50ರ ಹರೆಯದ 4ನೇ ಪತ್ನಿ ಜೊತೆ ಗೋವಾದಲ್ಲಿ 10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿದ 80 ವರ್ಷದ ನಟ

ಪ್ರೀತಿಗೆ ವಯಸ್ಸಿಲ್ಲ ಅನ್ನೋದು ಲೋಕಾರೂಢಿ ಮಾತು. ಯಾವ ವಯಸ್ಸಿನಲ್ಲಾದರೂ ಕೂಡ ಈ ಪ್ರೀತಿ ಮೊಳಕೆಯೊಡೆಯಬಹುದು. ಮುಂದುವರೆಯಬಹುದು. ಮನದ ಮೂಲೆಯಲ್ಲೆಲ್ಲೋ ಗಟ್ಟಿಯಾಗಿ ಬೇರೂರಬಹುದು. ಹೀಗೆ ಬೇರೂರಿದ ಪ್ರೀತಿ ಆ ನಂತರ ದಾಂಪತ್ಯ ಜೀವನಕ್ಕೆ ಮುನ್ನುಡಿಯನ್ನು ಕೂಡ ಬರೆಯಬಹುದು. ಬದುಕಿನ ಲವಲವಿಕೆಗೆ, ಪತಿ- ಪತ್ನಿ ನಡುವಿನ ಅನ್ಯೋನ್ಯತೆಗೆ, ಅವರ ನಡುವಿನ ಆತ್ಮೀಯತೆಗೆ ಯಾವ ಕೋನದಲ್ಲೂ ಕೂಡ ವಯಸ್ಸಿನ ಹಂಗಿರುವುದಿಲ್ಲ.

ಒಂದೊಳ್ಳೆ ಮನಸ್ಸು ಮತ್ತು ದಾಂಪತ್ಯದ ಕಲೆಯನ್ನು ಅರಿತಿರುವ ನೈಪುಣ್ಯತೆಯನ್ನು ಹೊಂದಿದ್ದರೆ ಇಬ್ಬರ ನಡುವೆ ವಯಸ್ಸಿನ ಅಂತರ ಎಷ್ಟೇ ಇದ್ದರೂ ಕೂಡ ಸುಖವಾಗಿ ಸಂಸಾರ ನಡೆಸಬಹುದು. ಬದುಕಿ ಬಾಳಬಹುದು. ಉದಾಹರಣೆಗೆ ಕಬೀರ್ ಬೇಡಿ ಮತ್ತು ಪರ್ವೀನ್ ದುಸಾಂಜ್ ಅವರನ್ನೇ ತೆಗೆದುಕೊಳ್ಳಿ.

Ageless Passion Kabir Bedi Sets Ablaze With Birthday Celebration Alongside Wife Parveen Dusanj

ಹೌದು, ಕಬೀರ್ ಬೇಡಿ.. ಬಾಲಿವುಡ್‌ನ ದಂತ ಕತೆ. 70-80ರ ದಶಕದಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದ ಕಬೀರ್ ಬೇಡಿ ಆ ಕಾಲದಲ್ಲಿಯೇ ಹಾಲಿವುಡ್ ಸಿನಿಮಾ ಮಾಡಿದ್ದರು. 1983ರಲ್ಲಿ ಬಂದ ಜೇಮ್ಸ್ ಬಾಂಡ್ ಸರಣಿಯ ''ಆಕ್ಟೋಪಸ್ಸಿ'' ಚಿತ್ರದಲ್ಲಿ 'ಗೋಬಿಂದಾ' ಎಂಬ ಪಾತ್ರವನ್ನು ನಿರ್ವಹಿಸಿದ್ದರು. 5 ದಶಕಗಳ ಸುದೀರ್ಘವಾದ ವೃತ್ತಿ ಬದುಕಿನಲ್ಲಿ 150ಕ್ಕೂ ಅಧಿಕ ಚಿತ್ರಗಳನ್ನು ಮಾಡಿರುವ ಕಬೀರ್ ಬೇಡಿ ಕೇವಲ ಬಾಲಿವುಡ್ ಮತ್ತು ಹಾಲಿವುಡ್‌ಗೆ ಸೀಮಿತವಾಗಲಿಲ್ಲ. ಬದಲಿಗೆ ತೆಲುಗು ಮತ್ತು ತಮಿಳು ಚಿತ್ರಕ್ಕೆ ಕೂಡ ಕಬೀರ್ ಬೇಡಿ ಬಣ್ಣ ಹಚ್ಚಿದ್ದರು.

ಇಂಥಾ ಕಬೀರ್ ಬೇಡಿ ಮೊನ್ನೆ (ಜನವರಿ 16 ) 80ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಪತ್ನಿ ಪರ್ವೀನ್ ದುಸಾಂಜ್ ಅವರ ಜೊತೆ ಕಡಲ ಕಿನಾರೆಯ ಬಳಿ ರೊಮ್ಯಾಂಟಿಕ್ ಮೂಡಿನಲ್ಲಿ ಫೋಸ್ ಕೊಟ್ಟಿದ್ದಾರೆ. ವಿಶೇಷ ಅಂದರೆ ಕಬೀರ್ ಬೇಡಿ ಅವರಿಗೆ ಪರ್ವೀನ್ ದುಸಾಂಜ್ ನಾಲ್ಕನೇ ಪತ್ನಿ. ಇನ್ನೂ ವಿಶೇಷ ಅಂದರೆ ಇವರ ಇಬ್ಬರ ನಡುವೆ 29 ವರ್ಷಗಳ ಅಂತರ ಇದೆ. ಕುತೂಹಲದ ವಿಚಾರ ಅಂದರೆ ಕಬೀರ್ ಬೇಡಿ ಅವರ ಮಗಳು ಪೂಜಾ ಬೇಡಿ ವಯಸ್ಸಿನಲ್ಲಿ ಪರ್ವೀನ್ ದುಸಾಂಜ್ ಅವರಿಗಿಂತ ದೊಡ್ಡವರು. ಇವರ ಇಬ್ಬರ ನಡುವೆ 5 ವರ್ಷಗಳ ಅಂತರ ಇದೆ. ಪೂಜಾ ಬೇಡಿಗೆ ಈಗ 55 ವರ್ಷವಾದರೆ ಪರ್ವೀನ್ ಅವರಿಗೆ ಈಗ 50ರ ಹರೆಯ.

