ಕರೀನಾ ಕಪೂರಿಂದ ಮೂವರಿಗೆ ಸೋಂಕು: ಯಾರಿಗೆಲ್ಲಾ ಕಾದಿದೆ ಕಂಟಕ?

ಕೊರೊನಾ ಪ್ರಕರಗಳು ಕಡಿಮೆ ಆಗುತ್ತಲೇ ಜನ ಮೈ ಮರೆಯುತ್ತಿದ್ದಾರೆ. ಆದರೆ ಈಗ ಮತ್ತೆ ಕೊರೊನಾ ಹಾವಳಿ ಆರಂಭ ಆಗಿದೆ. ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ರೂಪಾಂತರಿ ಕೊರೊನ ಓಮಿಕ್ರಾನ್ ರೂಪದಲ್ಲೂ ದೇಹ ಹೊಕ್ಕುತ್ತಿದೆ. ಸದ್ಯ ಬಾಲಿವುಡ್‌ನಲ್ಲಿ ಈ ಕೊರೊನಾ ಮತ್ತು ಕರೀನಾ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಅಮೃತಾ ಅರೋರಾ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಆದರೂ ಕೂಡ ಇವರು ನಿಯಮ ಮೀರಿ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ, ಕೊರೊನಾ ನಿಯಮ ಉಲ್ಲಂಘಿಸಿ ವಿವಿಧ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ.

ಈ ನಟಿಯರ ಸಂಪರ್ಕಕ್ಕೆ ಬಂದವರು ಕೂಡಲೇ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮುಂಬೈ ಬೃಹತ್ ನಗರಪಾಲಿಕೆ ಆದೇಶ ಮಾಡಿದೆ. ಸದ್ಯ ಕರೀನಾ ಕಪೂರ್‌ ಸಂಪರ್ಕಕ್ಕೆ ಬಂದ ಮೂವರಲ್ಲಿ ಕೊರೊನಾ ಪತ್ತೆ ಆಗಿದೆ.

ಕರೀನಾಳಿಂದ ಮೂವರಿಗೆ ವಕ್ಕರಿಸಿತು ಕೊರೊನಾ!

ಕರೀನಾಳಿಂದ ಮೂವರಿಗೆ ವಕ್ಕರಿಸಿತು ಕೊರೊನಾ!

ಇನ್ನು ನಟಿ ಕರೀನಾ ಕಪೂರ್‌ ವೀಕೆಂಡ್‌ ಪಾರ್ಟಿಯಲ್ಲಿ ಭಾಗವಹಿಸಿರುವುದು ಬೇರೆಯವರಿಗೆ ಕಂಟಕ ಆಗಿದೆ. ಕರೀನಾ ಮತ್ತು ಅಮೃತಾ ಅರೋರಾಗೆ ಮೊದಲೇ ಪಾಸಿಟಿವ್ ಇತ್ತು. ಇವರ ಸಂಪರ್ಕಕ್ಕೆ ಬಂದವರಲ್ಲಿ ಈಗ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಸದ್ಯ ಕೊರೊನಾ ಅಂಟಿದ ಮೂವರ ಹೆಸರು ಬಹಿರಂಗ ಆಗಿದೆ. ಕರೀನಾ ಸಂಪರ್ಕದಲ್ಲಿದ್ದ ಅಮೃತಾ ಅರೋರಾಗೆ ಡಿಸೆಂಬರ್ 11ರಂದು ಸೋಂಕು ಇರುವುದು ದೃಢಪಟ್ಟಿತ್ತು. ಇದೀಗ ಮಹೀಪ್ ಕಪೂರ್​ ಹಾಗೂ ಸೀಮಾ ಖಾನ್​ಗೆ ಸೋಂಕು ತಗುಲಿರುವುದು ದೃಢವಾಗಿದೆ. ನಟಿ ಕರೀನಾ ಅವರಿಗೆ ಕೊರೋನಾ ದೃಢಪಟ್ಟ ಹಿನ್ನಲೆಯಲ್ಲಿ ಅವರ ಮನೆಯನ್ನು ಮುಂಬೈ ಬಿಎಂಸಿ ಸೀಲ್ ಡೌನ್​ ಮಾಡಿದೆ. ಜತೆಗೆ ಅವರನ್ನು ಹೋಮ್​ ಐಸೋಲೇಷನ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕರೀನಾ ಕಪೂರ್ ಖಾನ್ ಮನೆ ಲಾಕ್‌: ಕಟ್ಟಡ ಸ್ಯಾನಿಟೈಸ್!

ಕರೀನಾ ಕಪೂರ್ ಖಾನ್ ಮನೆ ಲಾಕ್‌: ಕಟ್ಟಡ ಸ್ಯಾನಿಟೈಸ್!

