ವಯಸ್ಸು 66 ಆದರೂ ಈ ಖ್ಯಾತ ಗಾಯಕನಿಗೆ ನಾಲ್ಕನೇ ಮದುವೆಯಾಗುವ ಚಪಲ..!
ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವತಂಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ನಿಜವಾಗಿ ಪ್ರೀತಿಯ ಮೂಲಕ ಇಳಿದು ನೋಡಿದಾಗ, ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ. ಆದರೆ ಈಗೀಗ ಪ್ರೀತಿ ಎಂಬ ಪದಕ್ಕೆ ಅರ್ಥ ಇಲ್ಲದಂತಾಗಿದೆ. ಕೆಲವರನ್ನು ನೋಡಿದಾಗ ಪ್ರೀತಿ ಮರೆಯಾಗಿದೆ ಎಂಬ ಭಾವನೆ ಬರುತ್ತೆ. ಉದಾಹರಣೆಗೆ ಲಕ್ಕಿ ಅಲಿ ಅವರನ್ನೇ ತೆಗೆದುಕೊಳ್ಳಿ.
ಹೌದು, ಲಕ್ಕಿ ಅಲಿ. ಭಾರತೀಯ ಚಿತ್ರರಂಗದ ಹೆಸರಾಂತ ಗಾಯಕ. ಸಂಗೀತ ನಿರ್ದೇಶಕ. ಕಹೋ ನಾ ಪ್ಯಾರ್ ಹೈ ಚಿತ್ರದ 'ನಾ ತುಮ್ ಜಾನೋ ನಾ ಹಮ್' ಮತ್ತು 'ಏಕ್ ಪಲ್ ಕಾ ಜೀನಾ' ಹಾಡು ಇವತ್ತು ಕೂಡ ಕೇಳುತ್ತಿದ್ದರೆ ಸಿಗುವ ಆನಂದವೇ ಬೇರೆ. ತನ್ನ ಕಂಠದಿಂದನೇ ಮೋಡಿ ಮಾಡಬಲ್ಲ ಲಕ್ಕಿ ಅಲಿ ಸುರ್.. ಕಾಂಟೆ.. ಗುಡ್ ಲಕ್.. ರನ್ ಅವೇ ಸೇರಿ ಅನೇಕ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇಂಥಾ ಲಕ್ಕಿ ಅಲಿ ಈಗ ನಾಲ್ಕನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಎಲ್ಲರನ್ನು ಅಚ್ಚರಿಗೆ ದೂಡಿದ್ದಾರೆ.

ಹೌದು, ದೆಹಲಿಯಲ್ಲಿನ ಸುಂದರ್ ನರ್ಸರಿಯಲ್ಲಿ ನಡೆದ 18ನೇ ಕಥಕರ್ ಅಂತರಾಷ್ಟ್ರೀಯ ಕಥೆಗಾರ ಉತ್ಸವದಲ್ಲಿ ಲಕ್ಕಿ ಅಲಿ ಇತ್ತೀಚೆಗೆ ಭಾಗವಹಿಸಿದ್ದರು. ಈ ಸಮಯದಲ್ಲಿ ತಮ್ಮ ಸುಪ್ರಸಿದ್ದ ಹಾಡುಗಳನ್ನು ಹಾಡಿ ಲಕ್ಕಿ ಅಲಿ ಆ ಹಾಡುಗಳ ಹಿಂದಿನ ಕಥೆಯನ್ನು ಹೇಳಿದರು. ನೆರೆದವರ ಜೊತೆ ಮಾತನಾಡಿದರು. ಈ ಸಮಯದಲ್ಲಿ ನಿಮ್ಮ ಮುಂದಿನ ಬಹುದೊಡ್ಡ ಕನಸು ಏನು ಎಂದು ಕೇಳಿದಾಗ 66ರ ಹರೆಯದ ಲಕ್ಕಿ ಅಲಿ ಮತ್ತೆ ಮದುವೆಯಾಗುವುದೇ ನನ್ನ ಕನಸು ಎಂದು ಹೇಳಿದ್ದಾರೆ. ಸದ್ಯ ಲಕ್ಕಿ ಅಲಿ ಅವರ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ನಿಜಕ್ಕೂ ನಾಲ್ಕನೇ ಮದುವೆಯ ಕುರಿತು ಲಕ್ಕಿ ಅಲಿ ಆಲೋಚನೆಯನ್ನು ಮಾಡುತ್ತಿದ್ದಾರಾ ಎನ್ನುವ ಅನುಮಾನಕ್ಕೆ ಕೂಡ ಲಕ್ಕಿ ಅಲಿಯ ಈ ಮಾತು ಕಾರಣವಾಗಿದೆ. ಬಾಲಿವುಡ್‌ನಲ್ಲಿ ಲಕ್ಕಿ ಅಲಿ ವ್ಯೆಯಕ್ತಿಕ ಬದುಕು ಈ ಮೂಲಕ ಮತ್ತೊಮ್ಮೆ ಚರ್ಚೆಯಲ್ಲಿದೆ.
