'ಸಂಜು' ಬಳಿಕ ಮತ್ತೆ ಒಂದಾಗಲಿದ್ದಾರಾ ರಾಜ್‌ಕುಮಾರ್ ಹಿರಾನಿ ಮತ್ತು ರಣಬೀರ್ ಕಪೂರ್..?

ರಾಜ್‌ಕುಮಾರ್ ಹಿರಾನಿ ಈ ವರ್ಷ ನಟ ಶಾರುಖ್ ಖಾನ್ ಜೊತೆಗೆ ಕೈ ಜೋಡಿಸಿದ್ದರು. ಇಬ್ಬರ ಕಾಂಬಿನೇಷನ್‌ನಲ್ಲಿ ಬಂದ 'ಡಂಕಿ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೂಡ ಕಮಾಲ್ ಮಾಡಿದೆ. ಇದರ ಜೊತೆಗೆ ಮತ್ತೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಮುಂದಿನ ಸಿನಿಮಾ ಬಗ್ಗೆ ಮಾತುಕತೆ ಆರಂಭವಾಗಿದೆ.

ನಿರ್ದಶಕ ರಾಜ್‌ಕುಮಾರ್ ಹಿರಾನಿ ಮತ್ತು ರಣಬೀರ್ ಕಪೂರ್ 2018 ರಲ್ಲಿ ಸಂಜಯ್ ದತ್ ಅವರ ಜೀವನಚರಿತ್ರೆಯನ್ನು 'ಸಂಜು' ಮೂಲಕ ತೆರೆಗೆ ತಂದಿದ್ದರು. ಈ ಸಿನಿಮಾ ವಿಮರ್ಶಾತ್ಮಕ ಮತ್ತು ವಾಣಿಜ್ಯಿಕವಾಗಿಯೂ ಯಶಸ್ಸನ್ನು ಗಳಿಸಿತು. ಇದಾದ ಬಳಿಕ ಮತ್ತೆ ಈ ಜೋಡಿ ಒಂದಾಗುತ್ತಾರಾ ಎಂಬ ಕುತೂಹಲ ಜನರಿಗಿತ್ತು. ಇದಕ್ಕೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಉತ್ತರ ನೀಡಿದ್ದಾರೆ.

After Sanju, Director Rajkumar Hirani and Actrot Ranbir Kapoor will join hands again

ಮತ್ತೆ ಒಂದಾಗುತ್ತಾ ರಾಜ್‌ಕುಮಾರ್ ಹಿರಾನಿ ಮತ್ತು ರಣಬೀರ್ ಕಪೂರ್ ಜೋಡಿ?

ಈ ವರ್ಷ ಮೊದಲ ಬಾರಿಗೆ ಶಾರುಖ್ ಖಾನ್ ಅವರೊಂದಿಗೆ 'ಡಂಕಿ' ಸಿನಿಮಾಗಾಗಿ ರಾಜ್‌ಕುಮಾರ್ ಹಿರಾನಿ ಕೈ ಜೋಡಿಸಿದ್ದಾರೆ. ಆದರೆ, ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತೊಮ್ಮೆ ರಣಬೀರ್ ಕಪೂರ್ ಜತೆ ಕೈಜೋಡಿಸಲಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ IndiaToday.in ಜೊತೆಗಿನ ವಿಶೇಷ ಸಂವಾದದಲ್ಲಿ, ರಾಜ್‌ಕುಮಾರ್ ಹಿರಾನಿ ರಣಬೀರ್ ಜೊತೆ ಮತ್ತೆ ಚಿತ್ರವೊಂದಕ್ಕೆ ಜೊತೆಯಾಗುವ ಬಗ್ಗೆ ತಮ್ಮ ಮಾತನಾಡಿದ್ದಾರೆ. ಸದ್ಯ ರಣಬೀರ್ ಕಪೂರ್ ತಮ್ಮ 'ಅನಿಮಲ್' ಸಿನಿಮಾ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ.

