸಹ ನಟಿಸಿದ್ದಾರೆ. ಆ ನಂತರ 'ಜವಾನ್' ಸಿನಿಮಾ ಬಿಡುಗಡೆ ಆಗಲಿದ್ದು, ಆ ಸಿನಿಮಾವನ್ನು ತಮಿಳಿನ ಅಟ್ಟಿಲಿ ನಿರ್ದೇಶನ ಮಾಡುತ್ತಿದ್ದಾರೆ. ನಯನತಾರಾ, ವಿಜಯ್ ಸೇತುಪತಿ ಅವರುಗಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  After Aamir and Hritik Roshan now boycott trend against Shah Rukh Khan's movie. Netizen trend boycott Shah Rukh Khan's Pathan and Jawan movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X