ಕರೀನಾ ಕಪೂರ್‌ಗೆ ಹೀಗೆ ನಿಯಮ ಮೀರಿ ಆಚೆ ಓಡಾಡುತ್ತಿದ್ದ ಕಾರಣ ಈಗ ಕರೀನಾ ಅವರ ಮನೆಯನ್ನು ಲಾಕ್‌ ಮಾಡಲಾಗಿದೆ. ಮನೆಯಲ್ಲಿಯೇ ಅವರನ್ನ ಐಸೋಲೆಟ್‌ ಆಗುವಂತೆ ಸೂಚಿಸಿ, ಅಲ್ಲೆ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಮುಂಬೈನಲ್ಲಿ ಇರುವ ಕರೀನಾ ಕಪೂರ್‌ ಖಾನ್‌ ಅವರ ಮನೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಲಾಗಿದೆ. ಕಟ್ಟಡ ಒಳಗೆ ಮತ್ತು ಹೊರಗೂ ಸ್ಯಾನಿಟೈಸ್‌ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗರ್ಭವತಿಯಾಗಿ ಶೂಟಿಂಗ್ ಮಾಡಿದ್ದರೂ ಕೊರೊನಾ ಬಂದಿರಲಿಲ್ಲ!

ಗರ್ಭವತಿಯಾಗಿ ಶೂಟಿಂಗ್ ಮಾಡಿದ್ದರೂ ಕೊರೊನಾ ಬಂದಿರಲಿಲ್ಲ!

ಈ ಹಿಂದೆ ಕೊರೊನಾ ಹಾವಳಿ ಹೆಚ್ಚಿದ್ದಾಗಲೇ ಕರೀನಾ ಕಪೂರ್‌ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಅಮೀರ್‌ಖಾನ್‌ ಜೊತೆಗೆ 'ಲಾಲ್‌ ಸಿಂಗ್ ಚಡ್ಡ' ಚಿತ್ರದಲ್ಲಿ ಕರೀನಾ ಕಪೂರ್‌ ಅಭಿನಯಿಸಿದ್ದರು, ಆಗ ಕರೀನಾ ಗರ್ಭ ಧರಿಸಿದ್ದರು. ಸಾಕಷ್ಟು ಮುನ್ನೆಚ್ಚರಿಗೆ ಕ್ರಮ ತೆಗೆದುಕೊಂಡ ಕಾರಣ ಕರೀನಾಗೆ ಏನೂ ಆಗಿರಲಿಲ್ಲ. ಈ ವಿಚಾರವನ್ನು ನಟ ಅಮೀರ್‌ ಖಾನ್‌ ಹಂಚಿಕೊಂಡಿದ್ದರು. 'ಶೂಟಿಂಗ್‌ ಮಾತ್ರವಲ್ಲ, ಕೊರೊನಾ ಹೆಚ್ಚಿರುವುದರಿಂದ, ಗರ್ಭವತಿ ಕರೀನಾ ಅವರನ್ನು ಎಚ್ಚರಿಕೆ ಇಂದ ನೋಡಿಕೊಳ್ಳ ಬೇಕಾಗಿತ್ತು'. ಎಂದಿದ್ದರು ಆಮೀರ್‌ಖಾನ್. ಈಗ ಆಮೀರ್‌ಖಾನ್‌ ಆ ಹೇಳಿಕೆ ವೈರಲ್‌ ಆಗಿದೆ.

ಕರೀನಾಳಿಂದ ಯಾರಿಗೆಲ್ಲಾ ಕಾದಿದೆ ಕೊರೊನಾ ಕಂಟಕ?

ಕರೀನಾಳಿಂದ ಯಾರಿಗೆಲ್ಲಾ ಕಾದಿದೆ ಕೊರೊನಾ ಕಂಟಕ?

ಬಾಲಿವುಡ್‌ ನಿರ್ಮಾಪಕ ಕರಣ್ ಜೋಹರ್‌ ಅವರ ಮನೆಯಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಕರಣ್‌ ಜೋಹರ್‌ ಪಾರ್ಟಿ ಅಂದರೆ ಅಲ್ಲಿಗೆ ದೊಡ್ಡ ಸೆಲೆಬ್ರೆಟಿ ಲಿಸ್ಟ್ ಹಾಜರಿರುತ್ತದೆ. ಇನ್ನೂ ಈ ಪಾರ್ಟಿಯಲ್ಲಿ ಅಲಿಯಾಭಟ್, ಅರ್ಜುನ್ ಕಪೂರ್, ಮಲೈಕಾ ಅರೋರ, ಕರೀಶ್ಮ ಕಪೂರ್ ಕೂಡ ಭಾಗಿ ಆಗದ್ದರು. ಇವರ ಪೈಕಿ ಈಗ ಮಹೀಪ್ ಕಪೂರ್‌ ಮತ್ತು ಸೀಮಾ ಖಾನ್‌ಗೆ ಕೊರೊನಾ ಧೃಡಪಟ್ಟಿದೆ. ಹಾಗಾಗಿ ಇನ್ನು ಯಾರಿಗೆಲ್ಲಾ ಈ ಕೊರೊನಾ ವಕ್ಕರಿಸಲಿದೆ ಎನ್ನುವ ಆತಂಕ ಶುರುವಾಗಿದೆ.

More from Filmibeat

English summary
After Kareena Kapoor and Amrita Arora, Maheep Kapoor and Seema Khan test positive for Covid-19, And Many Other Are In The List,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X