For Quick Alerts
  ALLOW NOTIFICATIONS  
  For Daily Alerts

  ಹೃತಿಕ್, ಪ್ರಿಯಾಂಕಾ ಅಗ್ನಿಪಥ್ ಬಾಕ್ಸ್ ಆಫೀಸ್ ಗಳಿಕೆ

  |

  ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹೃತಿಕ್, ಪ್ರಿಯಾಂಕಾ ಚೋಪ್ರಾ ಜೋಡಿಯ ಬಾಲಿವುಡ್ ಚಿತ್ರ 'ಅಗ್ನಿಪಥ್', ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ರು. 23 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಬಾಲಿವುಡ್ ಪಂಡಿತರ ಪ್ರಕಾರ ಈ ವಾರ ಮುಗಿಯುವದರೊಳಗಾಗಿ ಚಿತ್ರ ನೂರು ಕೋಟಿ ಗಳಿಸುವುದು ಪಕ್ಕಾ ಎನ್ನಲಾಗಿದೆ.

  ಕರಣ್ ಜೋಹರ್ ನಿರ್ಮಾಣ ಹಾಗೂ ಕರಣ್ ಮಲ್ಹೋತ್ರಾ ನಿರ್ದೇಶನದ ಅಗ್ನಿಪಥ್ ಚಿತ್ರ ಭಾನುವಾರದಂದು ರು. 17 ಕೋಟಿ ಗಳಿಸಿದೆ. ಹಾಗೂ ಇಡೀ ಭಾರತದ ಗಳಿಕೆ ರು. 65 ಕೋಟಿ ಮೀರಿದೆ. ಸೋಮವಾದಿಂದ ಗಳಿಕೆಯಲ್ಲಿ ಸಹಜವಾಗಿ ಇಳಿಕೆ ಕಂಡುಬಂದಿದ್ದರೂ ರು. 100 ಕೋಟಿ ದಾಟುವುದು ಖಾತ್ರಿ ಎಂಬುದು ಚಿತ್ರತಂಡದ ಹೇಳಿಕೆ.

  ವಿತರಕರ ಶೇರ್ ಇರುವುದು ರು. 50 ಕೋಟಿ ಮಾತ್ರ. ಆದರೆ ಲಾಭದ ದೃಷ್ಟಿಯಿಂದ ಡಬಲ್ ಗಳಿಕೆ ಅನಿವಾರ್ಯ. ಮೂಲ ಚಿತ್ರ ಅಮಿತಾಬ್ ಬಚ್ಚನ್ ಅಗ್ನಿಪಥ್ ಗಿಂತ ಸಾಕಷ್ಟು ಹೆಚ್ಚು ಶ್ರೀಮಂತವಾಗಿ ಈ ಚಿತ್ರ ಮೂಡಿಬಂದಿದೆ. ಮುಂದಿನ ದಿನಗಳಲ್ಲಿ ಗಳಿಕೆ ಏರಿಕೆಯಾದರೆ ಹೃತಿಕ್ ಹಾಗೂ ಪ್ರಿಯಾಂಕ ಕೂಡ ತಾರಾಪಟ್ಟದಲ್ಲಿ ಇನ್ನೂ ಮೇಲಕ್ಕೇರಲಿದ್ದಾರೆ. ಸಂಜಯ್ ದತ್ ಕೂಡ ಈ ಚಿತ್ರದಲ್ಲಿ ಮಿಂಚಿದ್ದಾರೆ. (ಏಜೆನ್ಸೀಸ್)

  English summary
  Agneepath, that opened with a whooping Rs 23 crore at the domestic Box Office is expected to cross Rs 100 crore landmark soon.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X