Don't Miss!
- Sports
ಮಹಾರಾಜ ಟ್ರೋಫಿ: ಟೇಬಲ್ ಟಾಪರ್ಸ್ ವಿರುದ್ಧ ಗೆದ್ದು 2 ಸ್ಥಾನ ಜಿಗಿದ ಮೈಸೂರು ವಾರಿಯರ್ಸ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಕಥೆಯಲ್ಲೊಂದು ತಿರುವು: ಸಖತ್ ಕ್ಲೈಮಾಕ್ಸ್‌ನಲ್ಲಿ ಶ್ರೀನಿಧಿ ಪ್ರತ್ಯಕ್ಷ, ಪ್ಯಾನ್ಸ್ ರಶ್ಮಿಕಾ ನೆನೆದಿದ್ದೇಕೆ?
'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ ಒಟಿಟಿಗೆ ಲಗ್ಗೆ ಇಟ್ಟಾಗಿದೆ. ಹೀಗಿದ್ದರೂ, ಯಶ್ ಅಥವಾ ಶ್ರೀನಿಧಿ ಶೆಟ್ಟಿ ಹೊಸ ಸಿನಿಮಾವನ್ನು ಘೋಷಣೆ ಮಾಡಿಲ್ಲ. ಮೆಗಾ ಹಿಟ್ ಆದ ಬಳಿಕ ಇವರಿಬ್ಬರ ಮುಂದಿನ ಸಿನಿಮಾ ತಿಳಿದುಕೊಳ್ಳಲು ಪ್ರೇಕ್ಷಕರು ಕಾದು ಕೂತಿದ್ದರು.
ಯಶ್ ಮುಂದಿನ ಸಿನಿಮಾ ನಿರ್ದೇಶಕ ನರ್ತನ್ ಜೊತೆ ಅನ್ನೋದು ಅಭಿಮಾನಿಗಳಿಗೆ ಗೊತ್ತಾಗಿದೆ. ಆದರೆ ಯಾವಾಗ ಸೆಟ್ಟೇರುತ್ತೆ? ಸಿನಿಮಾದ ಟೈಟಲ್ ಏನು? ಕಥೆಯೇನು? ಅನ್ನುವುದು ಇನ್ನೂ ರಿವೀಲ್ ಆಗಿಲ್ಲ. ಆ ಗ್ಯಾಪ್‌ನಲ್ಲಿಯೇ ಶ್ರೀನಿಧಿ ಶೆಟ್ಟಿ ದಿಢೀರನೇ ಪ್ರತ್ಯಕ್ಷ ಆಗಿದ್ದಾರೆ.
'ಕೆಜಿಎಫ್
2'
ಅರಗಿಣಿ
ಶ್ರೀನಿಧಿ
ಶೆಟ್ಟಿಯ
ಮೂರನೇ
ಸಿನಿಮಾ
ರಿಲೀಸ್
ಡೇಟ್
ಅನೌನ್ಸ್!
ಕಥೆಯಲ್ಲೊಂದು ತಿರುವು, ಇನ್ನೊಂದು ಸಖತ್ ಕ್ಲೈಮ್ಯಾಕ್ಸ್ ಅಂತ ಶ್ರೀನಿಧಿ ಶೆಟ್ಟಿ ಪ್ರತ್ಯಕ್ಷ ಆಗಿದ್ದಾರೆ. ಅಂದ್ಹಾಗೆ ಇದು ಸಿನಿಮಾ ಅಲ್ಲ. ಬದಲಾಗಿ ಇದೊಂದು ಜಾಹೀರಾತು. 'ಕೆಜಿಎಫ್ 2' ಸಿನಿಮಾ ರಿಲೀಸ್ ಆದ ಬಳಿಕ ದಿಢೀರನೇ ಕಾಣಿಸಿಕೊಂಡಿದ್ದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನೊಂದು ಕಡೆ ರಶ್ಮಿಕಾ ಮಂದಣ್ಣರನ್ನೂ ನೆನಪಿಕೊಂಡಿದ್ದಾರೆ. ಅದ್ಯಾಕೆ ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಶ್ರೀನಿಧಿ ಶೆಟ್ಟಿ ದಿಢೀರ್ ಪ್ರತ್ಯಕ್ಷ
ವಿಶ್ವದ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಮೂರನೇ ಸಿನಿಮಾ 'ಕೆಜಿಎಫ್ 2'. ಈ ಸಿನಿಮಾದ ಹೀರೊಯಿನ್ ಶ್ರೀನಿಧಿ ಶೆಟ್ಟಿ. ಎರಡೂ ಚಾಪ್ಟರ್‌ಗಳಲ್ಲೂ ಶ್ರೀನಿಧಿ ಶೆಟ್ಟಿ ಮುಂದಿನ ಸಿನಿಮಾ ಅನೌನ್ಸ್‌ಮೆಂಟ್ ಬಗ್ಗೆ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದರು. ಹೊಸ ಸಿನಿಮಾ ಘೋಷಣೆ ಆಗುವ ಮುನ್ನವೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಶ್ರೀನಿಧಿ ಶೆಟ್ಟಿ ಹಾಗೂ ಕೆಜಿಎಫ್ ಸಿನಿಮಾ ಅಭಿಮಾನಿಗಳಿಗೆ ಮತ್ತಷ್ಟು ಖುಷಿಕೊಟ್ಟಿದೆ.
Srinidhi
Shetty
:'ಕೆಜಿಎಫ್
1'
ನಂತರ
ಬೇರೆ
ಸಿನಿಮಾ
ಯಾಕೆ
ಒಪ್ಪಿಕೊಳ್ಳುತ್ತಿಲ್ಲಾ?
ಬೇರೆ
ಕೆಲಸ
ಇಲ್ವಾ
ಎಂದಿದ್ರು
ಜನ!

