ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ: ಅಕ್ಷಯ್ ಕುಮಾರ್ ಟ್ರೆಂಡಿಂಗ್

ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟೋಕಿಯೋ ಒಲಂಪಿಕ್ಸ್ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾಗೆ ದೇಶಾದ್ಯಂತ ಅಭಿನಂದನೆ ವ್ಯಕ್ತವಾಗಿದೆ.

ಶನಿವಾರ (ಆಗಸ್ಟ್ 7) ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದರು. ಒಲಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಪದಕ ಬಂದಿರಲಿಲ್ಲ. ಇದೀಗ, ನೀರಜ್ ಚೋಪ್ರಾ ಭಾರತದ ಈ ಕನಸನ್ನು ನನಸು ಮಾಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಬಂಗಾರ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ!

ನೀರಜ್ ಚೋಪ್ರಾಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅಭಿನಂದನೆ ಸಲ್ಲಿಸಿದರು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

 After Neeraj Chopra wins Gold medal Akshay Kumar trend in Social Media

ಈ ಕಡೆ ಟೋಕಿಯೋ ಒಲಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಬಾಲಿವುಡ್ ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆದರು. ನೀರಜ್ ಚೋಪ್ರಾ ಬಯೋಪಿಕ್ ಮಾಡಿ ಎಂಬ ಕೂಗು ಹೆಚ್ಚಾಯಿತು. ನೀರಜ್ ಚೋಪ್ರಾ ಬಯೋಪಿಕ್ ಹಕ್ಕು ಖರೀದಿಸಲು ಅಕ್ಷಯ್ ಕುಮಾರ್ ಓಡಿ ಹೋಗಿದ್ದಾರೆ ಎಂದು ಟ್ರೋಲ್‌ಗಳು ಆರಂಭವಾಗಿದೆ.

ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಥ್ಲಿಟಿಕ್ ನೀರಜ್ ಚೋಪ್ರಾ ಕುರಿತು ಸಿನಿಮಾ ಮಾಡಿ ಎಂಬ ಕೂಗು ಜೋರಾಗಿದೆ.

 After Neeraj Chopra wins Gold medal Akshay Kumar trend in Social Media

-'ಅಕ್ಷಯ್ ಕುಮಾರ್ ನೀರಜ್ ಬಯೋಪಿಕ್ ಮಾಡ್ತಾರೆ'

-'ನೀರಜ್ ಚೋಪ್ರಾ ಪಾತ್ರ ಮಾಡಲು ಅಕ್ಷಯ್ ಕುಮಾರ್ ಸಿದ್ಧತೆ'

-'ಅಕ್ಷಯ್ ಕುಮಾರ್ ಗೋಲ್ಡ್ 2 ಮಾಡೋದು ಪಕ್ಕಾ'

-'ಅಕ್ಷಯ್ ಕುಮಾರ್ ಮುಂದಿನ ಚಿತ್ರಕ್ಕೆ ಸ್ಕ್ರಿಪ್ಟ್ ಸಿಕ್ತು'

ಹೀಗೆ ನೀರಜ್ ಚೋಪ್ರಾ ಬಯೋಪಿಕ್ ಕುರಿತು ಮತ್ತು ಅಕ್ಷಯ್ ಕುಮಾರ್ ಮಾಡಲಿ ಎನ್ನುವ ಬಗ್ಗೆ ಟ್ವಿಟ್ಟರ್‌ನಲ್ಲಿ ಚರ್ಚೆ ಜೋರಾಗಿದೆ. ಇನ್ನು ಬಯೋಪಿಕ್ ಚಿತ್ರಗಳು ಹಾಗೂ ನೈಜ ಘಟನೆ ಆಧರಿಸಿ ಸಿನಿಮಾಗಳನ್ನು ಮಾಡುವುದರಲ್ಲಿ ಬಾಲಿವುಡ್ ಖಿಲಾಡಿ ಅಕ್ಷತ್ ಎತ್ತಿದ ಕೈ. ಏರ್‌ಲಿಫ್ಟ್, ರುಸ್ತುಂ, ಪ್ಯಾಡ್‌ಮ್ಯಾನ್, ಗೋಲ್ಡ್, ಕೇಸರಿ, ಮಿಷನ್ ಮಂಗಲ್, ಸ್ಪೆಷಲ್ 26 ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ.

 After Neeraj Chopra wins Gold medal Akshay Kumar trend in Social Media

ಅಕ್ಷಯ್ ಕುಮಾರ್ ಮೆಚ್ಚುಗೆ

ನೀರಜ್ ಚೋಪ್ರಾಗೆ ಟ್ವಿಟ್ಟರ್ ಮೂಲಕ ಅಕ್ಷಯ್ ಕುಮಾರ್ ಶುಭಾಶಯ ಕೋರಿದ್ದಾರೆ. ''ದೇಶಕ್ಕೆ ಚಿನ್ನ ಗೆದ್ದು ಕೊಟ್ಟ ನಿಮಗೆ ಶುಭಾಶಯಗಳು. ಇದು ನಿಜಕ್ಕೂ ಇತಿಹಾಸ'' ಎಂದಿದ್ದಾರೆ.

ಗಮನ ಸೆಳೆದ 'ಬೆಲ್ ಬಾಟಮ್' ಸಿನಿಮಾ

ಈಗ ಬಿಡುಗಡೆಗೆ ಸಜ್ಜಾಗಿರುವ ಬೆಲ್ ಬಾಟಮ್ ಚಿತ್ರವೂ ನೈಜ ಘಟನೆ ಆಧರಿಸಿ ಮಾಡಿರುವ ಚಿತ್ರ. ಆಗಸ್ಟ್ 19ರಂದು ರಿಲೀಸ್ ಆಗುತ್ತಿದೆ. ವಿಮಾನ ಅಪಹರಣದ ಕುರಿತಾಗಿ ಕಥೆ ಮಾಡಿದ್ದು, ಭಾರತೀಯ ಸ್ಪೈ ಏಜೆಂಟ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ.

ಅಕ್ಷಯ್ ಕುಮಾರ್ ಪತ್ನಿ ಪಾತ್ರದಲ್ಲಿ ವಾಣಿ ಕಪೂರ್ ಅಭಿನಯಿಸಿದ್ದು, ವಿಶೇಷ ಪಾತ್ರದಲ್ಲಿ ಹುಮಾ ಖುರೇಶಿ ನಟಿಸಿದ್ದಾರೆ. ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ಲಾರಾ ದತ್ತಾ ನಟಿಸಿದ್ದು, ಅವರ ಪಾತ್ರ ಹೆಚ್ಚು ಗಮನ ಸೆಳೆದಿದೆ. ಇನ್ನು ರಂಜಿತ್ ಎಂ ತಿವಾರಿ ನಿರ್ದೇಶಿಸಿದ್ದಾರೆ.

ಚೆಕ್ ದೇ ಇಂಡಿಯಾ 2 ಚಿತ್ರಕ್ಕೂ ಹೆಚ್ಚಿದ ಬೇಡಿಕೆ

ಮತ್ತೊಂದೆಡೆ ಟೋಕಿಯೋ ಒಲಂಪಿಕ್ಸ್‌ನಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಭಾರತೀಯ ಮಹಿಳಾ ಹಾಕಿ ತಂಡದ ಆಟವೂ ಬಹಳ ವಿಶೇಷವಾಗಿ ಗಮನ ಸೆಳೆದಿತ್ತು. ಪದಕ ಗೆಲ್ಲಲ್ಲು ಸಾಧ್ಯವಾಗಿದ್ದರೂ ವಿರೋಚಿತ ಆಟ ದೇಶಕ್ಕೆ ಹೆಮ್ಮೆ ತಂದಿತ್ತು. ಈ ಹಿನ್ನೆಲೆ 'ಚೆಕ್ ದೇ ಇಂಡಿಯಾ' ಸೀಕ್ವೆಲ್ ಮಾಡಲಿ ಎಂದು ನಟ ಶಾರೂಖ್ ಖಾನ್‌ಗೆ ನೆಟ್ಟಿಗರು ಒತ್ತಾಯಿಸಿದರು.

More from Filmibeat

English summary
After Neeraj Chopra wins Gold medal in tokyo olympics 2020, Bollywood actor Akshay Kumar trend in Social Media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X