ಸನ್ನಿ ಲಿಯೋನ್ ಬಿಕಿನಿ ಫೋಟೋ: ಥ್ರಿಲ್ ಆದ ಪಡ್ಡೆ ಹೈಕ್ಳು
ಇತ್ತೀಚಿನ ದಿನಗಳಲ್ಲಿ ಸನ್ನಿ ಲಿಯೋನ್ ತುಂಬಾ ಬದಲಾಗಿದ್ದರು. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿ ತೊಟ್ಟ ಫೋಟೋಗಳನ್ನ ಪೋಸ್ಟ್ ಮಾಡುತ್ತಿರಲಿಲ್ಲ. ಅದರಲ್ಲೂ ಇನ್ಸ್ಟಾಗ್ರಾಂನಲ್ಲಂತೂ ಆ ರೀತಿ ಫೋಟೋ ಇದುವರೆಗೂ ಅಪ್ ಲೌಡ್ ಮಾಡಿಲ್ಲ ಎನ್ನಲಾಗಿದೆ.
ಆದ್ರೀಗ, ಆ ಸಂಪ್ರದಾಯ ಮುರಿದ ಸನ್ನಿ ಲಿಯೋನ್ ಮತ್ತೆ ಬಿಕಿನಿ ತೊಟ್ಟು ಫೋಸ್ ಕೊಟ್ಟಿದ್ದಾರೆ. ಆ ಫೋಟೋವನ್ನ ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ್ದಾರೆ.
ಈ ಫೋಟೋಗೆ ಸನ್ನಿ ಲಿಯೋನ್ ಹಾಕಿರುವ ಕ್ಯಾಪ್ಷನ್ ಈಗ ಗಮನ ಸೆಳೆಯುತ್ತಿದೆ. ''ಬಹಳ ದಿನದ ನಂತರ ಬಿಕಿನಿ ತೊಟ್ಟಿದ್ದೇನೆ. ಜೈಪುರದಲ್ಲಿರುವ ನನ್ನ ಖಾಸಗಿ ವಿಲ್ಲಾದಲ್ಲಿ ಸ್ವಿಮ್ ಮಾಡಲು ಇದು ಒಳ್ಳೆಯ ಸಮಯ'' ಎಂದು ಬರೆದುಕೊಂಡಿದ್ದಾರೆ.

ಈ ಫೋಟೋಗೆ ಮತ್ತು ಈ ಪೋಸ್ಟ್ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದು ಲೈಕ್ಸ್ ಮತ್ತು ಕಾಮೆಂಟ್ಸ್ ಮಾಡ್ತಿದ್ದಾರೆ. ಸದ್ಯ ತಮಿಳಿನಲ್ಲಿ ತಯಾರಾಗುತ್ತಿರುವ ವೀರಾ ಮಹಾದೇವಿ ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











