For Quick Alerts
  ALLOW NOTIFICATIONS  
  For Daily Alerts

  ಆಮೀರ್ ಖಾನ್ ಬಳಿಕ ನಟ ಮಾಧವನ್ ಗೆ ಕೊರೊನಾ; '3 ಈಡಿಯಟ್ಸ್' ಪೋಸ್ಟರ್ ಹಂಚಿಕೊಂಡ ನಟ

  |

  ಇತ್ತೀಚಿಗಷ್ಟೆ ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಆಮೀರ್ ಖಾನ್ ಗೆ ಕೊರೊನಾ ಪಾಸಿಟಿವ್ ಬಂದ ಬೆನ್ನಲ್ಲೇ ಮತ್ತೋರ್ವ ಖ್ಯಾತ ನಟ ಆರ್. ಮಾಧವನ್ ಅವರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

  ಈ ಬಗ್ಗೆ ಸ್ವತಃ ಮಾಧವನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಕೊರೊನಾ ಸೋಂಕು ದೃಢಪಟ್ಟಿರುವ ವಿಚಾರ ಹೇಳುವ ಜೊತೆಗೆ 3 ಈಡಿಯಟ್ಸ್ ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ವೈರಸ್ ಅಂತಿಮವಾಗಿ ರಾಂಚೊ ಮತ್ತು ಫರ್ಹಾನ್ ಅವರನ್ನು ಹಿಡಿದಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ. ರಾಂಚೊ ಮತ್ತು ಫರ್ಹಾನ್ 3 ಈಡಿಯಟ್ಸ್ ಸಿನಿಮಾದ ಪಾತ್ರಗಳು.

  ಬಾಲಿವುಡ್ ನಟ ಅಮೀರ್ ಖಾನ್‌ಗೆ ಕೊರೊನಾ ಪಾಸಿಟಿವ್ಬಾಲಿವುಡ್ ನಟ ಅಮೀರ್ ಖಾನ್‌ಗೆ ಕೊರೊನಾ ಪಾಸಿಟಿವ್

  ಈ ಬಗ್ಗೆ ಟ್ವೀಟ್ ಮಾಡಿರುವ ಮಾಧವನ್, 'ಫರ್ಹಾನ್ ರಾಂಚೊನನ್ನು ಅನುಸರಿಸುತ್ತಿದ್ದಾನೆ. ಆದರೆ ವೈರಲ್ ಯಾವಾಗಲೂ ನಮ್ಮ ನಂತರ ಇರುತ್ತದೆ. ಆದರೆ ಎಲ್ಲವೂ ಚೆನ್ನಾಗಿದೆ. ಈ ಒಂದು ಜಾಗದಲ್ಲಿ ನಮಗೆ ರಾಜು ಬೇಡ. ಆರೋಗ್ಯಕ್ಕಾಗಿ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದು ಹೇಳಿದ್ದಾರೆ.

  ಮಾಧವನ್ ಕ್ರಿಯೇಟಿವ್ ಪೋಸ್ಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಜೊತೆಗೆ ಶೀಘ್ರ ಗುಣಮುಖರಾಗುವಂತೆ ವಿಶ್ ಮಾಡುತ್ತಿದ್ದಾರೆ. ಇನ್ನು ನಿನ್ನೆಯಷ್ಟೆ (ಮಾರ್ಚ್ 24) ನಟ ಆಮೀರ್ ಖಾನ್ ಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಆಮೀರ್ ಖಾನ್ ವಕ್ತಾರ ಮಾಧ್ಯಮಗಳಿಗೆ ತಿಳಿಸಿದ್ದರು.

  'ಅಮೀರ್ ಖಾನ್‌ಗೆ ಕೊರೊನಾ ವೈರಸ್ ತಗುಲಿದೆ. ಸದ್ಯ ಅವರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಕೋವಿಡ್ ಪ್ರೋಟೋಕಾಲ್ ಪಾಲಿಸುತ್ತಿದ್ದು, ಅವರ ಆರೋಗ್ಯ ನಿಯಂತ್ರಣದಲ್ಲಿದೆ' ಎಂದು ಹೇಳಿಕೆ ನೀಡಿದ್ದರು.

  Recommended Video

  Yuvarathna film team lands in trouble!

  ಇತ್ತೀಚಿಗಷ್ಟೆ ಅಮೀರ್ ಖಾನ್ ಸೋಶಿಯಲ್ ಮೀಡಿಯಾದಿಂದ ಹೊರಬಂದಿದ್ದರು. 'ನಿಮ್ಮ ಸಿದ್ಧಾಂತಗಳನ್ನು ನೀವು ಇದರ ಮೇಲೆ ಹೇರಬೇಡಿ. ನಾನು ನನ್ನ ಪ್ರಪಂಚದಲ್ಲಿ ಬದುಕುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ನಾನು ಅಷ್ಟು ಸಕ್ರೀಯನಾಗಿಲ್ಲ. ನಾನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪೋಸ್ಟ್ ಗಳನ್ನು ಮಾಡುವುದಿಲ್ಲ' ಎಂದು ಹೇಳಿದ್ದರು.

  English summary
  After Aamir Khan R madhavan tests positive for Corona. He shares hilarious poster of 3 Idiots.
  Thursday, March 25, 2021, 15:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X