ಅಂದು ಶಾರುಖ್ - ಅಟ್ಲಿ ಫೋಟೊ ಫೇಕ್ ಎಂದಿದ್ದರು: 10 ವರ್ಷಗಳ ನಂತರ ಏನಾಯ್ತು ನೋಡಿ

ಶಾರುಕ್ ಖಾನ್ ನಟನೆಯ 'ಜವಾನ್' ಸಿನಿಮಾ ಪ್ರಿವ್ಯೂ ವಿಡಿಯೋ ಧೂಳೆಬ್ಬಿಸಿದೆ. ತಮಿಳು ನಿರ್ದೇಶಕ ಅಟ್ಲಿ ಟೇಕಿಂಗ್, ಶಾರುಖ್ ಪರ್ಫಾರ್ಮನ್ಸ್ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಕೆಲ ಸೂಪರ್ ಹಿಟ್ ಸಿನಿಮಾಗಳ ದೃಶ್ಯಗಳಿಂದ ಪ್ರೇರಣೆಗೊಂಡಿರೋದು ಗೊತ್ತಾಗುತ್ತಿದೆ. ಆದರೂ ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. 'ಜವಾನ್' ಸೂಪರ್ ಹಿಟ್ ಆಗೋದು ಗ್ಯಾರೆಂಟಿ ಎಂದು ಕೆಲವರು ಭವಿಷ್ಯ ನುಡಿದಿದ್ದಾರೆ.

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ತಮಿಳು ನಿರ್ದೇಶಕ ಅಟ್ಲಿಗೆ ಅವಕಾಶ ಕೊಟ್ಟಾಗ ಕೆಲವರಿಗೆ ಅಚ್ಚರಿ ಎನಿಸಿತ್ತು. ಅರೇ ಬಿಟೌನ್‌ನಲ್ಲಿ ದೊಡ್ಡ ದೊಡ್ಡ ನಿರ್ದೇಶಕರು ಕಿಂಗ್‌ ಖಾನ್‌ಗೆ ಕಥೆ ಬರೆದಿಟ್ಟುಕೊಂಡು ಸಿನಿಮಾ ಮಾಡೋಕೆ ಸಿದ್ಧರಿದ್ದಾರೆ. ಅವರನ್ನೆಲ್ಲಾ ಬಿಟ್ಟು ತಮಿಳು ನಿರ್ದೇಶಕನಿಗೆ ಯಾಕೆ ಅವಕಾಶ ಕೊಟ್ಟರು? ಸಾಲದ್ದಕ್ಕೆ ತಾವೇ ಸಿನಿಮಾ ನಿರ್ಮಾಣ ಮಾಡುವ ದುಸ್ಸಾಹಸ ಮಾಡುತ್ತಿದ್ದಾರಲ್ಲ ಶಾರುಖ್ ಖಾನ್? ಎಂದು ಹುಬ್ಬೇರಿಸಿದ್ದರು. ಆದರೆ ಬಾಲಿವುಡ್ ಬಾದ್‌ಶಾ ಲೆಕ್ಕಾಚಾರ ತಪ್ಪಾಗಲಿಲ್ಲ. ಟೀಸರ್ ಪರೀಕ್ಷೆಯಲ್ಲಿ ಅಟ್ಲಿ ಫಸ್ಟ್‌ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾರೆ.

ShahRukh -Khan- Atlee -photo

ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಬಳಿ ಸಹಾಯಕರಾಗಿ ಅಟ್ಲಿ ತಮ್ಮ 19ನೇ ವಯಸ್ಸಿನಲ್ಲೇ ಕೆಲಸ ಆರಂಭಿಸಿದರು. 'ಎಂದಿರನ್', 'ನನ್ಬನ್' ಸಿನಿಮಾಗಳಲ್ಲಿ ಕೆಲಸ ಮಾಡಿದ ಬಳಿಕ 'ರಾಜ ರಾಣಿ' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾದರು. ತೇರಿ, ಮೆರ್ಸಲ್, ಬಿಗಿಲ್ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿ ಯುವ ನಿರ್ದೇಶಕ ಗೆದ್ದರು. ಇದೀಗ ಬಾಲಿವುಡ್‌ ಪ್ರವೇಶಿಸಿದ್ದಾರೆ. ಶಾರುಖ್ ಖಾನ್‌ಗೆ ಆಕ್ಷನ್ ಕಟ್ ಹೇಳಿದ್ದಾರೆ.

ಶಾರುಖ್-ಅಟ್ಲಿ ಫೋಟೊ ಫೇಕ್!

