For Quick Alerts
  ALLOW NOTIFICATIONS  
  For Daily Alerts

  ಕರಣ್ ಬಳಿಕ ಶಾರುಖ್ ಸಂಸ್ಥೆಯಿಂದನೂ ಕಾರ್ತಿಕ್ ಆರ್ಯನ್ ಔಟ್: ಕಾರಣವೇನು?

  |

  ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಕರಣ್ ಜೋಹರ್ ಧರ್ಮ ಸಂಸ್ಥೆಯಿಂದ ಬ್ಯಾನ್ ಆದ ಬೆನ್ನಲ್ಲೇ ಈಗ ಶಾರುಖ್ ಖಾನ್ ಅವರ ರೆಡ್ ಚಿಲ್ಲಿಸ್ ಬ್ಯಾನರ್ ನಿಂದನೂ ಹೊರದಬ್ಬಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಸುದ್ದಿ ಕೇಳಿ ಕಾರ್ತಿಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಟ್ಟಿಗೆದ್ದಿದ್ದಾರೆ.

  ಕರಣ್ ಜೋಹರ್ ನಿರ್ಮಾಣದ ದೋಸ್ತಾನ-2 ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ ಸೃಜನಶೀಲ ಭಿನ್ನಾಭಿಪ್ರಾಯ ಎನ್ನುವ ಕಾರಣ ಕೇಳಿ ಕಾರ್ತಿಕ್ ಚಿತ್ರದ ಭಾಗವಾಗಿಲ್ಲ ಎಂದು ಧರ್ಮ ಸಂಸ್ಥೆ ಹೇಳಿತ್ತು. ಆದರೆ ಮೂಲಗಳ ಪ್ರಕಾರ ಕಾರ್ತಿಕ್ ಗೆ ವೃತ್ತಿಪರತೆ ಇಲ್ಲ ಎಂದು ಆರೋಪಿಸಿ ಸಿನಿಮಾದಿಂದ ಹೊರಹಾಕಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು.

  ದೋಸ್ತಾನ-2 ಚಿತ್ರದಿಂದ ಮಾತ್ರವಲ್ಲದೇ ಧರ್ಮ ಸಂಸ್ಥೆಯಿಂದನೇ ಶಾಶ್ವತವಾಗಿ ಹೊರಗಿಡಲಾಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದೀಗ ಶಾರುಖ್ ಸಂಸ್ಥೆಯಿಂದನೂ ಕಾರ್ತಿಕ್ ನನ್ನು ಹೊರದಬ್ಬಲಾಗಿದೆ. ಮುುಂದೆ ಓದಿ...

  ಶಾರುಖ್ ನಿರ್ಮಾಣದ ಸಿನಿಮಾದಿಂದ ಕಾರ್ತಿಕ್ ಔಟ್

  ಶಾರುಖ್ ನಿರ್ಮಾಣದ ಸಿನಿಮಾದಿಂದ ಕಾರ್ತಿಕ್ ಔಟ್

  ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ನಿರ್ಮಾಣದ 'ಗುಡ್ ಬೈ ಫ್ರಡ್ಡಿ' (ತಾತ್ಕಾಲಿಕ ಹೆಸರು) ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಟಿಸುತ್ತಿದ್ದರು. ಚಿತ್ರಕ್ಕೆ ಅಜಯ್ ಬಹ್ಲ್ ಆಕ್ಷನ್ ಕಟ್ ಹೇಳುತ್ತಿದ್ದು, ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೀಗ ಚಿತ್ರದಿಂದ ಕಾರ್ತಿಕ್ ಆರ್ಯನ್ ಔಟ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  ಚಿತ್ರತಂಡದ ಮೂಲ ಹೇಳುವುದೇನು?

  ಚಿತ್ರತಂಡದ ಮೂಲ ಹೇಳುವುದೇನು?

  ಈ ಬಗ್ಗೆ ಆಂಗ್ಲ ವೆಬ್ ಪೋರ್ಟಲ್ ಬಾಲಿವುಡ್ ಹಂಗಾಮಗೆ ಚಿತ್ರತಂಡದ ಮೂಲ ನೀಡಿದ ಮಾಹಿತಿ ಪ್ರಕಾರ, 'ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ನಿರ್ಮಾಣದ, ಅಜಯ್ ಬಹ್ಲ್ ನಿರ್ದೇಶನದ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಟಿಸಬೇಕಿತ್ತು. ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಈ ಯೋಜನೆಯಿಂದ ಹೊರನಡೆದಿದ್ದಾರೆ' ಎಂದು ಹೇಳಿದ್ದಾರೆ.