ಅಂದ್ಹಾಗೇ ಲಕ್ಕಿ ಅಲಿ 1996ರಲ್ಲಿ ಸುನೋ ಎಂಬ ಆಲ್ಬಂ ಮಾಡಿದ್ದರು. ಇವರ ಮೊದಲ ಪ್ರಯತ್ನ ಇದು. ಈ ಸಮಯದಲ್ಲಿ ಪರಿಚಯವಾದ ಆಸ್ಟ್ರೇಲಿಯಾದ ಮೇಘನ್ ಜೇನ್ ಮೆಕ್‌ಕ್ಲಿಯರಿ ಜೊತೆ ಲಕ್ಕಿ ಅಲಿ ಮದುವೆಯಾದರು. ಇವರ ಪ್ರೇಮಕ್ಕೆ ಸಂಕೇತವಾಗಿ ತವುಜ್ ಮತ್ತು ತಸ್ಮಿಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ 2000ನೇ ಇಸ್ವಿಯಲ್ಲಿ ಈ ಮದುವೆ ಮುರಿದು ಬಿತ್ತು. ಆ ನಂತರ ಅನಾಹಿತಾ ಎಂಬ ಪರ್ಷಿಯನ್ ಹುಡುಗಿಯನ್ನು ಮದುವೆಯಾಗಿದ್ದರು ಲಕ್ಕಿ ಅಲಿ.
ಲಕ್ಕಿ ಅಲಿ ಮೇಲಿನ ಪ್ರೀತಿಗೆ ಇಸ್ಲಾಂಗೆ ಕೂಡ ಮತಾಂತರಗೊಂಡ ಅನಾಹಿತಾ ತಮ್ಮ ಹೆಸರನ್ನು ಇನಾಯಾ ಎಂದು ಬದಲಿಸಿಕೊಂಡರು. ಇವರಿಗೆ ಸಾರಾ ಮತ್ತು ರಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ ದುರ್ದೈವ, ಈ ಸಂಬಂಧ ಕೂಡ ಮುರಿದು ಬಿತ್ತು.
ಆ ನಂತರ 2010ರಲ್ಲಿ ಬ್ರಿಟಿಷ್ ಮಾಡೆಲ್ ಕೇಟ್ ಎಲಿಜಬೆತ್ ಸೌಂದರ್ಯಕ್ಕೆ ಲಕ್ಕಿ ಅಲಿ ಮನ ಸೋತರು. ತನಗಿಂತ 25 ವರ್ಷ ಚಿಕ್ಕವಳಾಗಿದ್ದರೂ ಕೂಡ ಮದುವೆಯಾದರು. 07 ವರ್ಷ ಸಂಸಾರ ನಡೆಸಿದರು. 2017ರಲ್ಲಿ ಲಕ್ಕಿ ಅಲಿ ಅವರ ಈ ಮೂರನೇ ಮದುವೆ ಕೂಡ ಮುರಿದು ಬಿತ್ತು.
ಹೀಗೆ ಮೂರು ಬಾರಿ ಮದುವೆಯಾಗಿರುವ ಲಕ್ಕಿ ಅಲಿ ಈಗ ನಾಲ್ಕನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಮದುವೆಯಾಗುವುದು ನನ್ನ ಕನಸು ಎಂದಿದ್ದಾರೆ. ಲಕ್ಕಿ ಅಲಿ ಹಾಗೇ ಜಸ್ಟ್ ಮಾತ್ ಮಾತಲ್ಲಿ ಈ ಮಾತು ಹೇಳಿದ್ದಾ ಅಥವಾ ನಿಜಕ್ಕೂ ಮದುವೆಯಾಗುವ ಯೋಚನೆಯನ್ನು ಹೊಂದಿದ್ದಾರಾ ಗೊತ್ತಿಲ್ಲವಾದರೂ ಸದ್ಯ ಲಕ್ಕಿ ಅಲಿ ಈ ಮೂಲಕ ಸುದ್ದಿಯಲ್ಲಿ ಇರೋದು ಮಾತ್ರ ಸತ್ಯ.


Click it and Unblock the Notifications











