For Quick Alerts
  ALLOW NOTIFICATIONS  
  For Daily Alerts

  ತಾಪ್ಸಿಯನ್ನು ಕಂಡರೆ ಉರಿದು ಬೀಳುತ್ತಿದ್ದ ಕಂಗನಾಗೆ ಈಗ ದಿಢೀರ್ ಪ್ರೀತಿ ಉಕ್ಕಿದ್ದೇಕೆ?

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಸದ್ದು ಮಾಡುವ ಕಂಗನಾ, ನೆಪೋಟಿಸಂ, ಗ್ರೂಪಿಸಂ ವಿಚಾರವಾಗಿ ಅನೇಕರ ವಿರುದ್ಧ ಸಿಡಿದೆದ್ದಿದ್ದರು.

  ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದ ತಾಪ್ಸಿ ಮತ್ತು ಕಂಗನಾ ಒಂದಾಗಿ ಬಿಟ್ರಾ? | Taapsee Pannu|Filmibeat Kannada

  ಬಹುಭಾಷ ನಟಿ ತಾಪ್ಸಿಯನ್ನು ಅನೇಕ ಬಾರಿ ತರಾಟೆ ತೆರೆದುಕೊಂಡಿದ್ದ ಕಂಗನಾ, ಬಿ ಗ್ರೇಡ್ ನಟಿ ಜರಿದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವೆ ವಾಕ್ಸಮರ ತಾರಕಕ್ಕೇರಿತ್ತು. ಸದಾ ಕಿತ್ತಾಡುತ್ತಿದ್ದ ನಟಿಯರು ಈಗ ಒಬ್ಬರಿಗೊಬ್ಬರು ಹೊಗಳಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾಪ್ಸಿಗೆ ಧನ್ಯವಾದ ಹೇಳುವ ಮೂಲಕ ಕಂಗನಾ ಅಚ್ಚರಿ ಮೂಡಿಸಿದ್ದಾರೆ.

  ಅಕ್ಷಯ್ ಕುಮಾರ್‌ರಿಂದ ಕಂಗನಾಗೆ ರಹಸ್ಯ ಸಂದೇಶ: ಅಸಮಾಧಾನ ಹೊರಹಾಕಿದ ನಟಿಅಕ್ಷಯ್ ಕುಮಾರ್‌ರಿಂದ ಕಂಗನಾಗೆ ರಹಸ್ಯ ಸಂದೇಶ: ಅಸಮಾಧಾನ ಹೊರಹಾಕಿದ ನಟಿ

  ಇತ್ತೀಚಿಗೆ ನಟಿ ತಾಪ್ಸಿ ಉತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಗೆದ್ದಿದ್ದಾರೆ. ಆ ಸಮಯದಲ್ಲಿ ವೇದಿಕೆ ಮೇಲೆ ಮಾತನಾಡುವಾಗ ಕಂಗನಾ ರಣಾವತ್ ಹೆಸರನ್ನು ಉಲ್ಲೇಖಸಿದ್ದಾರೆ. ಪ್ರಶಸ್ತಿಗೆ ನಾಮಿನೇಟ್ ಆಗಿದ್ದ ಎಲ್ಲಾ ನಟಿಯರನ್ನು ಹೆಸರನ್ನು ಹೇಳಿ ತಾಪ್ಸಿ ಧನ್ಯವಾದ ತಿಳಿಸಿದ್ದಾರೆ. ಅದೇ ಸಮಯದಲ್ಲಿ ಕಂಗನಾ ಹೆಸರನ್ನು ಹೇಳಿದ್ದಾರೆ. ಜೊತೆಗೆ ಅದ್ಭುತ ನಟನೆ ಮಾಡುವಂತೆ ಪ್ರೇರೇಪಿಸಿದ ಕಂಗನಾಗೆ ಧನ್ಯವಾದ ಎಂದಿದ್ದಾರೆ.

  ಪ್ರಶಸ್ತಿ ಸಮಾರಂಭ ಮುಗಿದು ಕೆಲವು ದಿನಗಳ ಈ ವಿಡಿಯೋ ವೈರಲ್ ಆಗಿದೆ. ತಾಪ್ಸಿ ಕಂಗನಾಗೆ ಧನ್ಯವಾದ ಹೇಳುತ್ತಿರುವ ವಿಡಿಯೋ ತುಣುಕನ್ನು ಕಂಗನಾ ಶೇರ್ ಮಾಡಿ, ತಾಪ್ಸಿಯನ್ನು ಹೊಗಳಿದ್ದಾರೆ. ಪ್ರಶಸ್ತಿ ಪಡೆದಿದ್ದಕ್ಕೆ ಧನ್ಯವಾದ ತಿಳಿಸಿ, ನಿಮಗಿಂತ ಇದಕ್ಕೆ ಅರ್ಹರು ಯಾರು ಇಲ್ಲ ಎಂದು ಹೇಳಿದ್ದಾರೆ.

  ಇಬ್ಬರ ಆತ್ಮಿಯ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಂಗನಾ ಅಭಿಮಾನಿಗಳು ತಾಪ್ಸಿ ವಿಡಿಯೋ ಶೇರ್ ಮಾಡಿ, ಧನ್ಯವಾದ ತಿಳಿಸುತ್ತಿದ್ದಾರೆ. ಅಂದಹಾಗೆ ಕಂಗನಾ ಈ ಬಾರಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಂಗ ಮತ್ತು ಮಣಿಕರ್ಣಿಕಾ ಸಿನಿಮಾದ ಉತ್ತಮ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ.

  English summary
  After taapsee pannu thanks kangana ranaut in award program, Kangana replies well deserved you.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X