Katrina Kaif: ರಶ್ಮಿಕಾ ಮಂದಣ್ಣ ಬಳಿಕ, ನಟಿ ಕತ್ರಿನಾ ಕೈಫ್ ಟವಲ್ ಫೈಟ್ ಡೀಪ್‌ಫೇಕ್ ಚಿತ್ರ ವೈರಲ್!

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ವಿವಾದದ ನಂತರ, ಬಹುನಿರೀಕ್ಷಿತ 'ಟೈಗರ್ 3' ಸಿನಿಮಾದ ಕತ್ರಿನಾ ಕೈಫ್ ಅವರ ಟವೆಲ್ ಫೈಟ್ ದೃಶ್ಯವು ಡಿಜಿಟಲ್ ಮ್ಯಾನಿಪ್ಯುಲೇಷನ್‌ಗೆ ಒಳಗಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಕತ್ರಿನಾ ಅವರ ಡೀಪ್‌ಫೇಕ್ ಚಿತ್ರವು ಅಭಿಮಾನಿಗಳಲ್ಲಿ ಆಕ್ರೋಶ ಮತ್ತು ಆನ್‌ಲೈನ್ ಸುರಕ್ಷತೆಯ ಬಗ್ಗೆ ಕಳವಳ ಹುಟ್ಟುಹಾಕಿದೆ.

ಇತ್ತೀಚೆಗಷ್ಟೇ ಡೀಪ್‌ಫೇಕ್ ವಿಡಿಯೋವೊಂದಕ್ಕೆ ಗುಎಇಯಾದ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ತಮ್ಮ ಆಘಾತ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ನಟಿಗೆ ಅಭಿಮಾನಿಗಳು ಮತ್ತು ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಮೃಣಾಲ್, ನಾಗ ಚೈತನ್ಯ ಸೇರಿದಂತೆ ಅನೇಕರು ಬೆಂಬಲ ನೀಡಿದ್ದರು. ಈಗ ಕತ್ರಿನಾ ಕೈಫ್ ಈ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.

katrina-kaif-falls-victim-to-deepfake

ಡೀಪ್‌ಫೇಕ್‌ಗೆ ಒಳಗಾದ ನಟಿ ಕತ್ರಿನಾ ಫೋಟೋ

ಮೂಲ ಚಿತ್ರವನ್ನು ಈ ಹಿಂದೆ ಕತ್ರಿನಾ ಕೈಫ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಬಾಲಿವುಡ್ ನಟಿ ಕತ್ರಿನಾ ಮತ್ತು ಹಾಲಿವುಡ್ ಸ್ಟಂಟ್ ವುಮನ್ ಜೊತೆ ಟವೆಲ್ ಧರಿಸಿ ಸಕತ್ ಫೈಟ್ ಮಾಡುತ್ತಿದ್ದಾರೆ. ಆದರೆ, ಈಗ ವೈರಲ್ ಆಗಿರುವ ಎಡಿಟ್ ಮಾಡಿರುವ ಚಿತ್ರದಲ್ಲಿ ಕತ್ರಿನಾ ಕೈಫ್ ಟವೆಲ್ ಬದಲಿಗೆ ಲೋ ಕಟ್ ವೈಟ್ ಬ್ರಾ ಮತ್ತು ಮ್ಯಾಚಿಂಗ್ ಇನ್ನರ್‌ ವೇರ್ ಧರಿಸಿರುವ ಹಾಗೆ ಮಾಡಲಾಗಿದೆ.