2013ರಲ್ಲಿ ಅಟ್ಲಿ ಒಮ್ಮೆ ಶಾರುಖ್ ಖಾನ್ ಭೇಟಿ ಆಗಿದ್ದರು. ಆಗ ಫೋಟೊ ಕ್ಲಿಕ್ಕಿಸಿಕೊಂಡು ತಮ್ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದರು. ಆಗ ಇನ್ನು 'ರಾಜ ರಾಣಿ' ಚಿತ್ರವನ್ನು ಮಾತ್ರ ಅವರು ನಿರ್ದೇಶನ ಮಾಡಿದ್ದರು. ಹಾಗಾಗಿ ಅವರ ಪರಿಚಯ ಹೆಚ್ಚಿನ ಜನರಿಗೆ ಇರಲಿಲ್ಲ. ಇನ್ನು ಶಾರುಖ್ ಭೇಟಿ ಆಗಿದ್ದನ್ನು ಕೆಲವರು ನಂಬಿರಲಿಲ್ಲ. ಕೆಲವರು ಆ ಪೋಸ್ಟ್‌ಗೆ 'ಫೋಟೊಶಾಪ್' ಎಂದು ಕಾಮೆಂಟ್ ಮಾಡಿದ್ದರು. ಅಂದರೆ ಅಟ್ಲಿ ಬಾಲಿವುಡ್‌ ನಟ ಶಾರುಖ್‌ನ ಭೇಟಿ ಮಾಡಿಲ್ಲ. ಈ ಫೋಟೊ ಫೇಕ್, ಸುಖಾ ಸುಮ್ಮನೆ ಫೇಕ್ ಫೋಟೊ ಹಾಕಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಮೂದಲಿಸಿದಂತಿತ್ತು.

ShahRukh -Khan- Atlee -photo

ಕೊನೆಗೂ ಸಾಧಿಸಿ ತೋರಿಸಿದ ಅಟ್ಲಿ

ಸರಿಯಾಗಿ 10 ವರ್ಷಗಳ ನಂತರ ಅದೇ ಅಟ್ಲಿ ಈಗ ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಬಹುಕೋಟಿ ವೆಚ್ಚ ಪ್ಯಾನ್ ಇಂಡಿಯಾ ಸಿನಿಮಾ. ಅಟ್ಲಿ ಮೇಲಿನ ನಂಬಿಕೆಯಿಂದ ಸ್ವತಃ ಕಿಂಗ್ ಖಾನ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಸೆಪ್ಟೆಂಬರ್ 7ಕ್ಕೆ ತೆರೆಗಪ್ಪಳಿಸಲಿದೆ. ಅಂದು ಬರೀ ಶಾರುಖ್ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಹಾಕಿದ್ದ ಅಟ್ಲಿ ಇಂದ ಅವರೊಟ್ಟಿಗೆ ಕೆಲಸ ಮಾಡುವಮಟ್ಟಿಗೆ ಸಾಧಿಸಿ ತೋರಿಸಿದ್ದಾರೆ. ಇದು ನಿಜವಾದ ಸಾಧನೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಹಳೇ ಪೋಸ್ಟ್ ವೈರಲ್

'ಜವಾನ್' ಟೀಸರ್ ಸದ್ದು ಮಾಡಲು ಆರಂಭಿಸುತ್ತಿದ್ದಂತೆ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಮೂಲಕ ಅಟ್ಲಿ ಗೆಲ್ಲೋದು ಕನ್ಫರ್ಮ್ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೆಲ್ಲದರ ನಡುವೆ ಅಟ್ಲಿಯ ಆ ಹಳೇ ಪೋಸ್ಟ್ ಈಗ ವೈರಲ್ ಆಗ್ತಿದೆ. ನಿಜಕ್ಕೂ ಇದು ಅದ್ಭುತ ಸಾಧನೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇದು ನಿಜವಾದ 10 ಇಯರ್ಸ್ ಚಾಲೆಂಜ್ ಎಂದು ಕೆಲವರು ಹೇಳುತ್ತಿದ್ದಾರೆ.

ಕುತೂಹಲ ಕೆರಳಿಸಿದ 'ಜವಾನ್'

4 ವರ್ಷಗಳ ನಂತರ ಶಾರುಖ್ ಖಾನ್ 'ಪಠಾಣ್' ಸಿನಿಂಆ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಆ ಸಿನಿಮಾ ಬರೋಬ್ಬರಿ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆಕ್ಷನ್ ಥ್ರಿಲ್ಲರ್ 'ಜವಾನ್' ಸಿನಿಮಾ ಸಿನಿಮಾ ಕೂಡ ಇದೇ ಹಾದಿಯಲ್ಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅಷ್ಟರಮಟ್ಟಿಗೆ ಟೀಸರ್ ಗಮನ ಸೆಳೆಯುತ್ತಿದೆ. ಇನ್ನು ಚಿತ್ರದಲ್ಲಿ ವಿಜಯ್ ಸೇತುಪತಿ, ನಯನತಾರಾ, ಪ್ರಿಯಾಮಣಿ ಸೇರಿದಂತೆ ದೊಡ್ಡ ತಾರಾಗಣ ಇದೆ. ದಳಪತಿ ವಿಜಯ್, ದೀಪಿಕಾ ಪಡುಕೋಣೆ, ಸಂಜಯ್ ದತ್ ಸೇರಿದಂತೆ ಖ್ಯಾತನಾಮರು ಚಿತ್ರದ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
After the success of Shah Rukh Khan's Jawaan Prevue, Atlee's old post has gone viral. action thriller film scheduled for theatrical release on 7 September 2023. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X