ಕಾಂತಾರ ಬಳಿಕ ಬಂದ ಯಾವ ಸೌತ್ ಚಿತ್ರವೂ ಸಹ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ 10 ಕೋಟಿ ದಾಟಿಲ್ಲ!

ಪ್ಯಾನ್ ಇಂಡಿಯಾ ಯುಗ ಆರಂಭವಾದ ಮೇಲೆ ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರಿಗಳೆಂಬ ಬಾರ್ಡರ್ ಇಲ್ಲ ಈಗ ಎಲ್ಲವೂ ಒಂದೇ ಎಂಬ ಮಾತುಗಳನ್ನು ಸ್ಟಾರ್ ನಟ ಹಾಗೂ ನಿರ್ದೇಶಕರು ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಾರೆಯೇ ಹೊರತು ಇನ್ನೂ ಸಹ ಸೌತ್ ಸಿನಿಮಾ ಹಾಗೂ ನಾರ್ತ್ ಸಿನಿಮಾ ಎಂಬ ವಿಭಾಗಗಳು ಬಾಕ್ಸ್ ಆಫೀಸ್‌ ವಿಚಾರದಲ್ಲಿ ದೊಡ್ಡದಾಗಿದ್ದೇ ಈ ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ ದೊಡ್ಡದಾದ ಬಳಿಕ.

ಹೌದು, ಈ ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಮೇಲೆ ಸೌತ್ ಸಿನಿಮಾ ಭಾರತ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಗಳಿಕೆ ಮಾಡ್ತಾ ಅಥವಾ ಬಾಲಿವುಡ್‌ನ ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಗಳಿಕೆ ಮಾಡ್ತಾ ಎಂಬ ಪೈಪೋಟಿ ಶುರುವಾಗಿದೆ. ಹಾಗೆಂದ ಮಾತ್ರಕ್ಕೆ ಈ ಪೈಪೋಟಿಯಿಂದ ಯಾವ ಚಿತ್ರರಂಗಕ್ಕೂ ಹಿನ್ನಡೆಯೇನೂ ಇಲ್ಲ. ಈ ಪ್ರವೃತ್ತಿಯಿಂದ ಸೌತ್ ಹಾಗೂ ನಾರ್ಥ್ ಎರಡೂ ಕಡೆಯಿಂದಲೂ ಇನ್ನೂ ಹೆಚ್ಚೆಚ್ಚು ಒಳ್ಳೆಯ ಸಿನಿಮಾಗಳನ್ನು ನಿರೀಕ್ಷಿಸಬಹುದಾಗಿದೆ.

After Kantara no south indian films have got success in Hindi box office

ಇನ್ನು ಇತ್ತೀಚೆಗಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳು ಅಬ್ಬರಿಸುತ್ತಿವೆ. ಅದರಲ್ಲಿಯೂ ಹಿಂದಿಗೂ ಸಹ ಡಬ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿವೆ. ವಿಶೇಷವಾಗಿ ಕಳೆದ ವರ್ಷ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಹಿಂದಿ ಚಿತ್ರಗಳಿಗಿಂತ ದಕ್ಷಿಣ ಭಾರತದ ಚಿತ್ರಗಳ ಸಕ್ಸಸ್ ಶೇಕಡಾಂಶ ಹಾಗೂ ಹಣ ಗಳಿಕೆಯೇ ದೊಡ್ಡದಿತ್ತು. ಸ್ಟಾರ್ ನಟರು ಹಾಗೂ ದೊಡ್ಡ ಮಟ್ಟದ ಹೈಪ್ ಹುಟ್ಟಿಸಿದ್ದ ಚಿತ್ರಗಳು ಮಾತ್ರವಲ್ಲದೇ ಸಾಧಾರಣ ನಟರ ಚಿತ್ರಗಳೂ ಸಹ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದವು.

ಹೀಗೆ ಕಳೆದ ವರ್ಷ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ ಬೊಬ್ಬಿರಿದಿದ್ದ ಸೌತ್ ಚಿತ್ರಗಳು ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಆ ಮೋಡಿಯನ್ನು ಮಾಡುವಲ್ಲಿ ಯಶಸ್ವಿಯಾಗಿಲ್ಲ. ಪ್ಯಾನ್ ಇಂಡಿಯಾ ಟ್ರೆಂಡ್ ಅಡಿಯಲ್ಲಿ ಬಿಡುಗಡೆಗೊಂಡ ಚಿತ್ರಗಳೆಲ್ಲಾ ಮಕಾಡೆ ಮಲಗಿಬಿಟ್ಟಿವೆ. ಹಾಗೆ ನೋಡಿದ್ರೆ ಈ ವರ್ಷ ಮಾತ್ರವಲ್ಲ, ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಂಡ ಕಾಂತಾರ ಹಿಂದಿ ವರ್ಷನ್ ಬಳಿಕ ಹಿಂದಿಗ ಡಬ್ ಆದ ಯಾವ ಸೌತ್ ಚಿತ್ರವೂ ಸಹ ಐದು ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನೂ ಸಹ ಮಾಡಿಲ್ಲ.

