ವಿರಾಟ್ ಕೊಹ್ಲಿ ಮೇಲೆ ಅನುಷ್ಕಾ ಶರ್ಮಾಗೆ ಇನ್ನೂ ಇದೆ ಕೆಂಡದಂತಹ ಕೋಪ, ಬೆಂಗಳೂರಿನಲ್ಲಿ ಮುಂದುವರಿದ ಮನಸ್ತಾಪ..!
ನಂಬಿಕೆ ಅನ್ನೋದು ಈ ಜಗತ್ತಿನ ಅತಿ ದೊಡ್ಡ ಬಂಡವಾಳ. ಕೊಡು-ಕೊಳ್ಳುವ ನಿಯಮ ನಿಂತಿರುವುದೇ ಈ ನಂಬಿಕೆಯ ಸಿದ್ದಾಂತದ ಮೇಲೆ. ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಆದರೆ ಕೆಲ ಒಮ್ಮೆ ಈ ನಂಬಿಕೆಗೆ ಧಕ್ಕೆಯುಂಟಾಗುತ್ತೆ. ಕ್ಷುಲಕ ಕಾರಣಕ್ಕೆ ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಗುತ್ತೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಚಾರದಲ್ಲಿ
ಕೂಡ ಹೀಗೆ ಆಗಿದೆಯಾ ? ಗೊತ್ತಿಲ್ಲ. ಆದರೆ ಸದ್ಯಕ್ಕೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಾಂಪತ್ಯ ಜೀವನ ಚರ್ಚೆಯಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ವಿಡಿಯೋ ವೈರಲ್ ಆಗಿದೆ.

ಹೌದು, ಅಸಲಿಗೆ ಕೆಲ ದಿನಗಳ ಹಿಂದೆ ಹಿಂದಿ ನಾಯಕಿ ಅವನೀತ್ ಕೌರ್ ಅವರ ಮಾದಕ ಫೋಟೊವನ್ನು ಕೊಹ್ಲಿ ಮೆಚ್ಚಿಕೊಂಡಿದ್ದರು. ಆಕಸ್ಮಿಕವಾಗಿ ವಿರಾಟ್ ಕೊಹ್ಲಿ ಲೈಕ್ ಮಾಡಿದ್ದರಾ ಅಥವಾ ಬೇಕು ಬೇಕೆಂದೇ ಇಷ್ಟ ಪಟ್ಟು ಮಾಡಿದ್ದರಾ ಗೊತ್ತಿಲ್ಲ. ಆದರೆ ಆ ನಂತರ ತಾಂತ್ರಿಕ ದೋಷದಿಂದ ಹೀಗೆ ಆಗಿದೆಯೆಂದು ಕೊಹ್ಲಿ ಹೇಳಿದ್ದರು.
ಆದರೂ.. ಅದ್ಯಾಕೋ ಅನುಷ್ಕಾ ಶರ್ಮಾಗೆ ಕೊಹ್ಲಿಯ ಮೇಲೆ ಇನ್ನು ಅನುಮಾನ ಇದ್ದಂತೆ ಇದೆ. ಕೋಪ ಇನ್ನು ತಣ್ಣಗಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿನ ರೆಸ್ಟೋರೆಂಟ್‌ಗೆ ತೆರಳುವ ಸಮಯದಲ್ಲಿ ಅನುಷ್ಕಾ ಶರ್ಮಾ ತಮ್ಮ ಪತಿದೇವರು ವಿರಾಟ್ ಕೊಹ್ಲಿಗೆ ಕ್ಯಾರೇ ಎನ್ನದೇ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದೆ. ಅನುಷ್ಕಾ ಶರ್ಮಾ ಅವರ ನಡೆ ಅಭಿಮಾನಿಗಳ ತಲೆಯಲ್ಲಿ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ತಮ್ಮನ್ನು ಲೆಕ್ಕಿಸದೇ ಅನುಷ್ಕಾ ಶರ್ಮಾ ಮುಂದಕ್ಕೋದ ನಂತರ ವಿರಾಟ್ ಕೊಹ್ಲಿ ಕೂಡ ಕೋಪ ಮಾಡಿಕೊಂಡಂತೆ ವಿಡಿಯೋದಲ್ಲಿ ಕಾಣುತ್ತಿದೆ.
