ನಾನು ಇಲ್ಲಿ ಬರಲೇ ಬಾರದಿತ್ತು, ಬಿಗ್‌ ಬಾಸ್‌ನಲ್ಲಿ ಭಾವುಕರಾದ ಸಲ್ಮಾನ್ ಖಾನ್...!

ಬಿಗ್ ಬಾಸ್ ಕೇವಲ ಸುದೀಪ್‌ ಅವರಿಗೆ ಮಾತ್ರ ಎರಡನೇ ಮನೆ ಅಲ್ಲ, ಸಲ್ಮಾನ್ ಖಾನ್ ಅವರಿಗೂ ಕೂಡ ಬಿಗ್ ಬಾಸ್ ಎರಡನೇ ಮನೆ. 18 ವರ್ಷಗಳಿಂದ ಸಲ್ಮಾನ್ ಖಾನ್ ಈ ಸಂಬಂಧ ಉಳಿಸಿಕೊಂಡು ಬಂದಿದ್ದಾರೆ. ಪ್ರತಿ ಬಾರಿ ಕೂಡ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಆದರೆ.. ಯಾವತ್ತು ಕೂಡ ಈ 18 ವರ್ಷಗಳಲ್ಲಿ ಸಲ್ಮಾನ್ ಖಾನ್ ಈ ವೇದಿಕೆಯ ಮೇಲೆ ಭಾವುಕರಾಗಿಲ್ಲ. ಕಣ್ಣೀರಾಗಿಲ್ಲ.

ಆದರೆ.. ಈ ಸಲ ಸಲ್ಮಾನ್ ಖಾನ್‌ಗೆ ದುಃಖ ತಡೆದುಕೊಳ್ಳಲು ಆಗಲಿಲ್ಲ. ಹೀಗಾಗಿಯೇ ಬಿಗ್ ಬಾಸ್ ನಡೆಸುವಾಗ ಸಲ್ಮಾನ್ ನೋವಲ್ಲಿ ಮಾತನಾಡಿದ್ದಾರೆ. ನಾನು ಇಲ್ಲಿ ಬರಲೇಬಾರದಿತ್ತು ಎಂದು ಹೇಳಿದ್ದಾರೆ. ಹೌದು. ಅಸಲಿಗೆ ತಮ್ಮ ಅತ್ಯಾಪ್ತ ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್ ಖಾನ್ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾರೆ. ಜೀವ ಭಯದಲ್ಲಿಯೇ ಓಡಾಡುತ್ತಿದ್ದಾರೆ.

after-baba-siddiques-demise-salman-khan-broke-down-in-bigg-boss-18

ಇನ್ನೂ .. ಸಲ್ಮಾನ್ ಖಾನ್ ಅವರ ಸುತ್ತ ಮುತ್ತ ಮೊದಲಿಂದ ಬೌನ್ಸರ್‌ಗಳ ದಂಡು ಇರುತ್ತಿತ್ತು. ಭದ್ರತೆ ಹೆಚ್ಚಿತ್ತು. ಆ ಭದ್ರತೆ ಈಗ ಇನ್ನೂ ಹೆಚ್ಚಾಗಿದೆ. ಸದ್ಯಕ್ಕೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವಂತೆ ಸಲ್ಮಾನ್ ಖಾನ್‌ ಸುತ್ತ ಸರ್ಪಗಾವಲಿದೆ. ಹತ್ ಹತ್ರ 60 ಜನರಿಗೆ ಸಲ್ಮಾನ್ ಖಾನ್ ಪ್ರಾಣ ಉಳಿಸುವ ಜವಾಬ್ಧಾರಿಯನ್ನು ನೀಡಲಾಗಿದೆ. ಆದರೂ.. ಸಲ್ಮಾನ್ ಖಾನ್ ವಿಚಲಿತರಾಗಿದ್ದಾರೆ. ಬಾಬಾ ಸಿದ್ದಿಕಿಯ ನಿಧನದಿಂದ ದಿಗ್ಬ್ರಾಂತರಾಗಿದ್ದಾರೆ.

ಹಾಗಂಥ.. ಒಪ್ಪಿಕೊಂಡಿರುವ ಕೆಲಸವನ್ನು ಬಿಡಲು ಸಾಧ್ಯ ಇಲ್ಲ. ಹೀಗಾಗಿಯೇ ಮನದಲ್ಲಿರುವ ನೋವನ್ನೆಲ್ಲ ನುಂಗಿಕೊಂಡು ಸಲ್ಮಾನ್ ಖಾನ್ ಈ ಬಾರಿ ಬಿಗ್ ಬಾಸ್‌ನ ವಾರಾಂತ್ಯದ ಎಪಿಸೋಡ್‌ನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಡೆದ ರಂಪ-ರಾಮಾಯಣಕ್ಕೆ ಪ್ರತಿಕ್ರಿಯೆಯನ್ನು ನೀಡುತ್ತಾ ಭಾವುಕರಾಗಿದ್ದಾರೆ.

ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರ ಸಹೋದರಿ ಶಿಲ್ಪಾ ಶಿರೋಡ್ಕರ್ ಮತ್ತು ಅವಿನಾಶ್ ನಡುವೆ ಮಾಂಸಾಹಾರದ ಊಟಕ್ಕೆ ಸಂಬಂಧಿಸಿದಂತೆ ನಡೆದ ವಾಗ್ಯುದ್ದದ ಪಂಚಾಯ್ತಿಯನ್ನು ಮಾಡುವ ಸಮಯದಲ್ಲಿ ಶಿಲ್ಪಾ ಶಿರೋಡ್ಕರ್ ಅವರಿಗೆ ಸಲಹೆ ಸೂಚನೆಯನ್ನು ನೀಡಿದ ಸಲ್ಮಾನ್ ಖಾನ್ ಇದೇ ಸಮಯದಲ್ಲಿ ನಾನು ಇಲ್ಲಿ ಬರಲೇ ಬಾರದಿತ್ತು ಎನ್ನುವ ಭಾವನೆ ನನ್ನಲ್ಲಿದೆ. ಆದರೆ ವ್ಯಕ್ತಿಯೊಬ್ಬ ಯಾವ ಕೆಲಸವನ್ನು ಮಾಡಬೇಕು ಆ ಕೆಲಸವನ್ನು ಮಾಡಲೇಬೇಕು ಎಂದು ಗದ್ಗದಿತರಾಗಿದ್ದಾರೆ. ಸಲ್ಮಾನ್ ಖಾನ್ ಅವರ ಈ ಮಾತುಗಳನ್ನು ಕೇಳಿದ ನಂತರ ಆ ಕಡೆ ಶಿಲ್ಪಾ ಶಿರೋಡ್ಕರ್ ಕೂಡ ಕಣ್ಣೀರು ಹಾಕಿದ್ದಾರೆ.

ಸದ್ಯ ಇಂದಿನ ಕಾರ್ಯಕ್ರಮದ ಕುರಿತು ಕೇವಲ ಚಿಕ್ಕ ತುಣುಕು ಮಾತ್ರ ಬಿಡುಗಡೆಯಾಗಿದ್ದು, ಬಾಬಾ ಸಿದ್ದಿಕಿ ಹತ್ಯೆಯ ನೋವಲ್ಲಿ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ಹೇಗೆ ನಡೆಸಿಕೊಟ್ಟಿರಬಹುದು ಎನ್ನುವ ಕುತೂಹಲ ಈಗ ಅನೇಕರಲ್ಲಿದೆ. ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಬಾಬಾ ಸಿದ್ದಿಕಿ ಹತ್ಯೆಯ ಕುರಿತು ಅಥವಾ ಲಾರೆನ್ಸ್ ಬಿಷ್ಣೋಯ್ ಕುರಿತು ಏನಾದರೂ ಮಾತನಾಡಿರಬಹುದಾ ಎನ್ನುವ ಪ್ರಶ್ನೆ ಕೂಡ ಈಗ ಅನೇಕರನ್ನು ಕಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇಂದಿನ ಬಿಗ್ ಬಾಸ್ ಪ್ರೋಮೋ ಕೂಡ ವೈರಲ್ ಆಗುತ್ತಿದೆ.

ಅಂದ್ಹಾಗೇ ಬಿಗ್ ಬಾಸ್ ಚಿತ್ರೀಕರಣ ನಡೆಯುವ ಸಮಯದಲ್ಲಿ ಆಧಾರ ಕಾರ್ಡ್ ಇರದ ಯಾರಿಗೂ ಚಿತ್ರೀಕರಣದ ಸ್ಥಳದಲ್ಲಿ ಬಿಡಬಾರದೆನ್ನುವ ತೀರ್ಮಾನವನ್ನು ಸಲ್ಮಾನ್ ಖಾನ್ ಅವರನ್ನು ಕಾಯುತ್ತಿರುವ ತಂಡ ಮಾಡಿದೆ. ಇನ್ನೂ ಬಿಗ್ ಬಾಸ್ ಚಿತ್ರೀಕರಣದ ಸ್ಥಳದ ಸುತ್ತ ಮುತ್ತ ಕೂಡ ಹದ್ದಿನ ಕಣ್ಣಿಟ್ಟಿರುವ ಈ ತಂಡ ಸದ್ಯಕ್ಕೆ ಸಲ್ಮಾನ್ ಖಾನ್‌ ಪ್ರಾಣಕ್ಕೆ ಕುತ್ತು ಬಾರದಂತೆ ತೀವೃ ಎಚ್ಚರಿಕೆಯನ್ನು ವಹಿಸುತ್ತಿದೆ.

More from Filmibeat

Read more about: salman khan bigg boss bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X