ನ್ಯೂರೋಎಂಡೋಕ್ರೈನ್ ಟ್ಯೂಮರ್ ವಿರುದ್ಧ ಗೆದ್ದು ಬಂದ ಇರ್ಫಾನ್: ಹೊಸ ಸಿನಿಮಾ ಅನೌನ್ಸ್

ಬಾಲಿವುಡ್ ನ ಖ್ಯಾತ ನಟ ಇರ್ಪಾನ್ ಖಾನ್ ಅನಾರೋಗ್ಯದ ಕಾರಣ ಕಳೆದ ವರ್ಷ ಆಸ್ಪತ್ರೆ ದಾಖಲಾಗಿದ್ದರು. ತೀರಾ ಅಪರೂಪದ ಖಾಯಿಲೆ ನ್ಯೂರೋಎಂಡೋಕ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಇರ್ಫಾನ್ ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಖಾಯಿಲೆ ವಿರುದ್ದ ಹೋರಾಡಿ ಗೆದ್ದು ಬಂದ ಇರ್ಫಾನ್ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

2018 ರಲ್ಲಿ ರಿಲೀಸ್ ಆಗಿದ್ದ ಕರ್ವಾನ್ ಚಿತ್ರದ ನಂತರ ಇರ್ಫಾನ್ ಮತ್ತೆ ಬಣ್ಣ ಹಚ್ಚಲಿಲ್ಲ. ಸುಮಾರು ಒಂದು ವರ್ಷ ಲಂಡನ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇರ್ಪಾನ್ ಈಗ ಗುಣಮುಖರಾಗಿ ಭಾರತಕ್ಕೆ ಮರಳಿದ್ದಾರೆ. ಅಷ್ಟೆಯಲ್ಲ ಸಿನಿಪಯಣವನ್ನು ಮುಂದುವರಿಸುತ್ತಿದ್ದಾರೆ.

ಇರ್ಫಾನ್ ಮತ್ತೆ ಬಣ್ಣ ಹಚ್ಚುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಂದ್ಹಾಗೆ ಇರ್ಫಾನ್ ಖಾನ್ ಹಿಂದಿ ಮೀಡಿಯಂ ಸೀಕ್ವೆಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2017ರಲ್ಲಿ ರಿಲೀಸ್ ಆಗಿದ್ದ ಹಿಂದಿ ಮೀಡಿಯಂ ಸೂಪರ್ ಹಿಟ್ ಸಿನಿಮಾ ಆಗಿತ್ತು. ಮೊದಲ ಭಾಗದಲ್ಲಿ ಅಭಿಮಾನಿಗಳ ಮನಗೆದ್ದಿದ್ದ ಇರ್ಫಾನ್ ಈಗ ಪಾರ್ಟ್-2 ಮೂಲಕ ಮತ್ತೆ ಬರುತ್ತಿದ್ದಾರೆ.

after-receiving-treatment-irrfan-khan-back-to-work

ವಿಶೇಷ ಅಂದ್ರೆ ಪಾರ್ಟ್ -2 ನಲ್ಲಿ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಕರೀನಾ ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದಾರೆ. ವೀರ್ ದಿ ವೆಡ್ಡಿಂಗ್ ಚಿತ್ರದ ನಂತರ ಕರೀನಾ ಮತ್ತೆ ಪ್ರೇಕ್ಷಕರ ಮುಂದೆ ಬಂದಿಲ್ಲ. ಹಿಂದಿ ಮೀಡಿಯಂ ಪಾರ್ಟ್-2 ಮೂಲಕ ಪೊಲೀಸ್ ಆಗಿ ಎಂಟ್ರಿ ಕೊಡುತ್ತಿದ್ದಾರೆ.

ಹಿಂದಿ ಮೀಡಿಯಂ ಭಾರತೀಯ ವಿದ್ಯಾಭ್ಯಾಸದ ಬಗ್ಗೆ ಇದ್ದ ಸಿನಿಮಾ ಆಗಿತ್ತು. ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಹೋರಾಡುವ ಪೋಷಕರ ಕಥೆಯನ್ನು ಹಿಂದಿ ಮೀಡಿಯಂ ಮೂಲಕ ನಿರ್ದೇಶಕ ಸಾಕೇತ್ ಚೌಧರಿ ಸುಂದರವಾಗಿ ಕಟ್ಟಿಕೊಟ್ಟಿದ್ದರು. ಇರ್ಫಾನ್ ಖಾನ್ ಮತ್ತೆ ವಾಪಸ್ ಆಗಿರುವ ಖುಷಿಯ ಜೊತೆಗೆ ಉತ್ತಮ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವುದು ಚಿತ್ರಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.

More from Filmibeat

English summary
After receiving neuroendocrine tumour treatment in London, Irrfan Khan return to india and back to work. he is playing lead role in hindi medium part-2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X