  ಸೃಜನಶೀಲ ಭಿನ್ನಾಭಿಪ್ರಾಯ ಎನ್ನುತ್ತಿದ್ದಾರೆ

  ಸೃಜನಶೀಲ ಭಿನ್ನಾಭಿಪ್ರಾಯ ಎನ್ನುತ್ತಿದ್ದಾರೆ

  ಕಾರ್ತಿಕ್ ಆರ್ಯನ್ ಮತ್ತು ನಿರ್ದೇಶಕ ಅಜಯ್ ಬಹ್ಲ್ ನಡುವೆ ಸೃಜನಶೀಲ ಭಿನ್ನಾಭಿಪ್ರಾಯ ಇದ್ದ ಕಾರಣ ಕಾರ್ತಿಕ್ ಆರ್ಯನ್ ಸಿನಿಮಾದಿಂದ ಹೊರನಡೆದಿರುವುದಾಗಿ ಹೇಳಿದ್ದಾರೆ. ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಿದ ಬಳಿಕ ಕಾರ್ತಿಕ್ ಆರ್ಯನ್ ಅವರಿಗೆ ಇಷ್ಟವಾಗಿಲ್ಲ ಹಾಗಾಗಿ ಚಿತ್ರದಿಂದ ದೂರ ಸರಿದಿದ್ದಾರೆ ಎಂದು ಹೇಳಿದ್ದಾರೆ.

  ಥ್ರಿಲ್ಲರ್ ಸಿನಿಮಾ ಬೇಡ ಎಂದ್ರಾ ಕಾರ್ತಿಕ್?

  ಥ್ರಿಲ್ಲರ್ ಸಿನಿಮಾ ಬೇಡ ಎಂದ್ರಾ ಕಾರ್ತಿಕ್?

  ಆದರೆ ಮತ್ತೊಂದು ಮೂಲದ ಪ್ರಕಾರ, ಕಾರ್ತಿಕ್ ಆರ್ಯನ್ ಎರಡು ವರ್ಷಗಳ ಹಿಂದಿಯೇ ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಇತ್ತೀಚಿಗೆ ಕೊರೊನಾ ಬಳಿಕ ಥ್ರಿಲ್ಲರ್ ಚಿತ್ರ ಧಮಾಕ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ಸಿನಿಮಾ ಬಳಿಕ ತಕ್ಷಣಕ್ಕೆ ಮತ್ತೊಂದು ಥ್ರಿಲ್ಲರ್ ಚಿತ್ರ ಮಾಡುವುದು ಬೇಡ, ವೃತ್ತಿ ಜೀವನಕ್ಕೆ ಸೂಕ್ತವಲ್ಲ ಎನ್ನುವ ಕಾರಣಕ್ಕೆ ಚಿತ್ರದಿಂದ ಹೊರಗುಳಿದಿದ್ದಾರೆ' ಎಂದು ಹೇಳಿದ್ದಾರೆ.

  2 ಕೋಟಿ ರೂ. ವಾಪಸ್ ಮಾಡಿದ ಕಾರ್ತಿಕ್

  2 ಕೋಟಿ ರೂ. ವಾಪಸ್ ಮಾಡಿದ ಕಾರ್ತಿಕ್

  ಆದರ ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಈ ಬಗ್ಗೆ ಕಾರ್ತಿಕ್ ಆಗಲಿ ಅಥವಾ ರೆಡ್ ಚಿಲ್ಲೀಸ್ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ ಕಾರ್ತಿಕ್ ಚಿತ್ರಕ್ಕೆ ಒಪ್ಪಿಗೆ ನೀಡಲು ಪಡೆದಿದ್ದ ಸೈನಿಂಗ್ ಹಣ 2 ಕೋಟಿ ರೂ. ಅನ್ನು ವಾಪಸ್ ಮಾಡಿದ್ದಾರಂತೆ. ಸದ್ಯ ಕಾರ್ತಿಕ್ ಜಾಗಕ್ಕೆ ಮತ್ತೋರ್ವ ನಟನನ್ನು ಹುಡುಕುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇನ್ನೂ ದಾಸ್ತಾನ-2ಗೂ ಇನ್ನೂ ನಾಯಕ ಫಿಕ್ಸ್ ಆಗಿಲ್ಲ.

  ಇನ್ಯಾವತ್ತೂ Salman Khan ಸಿನಿಮಾ ವಿಮರ್ಶೆ ಮಾಡೋದಿಲ್ಲ ಎಂದ‌ KRK | Filmibeat Kannada
  ಅಭಿಮಾನಿಗಳ ಆಕ್ರೋಶ

  ಅಭಿಮಾನಿಗಳ ಆಕ್ರೋಶ

  ಕಾರ್ತಿಕ್ ಆರ್ಯನನ್ನು ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾದಿಂದ ಹೊರ ಹಾಕುತ್ತಿದ್ದಂತೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಎರಡು ಸಂಸ್ಥೆ ಒಂದೇ ಕಾರಣ ಹೇಳಿ ಕಾರ್ತಿಕ್ ನನ್ನು ಹಾಕಿದೆ. ಇದನ್ನು ನಂಬಲು ಅಸಾಧ್ಯ, ಇದರ ಹಿಂದೆ ಬೇರೆ ಉದ್ದೇಶವಿದೆ ಎನ್ನುತ್ತಿದ್ದಾರೆ. ಕರಣ್ ಮತ್ತು ಶಾರುಖ್ ಸಂಸ್ಥೆ ಸುಳ್ಳು ಹೆಳುತ್ತಿದೆ ಎಂದು ಕಿಡಿ ಕಾರುತ್ತಿದ್ದಾರೆ.

  English summary
  After Karan Johar's Dostana 2, Kartik Aaryan now out from Shah rukh Khan's film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X