'ರಣಬೀರ್ ಜೊತೆ ಇನ್ನೊಂದು ಸಿನಿಮಾ ಮಾಡುತ್ತೇನೆ'

'ಡಂಕಿ' ನಿರ್ದೇಶಕ ರಾಜ್‌ಕುಮಾರ್ ಹಿರಾನಿ 2018 ರಲ್ಲಿ ಬ್ಲಾಕ್‌ಬಸ್ಟರ್ 'ಸಂಜು' ಸಿನಿಮಾ ನೀಡಿದ್ದರು. ಸಂಜು ಬಳಿಕ ರಣಬೀರ್ ಕಪೂರ್ ಅವರೊಂದಿಗೆ ಮತ್ತೆ ಕೆಲಸ ಮಾಡುವ ಬಗ್ಗೆ ಮಾತನಾಡಿದ್ದಾರೆ. "ರಣಬೀರ್ ಒಬ್ಬ ಸಂಪೂರ್ಣ ಲವ್‌ಲಿ ಮ್ಯಾನ್. 'ಸಂಜು' ಸಿನಿಮಾದಲ್ಲಿ ಕೆಲಸ ಮಾಡುವಾಗ ನಾವು ತುಂಬಾ ಖುಷಿಪಟ್ಟಿದ್ದೇವೆ. ಅವರ ಜೊತೆ ಇನ್ನೊಂದು ಸಿನಿಮಾ ಮಾಡಲು ಖಂಡಿತಾ ಇಷ್ಟಪಡುತ್ತೇನೆ. ನನ್ನ ಬಳಿ ಕೆಲವು ಸ್ಕ್ರಿಪ್ಟ್‌ಗಳಿವೆ ಮತ್ತು ನಾವು ಸಂಪರ್ಕದಲ್ಲಿದ್ದೇವೆ. ಅದು ಎಲ್ಲಿಗೆ ಹೋಗುತ್ತದೆ ಎಂದು ನೋಡೋಣ" ಎಂದು ಹೇಳಿದ್ದಾರೆ.

"ಕೆಲವೊಮ್ಮೆ, ನೀವು ನಿರ್ದಿಷ್ಟ ಸ್ಕ್ರಿಪ್ಟ್ ಅನ್ನು ಬರೆಯಲು ಪ್ರಾರಂಭಿಸುತ್ತೀರಿ. ಆದರೆ, ಅದು ಮುಂದುವರೆಯುವುದೇ ಇಲ್ಲ. ಆಗ ಅದ್ನು ಅಲ್ಲಿಯೇ ಬಿಟ್ಟು ಬೇರೆಂದು ಕೆಲಸಕ್ಕೆ ಕೈ ಹಾಕುತ್ತಿದೆ. ಅದು ನಿಮ್ಮ ಕೈ ಹಿಡಿಯುತ್ತದೆ. ಹೀಗಾಗಿ ಏನಾದರೂ ಒಮದು ನಡೆಯುತ್ತಲೇ ಇರುತ್ತದೆ. ನಿಜ ನಾನು ರಣಬೀರ್ ಅವರನ್ನು ಇಷ್ಟಪಡುತ್ತೇನೆ" ಎಂದು ರಣಬೀರ್ ಕಪೂರ್ ಜೊತೆಗೆ ಮತ್ತೊಂದು ಸಿನಿಮಾ ಮಾಡುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

After Sanju, Director Rajkumar Hirani and Actrot Ranbir Kapoor will join hands again

ರಾಜ್‌ಕುಮಾರ್ ಹಿರಾನಿ ಮತ್ತು 'ಡಂಕಿ'

ರಣಬೀರ್ ಕಪೂರ್ ಜೊತೆಗಿನ 2018 ರ ಬ್ಲಾಕ್‌ಬಸ್ಟರ್ 'ಸಂಜು' ಸಿನಿಮಾ ಬಳಿಕ ರಾಜ್‌ಕುಮಾರ್ ಹಿರಾನಿ ಮತ್ತೆ ಕೆಲಸಕ್ಕೆ ಇಳಿದಿದ್ದು, ಈ ವರ್ಷವೇ. ಈ ಬಾರಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಖಾರುಖ್ ಖಾನ್ ಅವರೊಂದಿಗೆ ಕೈ ಜೋಡಿಸಿ ಭಾವಚನಾತ್ಮ ಜರ್ನಿಯ 'ಡಂಕಿ'ಯನ್ನು ಪ್ರೇಕ್ಷಕರ ಮುಂದಿಟ್ಟಿದ್ದರು. ಈ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ರೂ 323.77 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಶಾಂತ್ ನೀಲ್ ಅವರ ಬಹುನಿರೀಕ್ಷಿತ ಸಲಾರ್ ಸಿನಿಮಾ ಜೊತೆಗೆ ಬಾಕ್ಸ ಆಫೀಸ್ ಪೈಪೋಟಿ ನೀಡಿದ್ದ 'ಡಂಕಿ' ಹಾಕಿದ ಬಂಡವಾಳಕ್ಕಿಂತ ಹೆಚ್ಚಿನದ್ದನ್ನೇ ಗಳಿಸಿದೆ.

More from Filmibeat

English summary
Director Rajkumar Hirani and Ranbir Kapoor to join hands again.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X