ಈ ಎಲ್ಲಾ ವಿಚಾರಗಳಿಂದ ಕಬೀರ್ ಬೇಡಿ ಅವರ ಈ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವರ ಹುಬ್ಬೇರಿಸಿವೆ. ಚರ್ಚೆಗೆ ಕೂಡ ಗ್ರಾಸವಾಗಿವೆ.

ಅಂದ್ಹಾಗೇ 10 ವರ್ಷಗಳ ಹಿಂದೆ ಕಬೀರ್ ಬೇಡಿ ತಮ್ಮ 70ನೇ ವಯಸ್ಸಿನಲ್ಲಿ ಪರ್ವೀನ್ ದುಸಾಂಜ್ ಅವರನ್ನು ಮದುವೆಯಾಗಿದ್ದರು. ಇದಕ್ಕೂ ಮುನ್ನ ಹತ್ತು ವರ್ಷ ಲಿವ್ ಇನ್ ಸಂಬಂಧದಲ್ಲಿ ಇಬ್ಬರು ಇದ್ದರು. ಈ ಹಿನ್ನೆಲೆ ಮೊನ್ನೆ ಬರ್ತ್‌ಡೇ ಮತ್ತು ತಮ್ಮ ಹತ್ತನೇ ವಿವಾಹ ವಾರ್ಷಿಕೋತ್ಸವ ಆಚರಿಸಲು ಕಬೀರ್ ಬೇಡಿ ತಮ್ಮ ಪತ್ನಿ ಪರ್ವೀನ್ ಜೊತೆ ಗೋವಾಗೆ ತೆರಳಿದ್ದರು.

Ageless Passion Kabir Bedi Sets Ablaze With Birthday Celebration Alongside Wife Parveen Dusanj

ಇನ್ನುಳಿದಂತೆ ಕಬೀರ್ ಬೇಡಿ 1969ರಲ್ಲಿ ಒಡಿಷಾದ ಪ್ರೋತಿಮಾ ಅವರ ಜೊತೆ ಮದುವೆಯಾಗಿದ್ದರು. ಐದೇ ವರ್ಷಕ್ಕೆ ಈ ಮದುವೆ ಮುರಿದು ಬಿತ್ತು. ಪೂಜಾ ಬೇಡಿ ಇವರದ್ದೇ ಮಗಳು. ಆ ನಂತರ ಬ್ರಿಟಿಷ್ ಫ್ಯಾಷನ್ ಡಿಸೈನರ್ ಸುಸಾನ್ ಜೊತೆ ಕಬೀರ್ ಬೇಡಿ ಮದುವೆಯಾದರು. ಈ ಸಂಬಂಧ ಕೂಡ ಹೆಚ್ಚು ದಿನ ಉಳಿಯಲಿಲ್ಲ. ಇವರ ಪ್ರೇಮದ ಸಂಕೇತವಾಗಿ ಇವರಿಗೆ ಒಬ್ಬ ಮಗ ಇದ್ದಾನೆ.

ಸುಸಾನ್ ಅವರಿಂದ ದೂರವಾದ ನಂತರ 1992ರಲ್ಲಿ ತಮಗಿಂತ ವಯಸ್ಸಿನಲ್ಲಿ ಚಿಕ್ಕವಳಾಗಿದ್ದ ಬ್ರಿಟಿಷ್‌ನ ಆರ್‌ಜೆ ನಿಕ್ಕಿ ಬೇಡಿ ಅವರನ್ನು ಮದುವೆಯಾದರು. ಆದರೆ 2005ರಲ್ಲಿ ಈ ದಾಂಪತ್ಯ ಜೀವನ ಕೂಡ ಮುಕ್ತಾಯವಾಯ್ತು.

ಕೊನೆಗೆ 2016ರಲ್ಲಿ ಪರ್ವೀನ್ ಅವರನ್ನು ಕಬೀರ್ ಬೇಡಿ ಮದುವೆಯಾದರು. ಸದ್ಯ ಇವರ ಸಂಬಂಧಕ್ಕೆ ಹತ್ತು ವರ್ಷಗಳಾಗಿವೆ. ಪೋಟೊಗಳು ವೈರಲ್ ಆಗಿವೆ. ಕೆಲವರು ಈ ಜೋಡಿಯನ್ನು ನೋಡಿ ಪ್ರೀತಿಗೆ ವಯಸ್ಸಿಲ್ಲ ಎಂದರೆ, ಇನ್ನೂ ಕೆಲವರು ಮಗಳಿಗಿಂತಲೂ ಚಿಕ್ಕವಳಾದ ಪತ್ನಿ ಇರುವ ಕಾರಣಕ್ಕೆ ಅಪಸ್ವರ ತೆಗೆಯುತ್ತಿದ್ದಾರೆ.

More from Filmibeat

English summary
"Ageless passion! Kabir Bedi sets the internet ablaze in a romantic birthday celebration with Parveen Dusanj. View the viral moments and top reactions here."
Read more about: kabir bedi birthday viral photo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X