ಆರ್ಟಿಫಿಶೀಯಲ್ ಇಂಟಲಿಜೆನ್ಸ್ ಬಳಸಿಕೊಂಡು ಫೋಟೋವನ್ನು ಬದಲಾಯಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಬಳಕೆದಾರರು ಡೀಪ್‌ಫೇಕ್ ಚಿತ್ರವನ್ನು ಖಂಡಿಸಿದ್ದಾರೆ. "ಟೈಗರ್ 3 ರ ಕತ್ರಿನಾ ಕೈಫ್ ಅವರ ಟವೆಲ್ ದೃಶ್ಯವನ್ನು ಮಾರ್ಫ್ ಮಾಡಲಾಗಿದೆ. ಡೀಪ್‌ಫೇಕ್ ಚಿತ್ರವು ವೈರಲ್ ಆಗಿದೆ. ಇದು ನಿಜವಾಗಿಯೂ ನಾಚಿಕೆಗೇಡಿನ ಸಂಗತಿ. AI ಒಂದು ಉತ್ತಮ ಸಾಧನ. ಆದರೆ ಮಹಿಳೆಯರನ್ನು ಕೆಟ್ಟದಾಗಿ ತೋರಿಸಲು ಅದನ್ನು ಬಳಸುವುದು ಕ್ರಿಮಿನಲ್ ಅಪರಾಧ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ.

katrina-kaif-falls-victim-to-deepfake

ಇನ್ನು, ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಸಿನಿಮಾದ ಟ್ರೈಲರ್ ಬಿಡುಗಡೆಯಾದಾಗಿನಿಂದ ಕತ್ರಿನಾ ಕೈಫ್ ಅವರ ಟವೆಲ್ ಫೈಟ್ ದೃಶ್ಯವು ಭಾರಿ ಸುದ್ದಿಯಲ್ಲಿದೆ. ನಟಿ ಕೂಡ ಈ ಫೈಟ್ ಬಗ್ಗೆ ಇದನ್ನು ಶೂಟ್ ಮಾಡಲು ಕಷ್ಟಕರವಾಗಿತ್ತು. ಇಬ್ಬರು ಮಹಿಳೆಯರು ಈ ರೀತಿ ಫೈಟ್ ಮಾಡುವ ಸೀಕ್ವೆನ್ಸ್ ಇರುವುದು ಅಪರೂಪ ಎಂದು ಹೇಳಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಪ್ರಕರಣದಲ್ಲಿ, ಡೀಪ್‌ಫೇಕ್ ವಿಡಿಯೋದಲ್ಲಿ ಯುವತಿಯೊಬ್ಬರು ಎದೆಯ ಭಾಗ ರಿವೀಲ್ ಮಾಡುವ ಕಪ್ಪು ಬಟ್ಟೆಯನ್ನು ಧರಿಸಿ ಲಿಫ್ಟ್‌ಗೆ ಎಂಟ್ರಿ ನೀಡುವುದನ್ನು ತೋರಿಸುತ್ತದೆ. ಆದರೆ, ಆಕೆಯ ಮುಖವನ್ನು ರಶ್ಮಿಕಾಗೆ ಹೋಲುವ ರೀತಿಯಲ್ಲಿ ಮಾರ್ಫ್ ಮಾಡಿ ಎಡಿಟ್ ಮಾಡಲಾಗಿತ್ತು. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋ ನಕಲಿ ಎಂದು ಗಮನಸೆಳೆದ್ದರು. ಆದರೂ ಕೂಡ ವಿಡಿಯೋ ಹೆಚ್ಚು ವೈರಲ್ ಆಗಿತ್ತು.

ಮಾರ್ಫ್ ಮಾಡಿದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆದ ಬಳಿಕ ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರಿ. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ ಮಂದಣ್ಣ, "ಅತ್ಯಂತ ಭಯಾನಕ" ಎಂದಿದ್ದಾರೆ. ಇನ್ನೂ ಮೂಲ ವಿಡಿಯೋದಲ್ಲಿರುವ ಜಾರಾ ಪಟೇಲ್ ಕೂಡ ಆಘಾತ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ನಕಲಿ ವಿಡಿಯೋಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.

More from Filmibeat

English summary
After Rashmika Mandanna, Katrina Kaif falls victim to Deepfake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X