ಆಲಿಯಾ ಭಟ್ ಬಿಟ್ಟ ಬಾಣ ಆಕೆಗೆ ಮುಳುವಾಯ್ತು!
ಆಲಿಯಾ ಭಟ್ ಪ್ರಸ್ತುತ ಬಾಲಿವುಡ್‌ನಲ್ಲಿ ಜನಪ್ರಿಯ ನಟಿಯರಲ್ಲಿ ಒಬ್ಬರು. ಆಲಿಯಾ ಭಟ್ ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯಾಗಿದ್ದು, ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಮತ್ತು ನಟನೆಯಲ್ಲಿ ತನ್ನ ಸಾಮರ್ಥ್ಯವನ್ನು ಹಲವು ಪಾತ್ರಗಳ ಮೂಲಕ ಸಾಬೀತುಪಡಿಸಿದ್ದಾರೆ.
ಆದರೆ ಆಲಿಯಾ ಭಟ್ ಬೆನ್ನು ಬಿಡುತ್ತಿಲ್ಲ ನೆಪೋಟಿಸಂ ಭೂತ. ಆಲಿಯಾ ಭಟ್, ಮಹೇಶ್ ಭಟ್ ಮತ್ತು ಸೋನಿ ರಜ್ದಾನ್ ಮಗಳು ಜೊತೆಗೆ ಈಕೆಗೆ ಕರಣ್ ಜೋಹರ್ ಮಾರ್ಗದರ್ಶಕ. ಹೀಗಾಗಿ ಯಾವಾಗಲೂ ಆಲಿಯಾಭಟ್ ನೆಪೋಟಿಸಂ ಚರ್ಚೆಯ ಕೇಂದ್ರ ಬಿಂದುವಾಗಿರುತ್ತಾರೆ.
ಆದರೆ ಇಷ್ಟು ದಿನ ಆಲಿಯಾ ಭಟ್ ನೆಪೋಟಿಸಂ ಅಂದರೆ ಸ್ವಜನಪಕ್ಷಪಾತದ ಬಗ್ಗೆ ಎಲ್ಲೂ ಅಷ್ಟಾಗಿ ಮಾತನಡಿರಲಿಲ್ಲ. ಇತ್ತೀಚಿಗಿನ ಸಂದರ್ಶನದಲ್ಲಿ ಈ ಬಗ್ಗೆ ಆಲಿಯಾ ಭಟ್ ಕೊನೆಗೂ ಮೌನ ಮುರಿದಿದ್ದಾರೆ. ಆದರೆ ಆಲಿಯಾ ಆಡಿದ ಮಾತುಗಳು ಆಕೆಗೆ ಮುಳುವಾಗಿವೆ.

'ಮಿಡ್-ಡೇ'ಗೆ ನೀಡಿದ ಸಂದರ್ಶನದಲ್ಲಿ, ಆಲಿಯಾ ಭಟ್ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಲಿಯಾ ಕೂಡ ಕರೀನಾ ಕಪೂರ್ ಖಾನ್ ಅವರಂತೆಯೇ ಹೇಳಿಕೆ ನೀಡಿದ್ದಾರೆ. "ನಾನು ಮಾತಿನಲ್ಲಿ ನನ್ನನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನೀವು ನನ್ನನ್ನು ಇಷ್ಟಪಡದಿದ್ದರೆ, ನನ್ನನ್ನು ನೋಡಬೇಡಿ. ನಾನು ಅದಕ್ಕೆ ಏನು ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಆಲಿಯಾ ಭಟ್ ನೀಡಿದ ಈ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಆಲಿಯಾ ಭಟ್ ಹೇಳಿಕೆ ಟ್ರೆಂಡ್ ಆಗುತ್ತಿದೆ. ಅನೇಕರಿಗೆ ಆಲಿಯಾ ಭಟ್ ಹೇಳಿಕೆಯನ್ನು ವಿರೋಧಿಸಿದ್ದಾರೆ. ಇನ್ನು ಕೆಲವರು ಆಲಿಯಾಳನ್ನು ನಿಂದಿಸುತ್ತಿದ್ದಾರೆ. ಕೆಲವರು ಆಲಿಯಾ 'ಅಹಂಕಾರಿ' ಎಂದು ಕರೆಯುತ್ತಿದ್ದಾರೆ. ಈ ರೀತಿಯ ಹೇಳಿಕೆ ನೀಡುವ ಬದಲು ಸಿನಿಮಾ ನೋಡಿ ಎನ್ನಬಹುದಿತ್ತು ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ.

ಆಲಿಯಾ ಭಟ್ ನೀಡಿರುವ ಈ ಹೇಳಿಕೆ ಆಕೆಯ ಮುಂದಿನ ಚಿತ್ರ 'ಬಹ್ಮಾಸ್ತ್ರ'ಕ್ಕೆ ತೊಂದರೆ ಆಗುವ ಸೂಚನೆ ಕೊಟ್ಟಿದೆ. ಯಾಕೆಂದರೆ ಆಲಿಯಾ ಕೊಟ್ಟ ಈ ಹೇಳಿಕೆಯಿಂದಲೇ, ಬಹ್ಮಾಸ್ತ್ರ ಚಿತ್ರವನ್ನು ಬಹಿಷ್ಕರಿಸಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಾಗಾಗಿ ಈಗ ಬಹ್ಮಾಸ್ತ್ರ ಚಿತ್ರತಂಡಕ್ಕೂ ಆತಂಕ ಎದುರಾಗಿದೆ. ಈ ಚಿತ್ರದ ಬಾಯ್‌ಕಾಟ್ ಟ್ರೆಂಡ್ ಈಗಿನಿಂದಲೇ ಶುರುವಾದಂತಿದೆ.
Recommended Video
ಮೊದಲೇ ಬಾಲಿವುಡ್ ಸಿನಿಮಾಗಳು ಸಾಲು, ಸಾಲಾಗಿ ಸೋಲು ಕಾಣುತ್ತಿವೆ. ಈಗ ಈ ಸಾಲಿಗೆ ಬ್ರಹ್ಮಾಸ್ತ್ರ ಕೂಡ ಸೇರುವ ಆತಂಕ ಸೃಷ್ಟಿಯಾಗಿದೆ. ಈ ಹಿಂದೆ ನಟಿ ಕರೀನಾ ಕಪೂರ್ ಮತ್ತು ಆಮಿರ್ ಖಾನ್ ಕೊಟ್ಟ ಹೇಳಿಕೆಯಿಂದಾಗಿ, 'ಲಾಲ್ ಸಿಂಗ್ ಚೆಡ್ಡ' ಚಿತ್ರದ ಕಲೆಕ್ಷನ್ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿತ್ತು.


Click it and Unblock the Notifications