ಮತ್ತೊಬ್ಬ ಖ್ಯಾತ ನಾಯಕಿ, ನಿರೂಪಕಿಯ ಖಾಸಗಿ ವಿಡಿಯೋ ಲೀಕ್, ಭಾರೀ ವೈರಲ್...!
ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಮತ್ತೊಬ್ಬ ಪಾಕಿಸ್ತಾನದ ಚೆಲುವೆಯ ಖಾಸಗಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ಮಥಿರಾ ಮೊಹಮ್ಮದ್.. ಪಾಕಿಸ್ತಾನದ ಸುರಸುಂದರಾಂಗಿ. ಮೂಲತಃ ಜಿಂಬಾಬ್ವೆಯವರಾದ ಮಥಿರಾ ಪಾಕಿಸ್ತಾನಕ್ಕೆ ವಲಸೆ ಬಂದು ಅನೇಕ ವರ್ಷಗಳೇ ಆಗಿವೆ. ಇನ್ನೂ ಮಥಿರಾ ಪಾಕಿಸ್ತಾನದ ಪ್ರಸಿದ್ಧ ನಿರೂಪಕಿ ಕೂಡ ಹೌದು. ಗಾಯಕಿಯೂ ಹೌದು. ಇಷ್ಟೇ ಅಲ್ಲ ಮಾಡೆಲ್, ಡ್ಯಾನ್ಸರ್ ಮತ್ತು ನಟಿಯಾಗಿ ಕೂಡ ಹೆಸರು ಮಾಡಿದವರು ಮಥಿರಾ ಮೊಹಮ್ಮದ್. ಇನ್ಸ್ಟಾಗ್ರಾಮ್‌ನಲ್ಲಿ 2.6 ಮಿಲಿಯನ್ ಜನ ಇವರನ್ನು ಹಿಂಬಾಲಿಸುತ್ತಿದ್ದಾರೆ. ಇನ್ನೂ 'ಎಕ್ಸ್' ನಲ್ಲಿ ಅರವತ್ತು ಸಾವಿರಕ್ಕೂ ಅಧಿಕ ಜನ ಇವರನ್ನು ಆರಾಧಿಸುತ್ತಿದ್ದಾರೆ.

ಇಂಥಾ ಮಥಿರಾ ಮೊಹಮ್ಮದ್ ಅವರ ಹೆಸರಿನಲ್ಲಿ ಸದ್ಯಕ್ಕೆ ವಿಡಿಯೋ ಒಂದು ಲೀಕ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ. ಸಹಜವಾಗಿ ಮಥಿರಾ ಅವರ ನೆಮ್ಮದಿಗೆ ಈ ವಿಡಿಯೋ ಕೊಳ್ಳಿಯನ್ನು ಇಟ್ಟಿದೆ. ಹೀಗಾಗಿಯೇ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಪ್ರತಿಕ್ರಿಯೆಯನ್ನು ನೀಡಿರುವ ಮಥಿರಾ ನನ್ನ ಹೆಸರು ಮತ್ತು ನನ್ನ ಫೋಟೊಗಳನ್ನು ಜನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಸುಳ್ಳು ವಿಷಯಗಳನ್ನು ಸೇರಿಸುತ್ತಿದ್ದಾರೆ ಎಂದಿದ್ದಾರೆ. ಇಂಥದ್ದನ್ನೆಲ್ಲ ಮಾಡುವುದಕ್ಕೆ ನಾಚಿಕೆಯಾಗಲ್ವಾ ಎಂದು ಪ್ರಶ್ನೆಯನ್ನು ಮಾಡಿರುವ ಮಥಿರಾ ಇಂತಹ ಅಸಂಬದ್ಧ ವಿಚಾರದಿಂದ ನನ್ನನ್ನು ದೂರವಿಡಿ ಎಂದು ಕಿಡಿ ಕಾರಿದ್ದಾರೆ.
ಅಂದ್ಹಾಗೇ ಪಾಕಿಸ್ತಾನದಲ್ಲಿ ಈ ತರಹ ನಟಿಯರ ಮತ್ತು ಸೋಶಿಯಲ್ ಮೀಡಿಯಾ ಇನ್ಪ್ಲುಯೆನ್ಸರ್ ಗಳ ವಿಡಿಯೋ ವೈರಲ್ ಆಗುತ್ತಿರುವುದು ಇದು ಮೊದಲಲ್ಲ. ಕಳೆದ ಒಂದು ತಿಂಗಳಿನಲ್ಲಿಯೇ ಇದು ಮೂರನೇ ಪ್ರಕರಣ ಅನ್ನುವುದು ದುರ್ದೈವ. ಈ ಹಿಂದೆ ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್. ಫ್ಯಾಶನ್ ಮತ್ತು ಲೈಫ್ ಸ್ಟೈಲ್‌ಗೆ ಸಂಬಂಧಿಸಿದ ವಿಡಿಯೋಗಳನ್ನು ಮಾಡುವ ಮೂಲಕ ಜನಪ್ರಿಯತೆಯನ್ನು ಗಳಿಸಿರುವ ಮಿನಾಹಿಲ್ ಮಲ್ಲಿಕ್ ಹೆಸರಿನಲ್ಲಿ ಕೂಡ ಅಶ್ಲೀಲ ವಿಡಿಯೋ ವೈರಲ್ ಆಗಿತ್ತು. ಆ ನಂತರ 22ರ ಹರೆಯದ ಪಾಕಿಸ್ತಾನದ ಮತ್ತೊಬ್ಬ ಜನಪ್ರಿಯ ಸೋಶಿಯಲ್ ಮೀಡಿಯಾ ಸ್ಟಾರ್ ಇಮ್ಶಾ ರೆಹಮಾನ್ ಅವರದ್ದು ಎನ್ನಲಾದ ವಿಡಿಯೋವನ್ನು ಕೂಡ ವೈರಲ್ ಮಾಡಲಾಗಿತ್ತು. ಈಗ ಮಥಿರಾ ಮೊಹಮ್ಮದ್ ಅವರ ಹೆಸರಿನಲ್ಲಿ ಖಾಸಗಿ ವಿಡಿಯೋವನ್ನು ಲೀಕ್ ಮಾಡಲಾಗಿದೆ. ಪಾಕಿಸ್ತಾನದೆಲ್ಲೆಡೆ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲಿ ಕೂಡ ವಿಡಿಯೋ ವೈರಲ್ ಆಗಿದೆ.

ಇನ್ನುಳಿದಂತೆ ಮಥಿರಾ ಮೊಹಮ್ಮದ್ 2014ರಲ್ಲಿ ಪಾಕಿಸ್ತಾನದ ಖ್ಯಾತ ಗಾಯಕ ಫರ್ಹಾನ್ ಮಿರ್ಜಾ ಜೊತೆ ಮದುವೆಯಾಗಿದ್ದರು. ಆ ನಂತರ ಆಹಿಲ್ ರಿಜ್ವಿಯ ತಾಯಿಯಾದರು. ಆದರೆ ಫರ್ಹಾನ್ ಮತ್ತು ಮಥಿರಾ ಅವರ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾದ ನಾಲ್ಕೇ ವರ್ಷಕ್ಕೆ ಇವರಿಬ್ಬರ ದಾಂಪತ್ಯ ಮುರಿದು ಬಿತ್ತು. ಒಟ್ನಲ್ಲಿ ಸದ್ಯಕ್ಕೆ ಮಥಿರಾ ಮೊಹಮ್ಮದ್ ಅವರದ್ದು ಎನ್ನಲಾದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿರುವುದು ನಾನಲ್ಲ ಎಂಬ ಸ್ಪಷ್ಟನೆಯನ್ನು ಕೂಡ ಮಥಿರಾ ಮೊಹಮ್ಮದ್ ನೀಡಿದ್ದಾರೆ.ಆದರೂ ಕೂಡ ವಿಡಿಯೋ ಮಥಿರಾ ಅವರದ್ದೇ ಎನ್ನುವ ವಾದವನ್ನು ಪಾಕಿಸ್ತಾನದಲ್ಲಿ ಸದ್ಯ ಅನೇಕರು ಮಾಡುತ್ತಿದ್ದಾರೆ.


Click it and Unblock the Notifications











