For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನದ ಬಳಿಕ ನಿರ್ದೇಶನಕ್ಕಿಳಿದ ಕಿರಣ್ ರಾವ್: ಮಾಜಿ ಪತ್ನಿ ಚಿತ್ರಕ್ಕೆ ಆಮಿರ್ ಖಾನ್ ನಿರ್ಮಾಪಕ

  |

  2021ರಲ್ಲಿ ವಿಚ್ಛೇದನ ನೀಡಿದ ಜೋಡಿಗಳಲ್ಲಿ ಆಮಿರ್ ಖಾನ್ ಹಾಗೂ ಕಿರಣ್ ರಾವ್ ಜೋಡಿ ಕೂಡ ಒಂದು. ಇದು ಆಮಿರ್ ಖಾನ್ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿತ್ತು. ಆಮಿರ್ ಖಾನ್ ಹಾಗೂ ಕಿರಣ್ ರಾವ್ ಇಬ್ಬರೂ ಜಂಟಿಯಾಗಿ ಜುಲೈ 3 ರಂದು ಇಬ್ಬರು ಬೇರೆಯಾಗುತ್ತಿರುವ ವಿಷಯವನ್ನು ತಿಳಿಸಿದ್ದರು. 15 ವರ್ಷಗಳ ಬಳಿಕ ಬೇರೆಯಾಗಲು ತೀರ್ಮಾನಿಸಿದ್ದ ಈ ಜೋಡಿ ಬಗ್ಗೆ ಬಾಲಿವುಡ್ ಅಚ್ಚರಿ ವ್ಯಕ್ತಪಡಿಸಿತ್ತು.

  ವಿಚ್ಛೇದನ ವೇಳೆ ತಮ್ಮ ಪುತ್ರ ಆಜಾದ್‌ ರಾವ್ ಖಾನ್‌ಗೆ ಪೋಷಕರಾಗಿ ಇರುವುದಾಗಿ ಹೇಳಿದ್ದರು. 2011, ಡಿಸೆಂಬರ್ 05 ರಂದು ಬಾಡಿಗೆ ತಾಯಿಯ ಮೂಲಕ ಪುತ್ರನನ್ನು ಪಡೆದಿದ್ದರು. ಇದೇ ವೇಳೆ ಇಬ್ಬರೂ ಘೋಷಣೆ ಮಾಡಿದ ಪ್ರಮುಖ ಅಂಶದಲ್ಲಿ ಜೊತೆ ಸೇರಿ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಅದರಂತೆಯೇ, ವಿಚ್ಛೇದನದ ಬಳಿಕ ಆಮಿರ್ ಹಾಗೂ ಕಿರಣ್ ರಾವ್ ಜೋಡಿ ಹೊಸ ಸಿನಿಮಾಗೆ ಕೈ ಹಾಕಿದೆ.

  ವಿಚ್ಛೇದನದ ಬಳಿಕ ಆಮಿರ್-ಕಿರಣ್ ಸಿನಿಮಾ

  ವಿಚ್ಛೇದನದ ಬಳಿಕ ಆಮಿರ್-ಕಿರಣ್ ಸಿನಿಮಾ

  ಆಮಿರ್ ಖಾನ್ ಮಾಜಿ ಪತ್ನಿ ಕಿರಣ್ ವಿಚ್ಛೇದನದ ಬಳಿಕವೂ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಸ್ನೇಹಿತರಾಗಿ ಇರುವ ಈ ಜೋಡಿ ಹೊಸ ಸಾಹಸಕ್ಕೆ ಕೈ ಹಾಕಿದೆ. ಅದರಲ್ಲೂ ಆಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಸಿನಿಮಾಗಾಗಿ ಆಮಿರ್ ಖಾನ್- ಕಿರಣ್ ರಾವ್ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ವಿಚ್ಛೇದನ ನೀಡಿದ ಬಳಿಕ ಒಬ್ಬರಿಗೊಬ್ಬರು ದೂರವೇ ಉಳಿದು ಬಿಡುತ್ತಾರೆ. ಆದರೆ, ಈ ಜೋಡಿ ಸಿನಿಮಾ ಮಾಡಲು ಸಜ್ಜಾಗಿದೆ.

