'ಪದ್ಮಾವತಿ'ಗೆ ಮತ್ತೆ ಸೆನ್ಸಾರ್ ಕಂಟಕ: ಸದ್ಯಕ್ಕಿಲ್ಲ ದೀಪಿಕಾ ಸಿನಿಮಾ

By Pavithra

ವಿವಾದಗಳಿಂದಲೇ ಸುದ್ದಿ ಆಗಿರುವ 'ಪದ್ಮಾವತಿ' ಸಿನಿಮಾ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಒಂದಾದ ನಂತರ ಮತ್ತೊಂದು ಕಂಟಕ ಚಿತ್ರಕ್ಕೆ ಸುತ್ತಿಕೊಳ್ಳುತ್ತಲೇ ಇದೆ. ಇನ್ನೇನು ಸೆನ್ಸಾರ್ ಆಗಿಯೇ ಬಿಟ್ಟಿತ್ತು, ನಿರ್ಮಾಪಕರು ದಿನಾಂಕ ನಿಗದಿ ಮಾಡುವುದಷ್ಟೇ ಬಾಕಿ ಎನ್ನುವ ಸಂದರ್ಭದಲ್ಲಿ ಸೆನ್ಸಾರ್ ಮಂಡಳಿ 'ಪದ್ಮಾವತಿ' ಚಿತ್ರತಂಡಕ್ಕೆ ಕಾರಣಗಳ ಪಟ್ಟಿ ನೀಡಿ ಸೆನ್ಸಾರ್ ಇನ್ನೂ ತಡವಾಗುತ್ತೆ ಎಂದಿದೆ.

ಮಾಹಿತಿಗಳ ಪ್ರಕಾರ 'ಪದ್ಮಾವತಿ' ಸಿನಿಮಾ ಈ ವರ್ಷ ಸೆನ್ಸಾರ್ ಆಗುವುದು ಬಹುತೇಕ ಕಷ್ಟ ಎಂದು ತಿಳಿದುಬಂದಿದೆ. 'ಪದ್ಮಾವತಿ' ಚಿತ್ರಕ್ಕೂ ಮುಂದೆ ಸಲ್ಲಿಸಿರುವ 40 ಸಿನಿಮಾಗಳನ್ನ ನೋಡಿದ ನಂತರ ಈ ಚಿತ್ರವನ್ನ ನೋಡಲಿದ್ದಾರೆ ಅಧಿಕಾರಿಗಳು.

again trouble for Padmavathi movie with censor

ವರ್ಷದ ಅಂತ್ಯ ಆಗಿರುವುದರಿಂದ ಅಧಿಕಾರಿಗಳು ರಜೆಯಲ್ಲಿದ್ದಾರಂತೆ. ಮತ್ತಷ್ಟು ಸದಸ್ಯರು ಆರೋಗ್ಯ ಸರಿಯಿಲ್ಲದ ಕಾರಣ ನೀಡಿ ಕೆಲಸಕ್ಕೆ ಗೈರಾಗಿದ್ದಾರೆ. 'ಪದ್ಮಾವತಿ' ಸಿನಿಮಾದ ಸುತ್ತಾ ವಿವಾದಗಳು ಸುತ್ತಿಕೊಂಡಿರುವ ಕಾರಣ ಸೆನ್ಸಾರ್ ಮಂಡಳಿ 'ಇತಿಹಾಸಕಾರ'ರನ್ನ ಚಿತ್ರ ನೋಡಲು ಆಹ್ವಾನ ಮಾಡಲು ಸಿದ್ದತೆ ಮಾಡಿಕೊಂಡಿದ್ಯಂತೆ.

ಸದ್ಯ, ಮುಂಬೈ ಸೆನ್ಸಾರ್ ಮಂಡಳಿಯಲ್ಲಿ ಪರಿಶೀಲನಾ ಸಮಿತಿಯ ಸದಸ್ಯರ ಸಮಸ್ಯೆ ಇದೆಯಂತೆ. ಜನವರಿ ಎರಡನೇ ಅಥವಾ ಮೂರನೇ ವಾರದಲ್ಲಿ ಪದ್ಮಾವತಿ ಸಿನಿಮಾ ಸೆನ್ಸಾರ್ ಆಗುವ ಸಾಧ್ಯತೆಗಳಿವೆ.

again trouble for Padmavathi movie with censor

ಸದ್ಯದ ಮಾಹಿತಿಯಂತೆ ಜನವರಿಯಲ್ಲಿ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದರೆ ಮಾರ್ಚ್ ಅಥವಾ ಏರ್ಪಿಲ್ ನಲ್ಲಿ 'ಪದ್ಮಾವತಿ' ಪ್ರೇಕ್ಷಕರಿಗೆ ದರ್ಶನ ನೀಡುತ್ತಾಳೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

More from Filmibeat

English summary
There is even more trouble for Bollywood Padmavati cinema censorship, According to sources, the film won't be certified before the second week of January, The movie can be released on March or April.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X