After Kantara no south indian films have got success in Hindi box office

ಹೌದು, ಕಾಂತಾರ ಬಳಿಕ ಬಿಡುಗಡೆಯಾದ ತೆಲುಗಿನ ಪ್ಯಾನ್ ಇಂಡಿಯಾ ಚಿತ್ರವಾದ ಯಶೋಧ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಒಂದೂವರೆ ಕೋಟಿಯನ್ನು ಗಳಿಸಿದರೆ, ಚಿರಂಜೀವಿ ನಟನೆಯ ಗಾಡ್‌ಫಾದರ್ 1.2 ಕೋಟಿ, ವಾಲ್ತೇರು ವೀರಯ್ಯ 1.8 ಕೋಟಿ, ನಾಗಾರ್ಜುನ ಅಭಿನಯದ ದ ಘೋಸ್ಟ್ 10 ಲಕ್ಷ, ಸಂದೀಪ್ ಕಿಶನ್ ನಟನೆಯ ಮೈಖೆಲ್ 30 ಲಕ್ಷ ಗಳಿಸಿದವು. ಇನ್ನು ತಮಿಳು ಹಾಗೂ ಕನ್ನಡದಿಂದ ಹೆಚ್ಚೇನೂ ಪ್ಯಾನ್ ಇಂಡಿಯಾ ಚಿತ್ರಗಳು ಬಿಡುಗಡೆಯಾಗಿಲ್ಲ.

ಕನ್ನಡದಲ್ಲಿ ಬನಾರಸ್, ವಿಜಯಾನಂದ ಹಾಗೂ ಕಬ್ಜ ಚಿತ್ರಗಳು ಹಿಂದಿಗೆ ಡಬ್ ಆಗಿ ಬಿಡುಗಡೆಯಾಗಿದ್ದವು. ಈ ಪೈಕಿ ಬನಾರಸ್ ಹಾಗೂ ವಿಜಯಾನಂದ ಕಲೆಕ್ಷನ್ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಹತ್ತು ಲಕ್ಷ ದಾಟಿಲ್ಲ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ವರದಿಗಳು ತಿಳಿಸಿದ್ದರೆ, ಕನ್ನಡದಲ್ಲಿ ಅಬ್ಬರದ ಕಲೆಕ್ಷನ್ ಮಾಡಿರುವ ಕಬ್ಜ ಚಿತ್ರ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ನಾಲ್ಕು ಕೋಟಿ ಗಳಿಸಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ತಿಳಿಸಿದ್ದಾರೆ.

ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರು ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ದಸರಾ 6 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಮಾಡಿದ್ದು, ಈ ಚಿತ್ರವೂ ಸಹ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಜಾದೂ ಮಾಡುವಲ್ಲಿ ವಿಫಲವಾಗಿದೆ. ಒಟ್ಟಿನಲ್ಲಿ ಪ್ಯಾನ್ ಇಂಡಿಯಾ ಟ್ಯಾಗ್ ಹೊತ್ತು ಬಂದ ಎಲ್ಲಾ ಚಿತ್ರಗಳೂ ಹಿಂದಿ ಮಾರ್ಕೆಟ್‌ನಲ್ಲಿ ಕೋಟಿ ಕೋಟಿ ಗಳಿಸುವುದು ಸುಲಭದ ಮಾತಲ್ಲ. ಕಾಂತಾರ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ 71 ಕೋಟಿ ಗಳಿಕೆ ಮಾಡಿತ್ತು ಹಾಗೂ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಇಷ್ಟು ದೊಡ್ಡ ಕಲೆಕ್ಷನ್ ಮಾಡಿದ ಕೊನೆ ಸೌತ್ ಸಿನಿಮಾ ಎನಿಸಿಕೊಂಡಿದೆ.

More from Filmibeat

English summary
After Kantara no south indian films have got success in Hindi box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X