ವೈರಲ್ ಆದ ಈ ವಿಡಿಯೋಗೆ ಹಲವಾರು ಜನ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಮನಸ್ತಾಪ ದಿನದಿಂದ ದಿನಕ್ಕೆ ಕಡಿಮೆಯಾಗುವ ಬದಲು ಇನ್ನೂ ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರೆ. ಸದಾ ಕಾಲ ಕೊಹ್ಲಿಯ ಕೈ ಹಿಡಿದು ಓಡಾಡುವ ಅನುಷ್ಕಾ ಶರ್ಮಾ ಅವರ ಈ ನಡೆಯನ್ನು ಕೂಡ ಅನೇಕರು ಆಶ್ಚರ್ಯಗೊಂಡಿದ್ದಾರೆ.
ಇನ್ನು ಕೆಲವರು ಗಂಡ ಹೆಂಡತಿ ಅಂದರೆ ಅಲ್ಲಿ ಸರರ ವಿರಸ ಸರ್ವೆ ಸಾಮಾನ್ಯ, ತಮ್ಮ ಪತಿ ಅದ್ಯಾರೋ ನಟಿಯ ಫೋಟೊವನ್ನು ಮೆಚ್ಚಿಕೊಂಡ ಮಾತ್ರಕ್ಕೆ ಕೋಪ ಮಾಡಿಕೊಳ್ಳುವ ಹೆಣ್ಣು ಅನುಷ್ಕಾ ಶರ್ಮಾ ಅಲ್ಲ, ಅಷ್ಟೊಂದು ಅಭದ್ರತೆ ಅನುಷ್ಕಾಗೆ ಯಾವತ್ತು ಕಾಡಿಲ್ಲ, ಹೀಗಾಗಿ ಸುಮ್ಮನೆ ಚರ್ಚೆ ಮಾಡುವುದು ವ್ಯರ್ಥ ಎನ್ನುತ್ತಿದ್ದಾರೆ.
ಅಂದ್ಹಾಗೇ ವಿರಾಟ್ ಕೊಹ್ಲಿ ಮೆಚ್ಚಿಕೊಂಡಿದ್ದ ಅವನೀತ್ ಕೌರ್, ಚಿಕ್ಕ ವಯಸ್ಸಿನಲ್ಲಿ ಲೈಫ್ ಬಾಯ್ ಹ್ಯಾಂಡ್ ವಾಶ್ ಜಾಹೀರಾತು ಮಾಡಿದ್ದರು. ಸದ್ಯ ಹಿಂದಿ ಕಿರುತೆರೆ ವಲಯದಲ್ಲಿ ನಟಿಯಾಗಿ ಅವನೀತ್ ಕೌರ್ ಗುರುತಿಸಿಕೊಂಡಿದ್ದಾರೆ. ಧಾರಾವಾಹಿಗಳಿಗಿಂತ ರಿಯಾಲಿಟಿ ಶೋಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿರುವ ಅವನೀತ್, ಹಾಲಿವುಡ್‌ಗೆ ಕೂಡ ಲಗ್ಗೆ ಇಟ್ಟಿದ್ದಾರೆ. ಟಾಮ್ ಕ್ರೂಸ್ ಜೊತೆ ಮಿಷನ್ ಇಂಪಾಸಿಬಲ್‌ನಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ಇನ್ನೇನು ಈ ಈ ತಿಂಗಳು ತೆರೆಗೆ ಬರಲು ಸಿದ್ಧವಾಗಿದೆ.
ಇನ್ನು ಭಾರತದ ಸ್ಟಾರ್ ಪ್ಲೇಯರ್ ಶುಭಮನ್ ಗಿಲ್ ಜೊತೆ ಅವನೀತ್ ಕೌರ್ ಹೆಸರು ಆಗಾಗ ತಳುಕು ಹಾಕಿಕೊಳ್ಳುತ್ತೆ. ಇಬ್ಬರ ನಡುವೆ ಪ್ರೇಮಾಂಕುರವಾಗಿರುವ ಸುದ್ದಿ ಕೂಡ ಸದ್ದು ಮಾಡುತ್ತಿರುತ್ತೆ. ಇದಕ್ಕೆ ಪುರಾವೆ ಎನ್ನುವಂತೆ ಅವನೀತ್ ಕೌರ್ ಮತ್ತು ಶುಭಮನ್ ಗಿಲ್ ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಶುಭಮನ್ ಗಿಲ್ ಅವರನ್ನು ನೋಡಲೇಂದೇ ಅವನೀತ್ ಕೌರ್ ಕ್ರಿಕೆಟ್ ಪಂದ್ಯಗಳನ್ನು ನೋಡಲು ಕ್ರೀಡಾಂಗಣಕ್ಕೆ ಹೋಗಿದ್ದಾರೆ.


Click it and Unblock the Notifications











