ನೂರು ಕೋಟಿ ದಾಟಿದ ಅಗ್ನಿಪಥ್ ಚಿತ್ರದ ಗಳಿಕೆ

ಬಾಲಿವುಡ್ ಚಿತ್ರ 'ಅಗ್ನಿಪಥ್' ಬಿಡುಗಡೆಯಾದ ಎರಡನೇ ವಾರಾಂತ್ಯಕ್ಕೆ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಎನ್ನಬಹುದಾದ ರು. 100 ಕೋಟಿ ಗಳಿಸಿದೆ. 2012ರಲ್ಲಿ ರು. 100 ಕೋಟಿ ಗಡಿ ದಾಟಿದ ಮೊಟ್ಟಮೊದಲ ಚಿತ್ರವಾಗಿ ಹೊರಹೊಮ್ಮಿರುವ ಅಗ್ನಿಪಥ್ ಚಿತ್ರ, ಹೌಸ್ ಫುಲ್ ಪ್ರದರ್ಶನದ ಮೂಲಕ ಯಶಸ್ವೀ ಪ್ರಯಾಣ ಮುಂದುವರಿಸಿದೆ.

ಬಿಡುಗಡೆಯಾದ ಮೊದಲ ದಿನವೇ ರು. 23 ಕೋಟಿ ಗಳಿಸಿ ಒಳ್ಳೆಯ ಓಪನಿಂಗ್ ಮೆರೆದಿತ್ತು. ಮೊದಲ ವಾರ ರು. 91.05 ಕೋಟಿ ಗಳಿಸಿದ ಚಿತ್ರ ನಂತರ ಅದ್ಯಾಕೋ ಕುಂಟುತ್ತಾ ಸಾಗಿತ್ತು. ಗಳಿಕೆ ಮತ್ತೆ ಮೇಲೇರಿ ಎರಡನೇ ವಾರ ಮುಗಿಯುವ ಹೊತ್ತಿಗೆ ದೊಡ್ಡಮೊತ್ತ ರು. 106.3 ಕೋಟಿ ಗಳಿಸಿ ಚಿತ್ರತಂಡ ನಗೆಬೀರಲು ಕಾರಣವಾಗಿದೆ.

ಆದರೆ ಅಗ್ನಿಪಥ್ ನಂತರ ಬಿಡುಗಡೆಯಾದ 'ಗಲಿ ಗಲಿ ಚೋರ್ ಹೈ' ಚಿತ್ರದ ಮೊದಲ ಮೂರು ದಿನದ ಗಳಿಕೆ ಶೋಚನೀಯ ಸ್ಥಿತಿಯಲ್ಲಿದೆ. ಅಕ್ಷಯ್ ಖನ್ನಾ, ಶ್ರೀಯಾ ಸರನ್ ಹಾಗೂ ಮುಗ್ಧಾ ಗೋಡ್ಸೆ ಅಭಿನಯದ ಈ ಚಿತ್ರ ಓಪನಿಂಗ್ ಕಂಡುಕೊಳ್ಳಲು ವಿಫಲವಾಗಿದೆ. ಈ 'ಲೋ ಬಜೆಟ್' ಚಿತ್ರ ಮೊದಲ 3 ದಿನದಲ್ಲಿ ಕೇವಲ ರು. 3.25 ಕೋಟಿ ಗಳಿಸಿ ಪ್ರದರ್ಶನ ಕಾಣುತ್ತಿದೆ. ಮುಂದೆ ಚೇತರಿಸಿಕೊಳ್ಳಬಹುದೇ ಎಂಬ ಪ್ರಶ್ನೆ ಈಗ ಎಲ್ಲರಲ್ಲಿದೆ. (ಏಜೆನ್ಸೀಸ್)

More from Filmibeat

English summary
Bollywood movie Agneepath, which received a grand opening on the first day, has finally crossed Rs. 100 crore mark at the Indian Box Office in the second weekend. It has beaten this week's new release Gali Gali Chor Hai at the collection centers.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X