ಶ್ರೀನಿಧಿ ಶೆಟ್ಟಿಯ ಕನ್ನಡ ಜಾಹೀರಾತು
ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಜಾಹೀರಾತಿನಲ್ಲಿ ಶ್ರೀ ನಿಧಿ ಶೆಟ್ಟಿ ನಟಿಸಿದ್ದಾರೆ. ಈ ಹಿಂದೆ ಇಂತಹದ್ದೊಂದು ಬ್ರ್ಯಾಂಡ್‌ನಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಆದರೆ, ಪ್ರೈಡ್ ಚಿಕನ್ ಪ್ರಿಯರಿಗೆ ಹೊಸ ತಿನಿಸನ್ನು ಶ್ರೀನಿಧಿ ಪರಿಚಯಿಸಿದ್ದಾರೆ. ಈ ಜಾಹೀರಾತು ಕನ್ನಡದಲ್ಲಿ ಇರುವುದಕ್ಕೆ ಅಭಿಮಾನಿಗಳಿ ಫಿದಾ ಆಗಿದ್ದಾರೆ. ಕೆಜಿಎಫ್ ಕನ್ನಡತಿ ಅಂತೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.

ರಶ್ಮಿಕಾ ನೆನೆದ ಫ್ಯಾನ್ಸ್
ಈ ಹಿಂದೆ ರಶ್ಮಿಕಾ ಕೂಡ ಇಂತಹದ್ದೇ ಬೇರೊಂದು ಬ್ರ್ಯಾಂಡ್‌ನಲ್ಲಿ ನಟಿಸಿದ್ದರು. ಆದರೆ ಆ ಜಾಹೀರಾತಿನಲ್ಲಿ ಒಂದೇ ಒಂದು ಕನ್ನಡ ಪದ ಕೂಡ ಇರಲಿಲ್ಲ. ಅದಕ್ಕೆ ನ್ಯಾಷನಲ್ ಕ್ರಶ್‌ಗಿಂತ ಈ ಜಾಹೀರಾತು ಅದೆಷ್ಟೋ ಉತ್ತಮ ಅಂತ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಶ್ರೀನಿಧಿ
ಶೆಟ್ಟಿ
ಹತ್ತನೇ
ತರಗತಿ
ಅಂಕ
ಪಟ್ಟಿ
ವೈರಲ್:
ಕನ್ನಡದಲ್ಲಿ
ಅತಿ
ಹೆಚ್ಚು
ಅಂಕ!

ರಿಲೀಸ್ ಆಗಬೇಕು 'ಕೋಬ್ರಾ'
ಶ್ರೀನಿಧಿ
ಶೆಟ್ಟಿಯ
ತಮಿಳು
ಸಿನಿಮಾ
ರಿಲೀಸ್‌ಗೆ
ರೆಡಿಯಾಗಿದೆ.
'ಕೆಜಿಎಫ್
2'
ಚಿತ್ರೀಕರಣದ
ವೇಳೆನೇ
'ಕೋಬ್ರಾ'
ಸಿನಿಮಾ
ಚಿತ್ರೀಕರಣವೂ
ನಡೆದಿತ್ತು.
ತಮಿಳಿನ
ಸ್ಟಾರ್
ನಟ
ವಿಕ್ರಂ
ಈ
ಸಿನಿಮಾದಲ್ಲಿ
ಪ್ರಮುಖ
ಪಾತ್ರದಲ್ಲಿ
ನಟಿಸಿದ್ದು,
ಅವರಿಗೆ
ಹೀರೊಯಿನ್
ಆಗಿ
ಕಾಣಿಸಿಕೊಂಡಿದ್ದಾರೆ.
ಇನ್ನು
'ಕೆಜಿಎಫ್
2'
ರಿಲೀಸ್
ಆದ
ಬಳಿಕ
ಇವರ
ಮುಂದಿನ
ಸಿನಿಮಾ
ಯಾವುದು?
ಅನ್ನೋದು
ಇನ್ನೂ
ಅನೌನ್ಸ್
ಮಾಡಿಲ್ಲ.