  12 ವರ್ಷಗಳ ಬಳಿಕ ಕಿರಣ್ ರಾವ್ ನಿರ್ದೇಶನ

  12 ವರ್ಷಗಳ ಬಳಿಕ ಕಿರಣ್ ರಾವ್ ನಿರ್ದೇಶನ

  ಆಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಬಾಲಿವುಡ್‌ನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದವರು. ಆಮಿರ್ ಖಾನ್ ವಿವಾಹದ ಬಳಿಕ ಕಿರಣ್ 'ಧೋಬಿ ಘಾಟ್' ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆ ಬಳಿಕ ಸಿನಿಮಾ ನಿರ್ದೇಶಕನಕ್ಕೆ ತಲೆ ಕೂಡ ಹಾಕಿರಲಿಲ್ಲ. ಈಗ ವಿಚ್ಛೇದನದ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಆಮಿರ್ ಖಾನ್‌ಗೆ ಕಿರಣ್ ರಾವ್ ಕಥೆ ಹೇಳಿದ ಬಳಿಕ ಇಷ್ಟಪಟ್ಟು ಸಿನಿಮಾಗೆ ಹಣ ಹೂಡಲು ಮುಂದಾಗಿದ್ದಾರೆ.

  ಹಾಸ್ಯ ಚಿತ್ರಕ್ಕೆ ಕಿರಣ್ ರಾವ್ ನಿರ್ದೇಶನ

  ಹಾಸ್ಯ ಚಿತ್ರಕ್ಕೆ ಕಿರಣ್ ರಾವ್ ನಿರ್ದೇಶನ

  ಬಹಳ ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿದಿರುವ ಕಿರಣ್ ರಾವ್ ಎಂಟರ್‌ಟೈನರ್ ಕಥೆಯನ್ನು ತೆರೆಮೇಲೆ ತರುವುದಕ್ಕೆ ನಿರ್ಧರಿಸಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಕೂಡ ಶುರುವಾಗಿದೆ. ಜನವರಿ 8ರಿಂದ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಮೊದಲ ಹಂತದ ಚಿತ್ರೀಕರಣ ಜನವರಿ 20ರವರೆಗೆ ನಡೆಯಲಿದೆ ಎನ್ನಲಾಗಿದೆ. ಬಿಪ್ಲಾಬ್ ಗೋಸ್ವಾಮಿ ಕಥೆ ರಚಿಸಿದ್ದು, ಸ್ನೇಹ ದೇಸಾಯಿ ಚಿತ್ರಕಥೆ ರಚಿಸಿದ್ದಾರೆ. ಮೂರು ಪಾತ್ರಗಳ ನಡುವೆ ನಡೆಯುವ ಈ ಸಿನಿಮಾಗೆ ಸ್ಪರ್ಶ್ ಶ್ರಿವತ್ಸವ್, ಪ್ರತಿಭಾ ರಂಟಾ ಹಾಗೂ ನಿತಾಂಶಿ ಗೋಯೆಲ್ ಆಯ್ಕೆ ಆಗಿದ್ದಾರೆಂದು ಬಾಲಿವುಡ್‌ನಲ್ಲಿ ವರದಿಯಾಗಿದೆ.

  ಆಮಿರ್ ಸಿನಿಮಾಗೆ ಕಿರಣ್ ಸಹ ನಿರ್ಮಾಪಕಿ

  ಆಮಿರ್ ಸಿನಿಮಾಗೆ ಕಿರಣ್ ಸಹ ನಿರ್ಮಾಪಕಿ

  2001ರಲ್ಲಿ 'ಲಾಗಾನ್' ಸಿನಿಮಾಗೆ ಸಹಾಯಕ ನಿರ್ದೇಶಕಿಯಾಗಿ ಕಿರಣ್ ರಾವ್ ಕೆಲಸ ಮಾಡಿದ್ದರು. ಇದೇ ವೇಳೆ ಇಬ್ಬರಲ್ಲೂ ಲವ್ ಆಗಿ ನಾಲ್ಕು ವರ್ಷಗಳ ಬಳಿಕ ವಿವಾಹವಾಗಿದ್ದರು. ಮದುವೆ ಬಳಿಕವೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಕಿರಣ್ ರಾವ್, ಮಾಜಿ ಪತಿ ಆಮಿರ್ ಖಾನ್ ನಟಿಸುತ್ತಿರುವ 'ಲಾಲ್ ಸಿಂಗ್ ಚಡ್ಡ' ಚಿತ್ರಕ್ಕೆ ಸಹ-ನಿರ್ಮಾಪಕ ಕೂಡ ಆಗಿದ್ದಾರೆ. ಏಪ್ರಿಲ್ 14ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.

  English summary
  After divorce Aamir Khan to produce two new films one is directed by ex-wife Kiran Rao. 12 years after her debut in Dhobi Ghat, and her ex-husband Aamir has joined as producer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion