ತುಂಡುಡುಗೆ ತೊಟ್ಟು ಟ್ರೋಲ್ ಆದ ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ!

ಸಿನಿಮಾ ನಟಿಯರು ಸದಾ ಒಂದಲ್ಲಾ, ಒಂದು ವಿಭಿನ್ನ ರೀತಿಯ ಉಡುಪುಗಳ ಪ್ರಯೋಗಕ್ಕೆ ಮುಂದಾಗುತ್ತಾರೆ. ಯಾವಾಗ ಕ್ಯಾಮೆರಾ ಕಣ್ಣಿಗೆ ಬಿದ್ದರೂ ಕೂಡ, ನಟಿಯರು ಹೊಸ ಅವತಾರದಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಹೀಗೆ ಕೆಲವೊಮ್ಮೆ ಚಿತ್ರ, ವಿಚಿತ್ರವಾಗಿ ಕೂಡ ಕಾಣಿಸಿಕೊಳ್ಳುತ್ತಾರೆ.

ವಿಚಿತ್ರವಾದ ಸ್ಟೈಲ್ ನಲ್ಲಿ ಜನರ ಮುಂದೆ ಬರ್ತಾರೆ, ಆಗ ಟ್ರೋಲ್‌ಗಳಿಗೆ ತುತ್ತಾಗುತ್ತಾರೆ. ಅದರಲ್ಲೂ ಹೆಚ್ಚು ಖ್ಯಾತಿ ಗಳಿಸಿರುವ, ಸ್ಟಾರ್ ನಟಿಯರು ವಿಚಿತ್ರ ಕಾಸ್ಟ್ಯೂಂನಲ್ಲಿ ಕಾಣಿಸಿಕೊಂಡರೆ, ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಹಾಗೆ ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಸಣ್ಣ ಶಾರ್ಟ್ ಧರಿಸಿದ್ದ ಕಾರಣಕ್ಕೆ ಟ್ರೋಲ್ ಆಗಿದ್ದರು.‌

ಈಗ ನಟಿ ದೀಪಿಕಾ ಪಡುಕೋಣೆ ಮತ್ತು ಅನನ್ಯಾ ಪಾಂಡೆ ಸರದಿ. ಈ ಇಬ್ಬರು ನಟಿಯರು ಇತ್ತೀಚೆಗೆ ಹೆಚ್ಚಾಗಿ ಮಾಧ್ಯಮಗಳ ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾರೆ. ತಮ್ಮ ಸಿನಿಮಾ 'ಗೆಹ್ರಾನಿಯಾ' ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ರಣ್ವೀರ್ ಸಿಂಗ್ ಬಟ್ಟೆ ಧರಿಸಿದ್ದಾರೆ ದೀಪಿಕಾ ಎಂದ ಜನ!

ರಣ್ವೀರ್ ಸಿಂಗ್ ಬಟ್ಟೆ ಧರಿಸಿದ್ದಾರೆ ದೀಪಿಕಾ ಎಂದ ಜನ!

ನಟಿ ದೀಪಿಕಾ ಪಡುಕೋಣೆ ಗೆಹ್ರಾನಿಯಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿ ಆಗಿದ್ದ, ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದೀಪಿಕಾ ಪಡುಕೋಣೆ ಕಪ್ಪು ಮತ್ತು ಬಿಳಿ ಬಣ್ಣದ ಜೀಬ್ರಾ ಪ್ರಿಂಟ್ ಇರುವ ಕೋಟ್ ಧರಿಸಿ ಕಾಣಿಸಿಕೊಂಡಿದ್ದರು. ಇದೇ ಉಡುಪು ಟ್ರೋಲ್ ಆಗುತ್ತಿದೆ. ಇದು ಬಟ್ಟೆಯೇ ಅಲ್ಲ ಎಂದು ಸಾಕಷ್ಟು ಕಮೆಂಟ್‌ಗಳು ಬಂದಿವೆ. ಯಾಕೆಂದರೆ ದೀಪಿಕಾ ಕೇವಲ ಲಾಂಗ್ ಕೋಟ್ ಧರಿಸಿದ್ದಾರೆ. ಅದಕ್ಕೆ ದೊಡ್ಡ ಬೂಟ್‌ಗಳನ್ನು ಹಾಕಿಕೊಂಡಿದ್ದಾರೆ. ಆದರೆ ಅವರ ಶಾರ್ಟ್ಸ್ ಅಥವಾ ಪ್ಯಾಂಟ್ ಕಾಣಿಸಿಲ್ಲ. ಹಾಗಾಗಿ ರಶ್ಮಿಕಾ ರೀತಿ ದೀಪಿಕಾ ಕೂಡ ಪ್ಯಾಂಟ್ ಮರೆತಿದ್ದಾರೆ ಎಂದಿದ್ದಾರೆ. ಇನ್ನು ಕೆಲವರು ಪತಿ ರಣ್ಬೀರ್ ಸಿಂಗ್ ಬಟ್ಟೆ ಹಾಕಿದ್ದೀರಾ ಎಂದು ಕಾಲೆಳೆದಿದ್ದಾರೆ.

ಪುಟ್ಟ ಟಾಪ್ ಧರಿಸಿ ಅನನ್ಯಾ ಪಾಂಡೆ ಪರದಾಟ!

ಪುಟ್ಟ ಟಾಪ್ ಧರಿಸಿ ಅನನ್ಯಾ ಪಾಂಡೆ ಪರದಾಟ!

ಇನ್ನು ನಟಿ ಅನನ್ಯಾ ಪಾಂಡೆ ಸಿಕ್ಕಾಪಟ್ಟೆ ಸ್ಟೈಲಿಶ್. ಗೆಹ್ರಾನಿಯಾ ಸಿನಿಮಾ ಪ್ರಚಾರದಲ್ಲಿ ಕೊಂಚ ಹೆಚ್ಚಾಗಿಯೇ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ತೊಟ್ಟ ಎರಡೂ ಉಡುಪುಗಳಿಂದಲೂ ಟ್ರೋಲ್ ಆಗಿದ್ದಾರೆ. ಪ್ಯಾಂಟ್ ಮತ್ತು ಟ್ಯೂಬ್ ಟಾಪ್ ಧರಿಸಿದ ಅನನ್ಯಾ ಪಾಂಡೆ, ಸ್ವತಃ ಅವರೇ ಪರದಾಡುವಂತಾಗಿತ್ತು. ಅವರು ಇದ್ದ ಜಾಗದಲ್ಲಿ ತುಂಬಾ ಗಾಳಿ ಇತ್ತು ಹಾಗಾಗಿ ಅವರು ತೊಟ್ಟ ಉಡುಗೆ ಕಂಫರ್ಟ್ ಆಗಿ ಇರಲಿಲ್ಲ. ಅದರಿಂದ ಅವರು ಕಿರಿ ಅನುಭವಿಸಬೇಕಾಯಿತು. ನಂತರ ನಟ ಸಿದ್ಧಾಂತ್ ಚತುರ್ವೇದಿ ತಮ್ಮ ಕೋಟ್ ಬಿಚ್ಚಿ ಕೊಟ್ಟಿದ್ದಾರೆ. ಇದರಿಂದ ಅನನ್ಯಾ ಪಾಂಡೆ ಕೂಡ ಟ್ರೋಲ್ ಆಗಿದ್ದಾರೆ. ಸರಿಯಾಗೆ ಬಟ್ಟೆ ಹಾಕಲು ಗೊತ್ತಿಲ್ಲ ಎಂದು ನೆಟ್ಟಿಗರು ತಿವಿದಿದ್ದಾರೆ.

ಗೆಹ್ರಾಯಾನ್ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಕೊಸಿಕೊಂಡ ನಟಿಯರು!

ಗೆಹ್ರಾಯಾನ್ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಕೊಸಿಕೊಂಡ ನಟಿಯರು!

ಗೆಹ್ರಾನಿಯಾ ಚಿತ್ರ ಫೆಬ್ರವರಿ 11 ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಸದ್ಯ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ. ನಟಿ ದೀಪಿಕಾ ಪಡುಕೋಣೆ ಹಲವು ದಿನಗಳ ಬಳಿಕ ಈ ಚಿತ್ರದಲ್ಲಿ ಬಿಕಿನಿ ತೊಟ್ಟಿದ್ದಾರೆ. ಜೊತೆಗೆ ಅನನ್ಯಾ ಮತ್ತು ದೀಪಿಕಾ ಇಬ್ಬರೂ ಕೊಂಚ ಬೋಲ್ಡ್ ಆಗಿ ನಟಿಸುವ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಎರಡು ವಿಚಾರಕ್ಕೆ ಟ್ರೋಲ್ ಆಗಿದ್ದರು ನಟಿ ರಶ್ಮಿಕಾ!

ಎರಡು ವಿಚಾರಕ್ಕೆ ಟ್ರೋಲ್ ಆಗಿದ್ದರು ನಟಿ ರಶ್ಮಿಕಾ!

ನಟಿ ರಶ್ಮಿಕಾ ಮಂದಣ್ಣ ಅವರು ಮುಂಬೈಗೆ ತೆರಳಿದ ಸಂದರ್ಭದಲ್ಲಿ ದೊಡ್ಡ ಮಟ್ಟದ ಟ್ರೋಲ್‌ಗೆ ತುತ್ತಾಗಿದ್ದರು. ರಶ್ಮಿಕಾ ಉಡುಪಿನಿಂದ ಒಂದು ಕಡೆ ಟ್ರೋಲ್ ಆದರೆ, ಮತ್ತೊಂದು ಕಡೆ ಊಟ ಕೇಳಿದ ಮಕ್ಕಳನ್ನು ಕ್ಯಾರೆ ಎನ್ನದೆ ಟೀಕೆಗೆ ಒಳಗಾಗಿದ್ದರು. ಹಾಗಾಗಿ ಈ ವಿಚಾರ ಬಾಲಿವುಡ್ ನಲ್ಲಿ ರಶ್ಮಿಕಾ ವಿರುದ್ಧ ಪಿತೂರಿ ಮಾಡಲಾಗುತ್ತಿದೆ, ಹಾಗಾಗಿ ಟಾರ್ಗೆಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು.

More from Filmibeat

English summary
Deepika Padukone And Ananya Pandey Trolled For New Costume,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X