'ಕೆಜಿಎಫ್ 2' ಬಳಿಕ ಗೆದ್ದ ಬಾಲಿವುಡ್ ಸಿನಿಮಾ 'ಭೂಲ್ ಭುಲಯ್ಯ 2', ಗಳಿಸಿದ್ದೆಷ್ಟು?

'ಬಾಹುಬಲಿ', 'RRR', 'ಕೆಜಿಎಫ್ 2' ಅಂತಹ ಸಿನಿಮಾಗಳು ಬಂದ್ಮೇಲೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಾಲಿನಲ್ಲಿ ಹೆಚ್ಚು ಸಿನಿಮಾಗಳು ಬರುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಬಾಲಿವುಡ್ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ನಾರ್ತ್‌ನಲ್ಲಿ ಸೌತ್ ಸಿನಿಮಾಗಳ ಅಬ್ಬರ ಜೋರಾಗಿದೆ.

ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸೌತ್‌ ಸಿನಿಮಾಗಳು ನರ್ತನ ಮಾಡುತ್ತಿದೆ. ಸೌತ್ ಸಿನಿಮಾಗಳ ಮುಂದೆ ಬಾಲಿವುಡ್ ಸಿನಿಮಾಗಳು ಏನು ಎನ್ನುವಂತೆ ಆಗಿ ಬಿಟ್ಟಿದೆ. ಅದರಲ್ಲೂ 'ಪುಷ್ಪ', 'RRR', 'ಕೆಜಿಎಫ್ 2' ಸಿನಿಮಾಗಳು ರಿಲೀಸ್ ಆದ ಬಳಿಕವಂತೂ, ಹಿಂದಿಗೆ ಡಬ್ ಆಗಿರುವ ದಕ್ಷಿಣ ಭಾರತದ ಸಿನಿಮಾಗಳ ಮುಂದೆ ಹಿಂದಿಯ ಒರಿಜಿನಲ್ ಸಿನಿಮಾಗಳು ಮಕಾಡೆ ಮಲಗಿವೆ.

'ಕೆಜಿಎಫ್ 2' ಸಿನಿಮಾ ರಿಲೀಸ್ ಆದ ಬಳಿಕ ಬಂದ ಬಹುತೇಕ ಹಿಂದಿ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿವೆ. ಆದರೆ ಇದೇ ಮೊದಲು 'ಕೆಜಿಎಫ್ 2' ಬಳಿಕ ಬಾಕ್ಸಾಫೀಸ್‌ನಲ್ಲಿ ಹಿಂದಿ ಸಿನಿಮಾ ಒಂದು ಸದ್ದು ಮಾಡುತ್ತಿದೆ. ಅದೇ ಕಾರ್ತಿಕ್ ಆರ್ಯನ್ ಅಭಿನಯದ 'ಭೂಲ್ ಭುಲಯ್ಯ 2'.

After KGF 2, Kartik Aryan Starrer Bhool Bhulaiyaa 2 Is the 1st Bollywood Movie To Stand In Box Office

ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ 'ಭೂಲ್ ಭುಲಯ್ಯ 2'. ಈ ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನು 'ಭೂಲ್ ಭುಲಯ್ಯ 2' ಸಿನಿಮಾಗೆ ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

'ಭೂಲ್ ಭುಲಯ್ಯ 2' ಹಾರರ್ ಸಿನಿಮಾ. ಹಾರರ್ ಕಹಾನಿ ಜೊತೆಗೆ ಸಿಕ್ಕಾಪಟ್ಟೆ ಕಾಮಿಡಿ ಇದ್ದು, ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದೆಯಂತೆ. ಸಿನಿಮಾ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಗಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ದೇಶದಾದ್ಯಂತ ಹೆಚ್ಚಿನ ಸ್ಕ್ರೀನ್‌ಗಳಲ್ಲಿ 'ಭೂಲ್ ಭುಲಯ್ಯ 2' ಸಿನಿಮಾ ರಿಲೀಸ್ ಆಗಿದೆ.

'ಭೂಲ್ ಭುಲಯ್ಯ 2' ರಿಲೀಸ್ ಆದ ಮೊದಲ ಅರ್ಧ ದಿನದ ಗಳಿಕೆ ಲೆಕ್ಕಾಚಾರ ಹೊರ ಬಿದ್ದಿದೆ. ಅರ್ಧ ದಿನದಲ್ಲಿ ಈ ಸಿನಿಮಾ 15 ಕೋಟಿ ಕಲೆ ಹಾಕಿದೆ ಎಂದು ಬಾಲಿವುಡ್ ವರದಿಗಳು ಹೇಳುತ್ತಿವೆ. ಇನ್ನು ಒಂದು ದಿನ ಮುಗಿಯುವುದರಲ್ಲಿ 20 ಕೋಟಿ ಮಾಡಿದರೆ, ಇದು ಬಾಲಿವುಡ್‌ನಲ್ಲಿ ಬಿಗ್ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಳ್ಳಲಿದೆ. ಸಿನಿಮಾದ ಬಗ್ಗೆ ಉತ್ತಮ ಟಾಕ್ ಇರುವುದರಿಂದ ವಾರಾಂತ್ಯದಲ್ಲಿ ಹೆಚ್ಚಿನ ಗಳಿಕೆ ಮಾಡುವ ಎಲ್ಲಾ ನಿರೀಕ್ಷೆಗಳು ಇವೆ.

More from Filmibeat

English summary
After KGF 2, Kartik Aryan Starrer Bhool Bhulaiyaa 2 Is the 1st Bollywood Movie To Stand In Box Office, Day 1 Collection Report,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X