ಕರ್ಮಕ್ಕೆ ತಕ್ಕ ಪ್ರತಿಫಲ ; ಹನ್ಸಿಕಾ ದಾಂಪತ್ಯದಲ್ಲಿ ಬಿರುಗಾಳಿ - 'ಬಿಂದಾಸ್' ಚೆಲುವೆಯ ಬೆನ್ನೇರಿದ ಮಾಜಿ ಅತ್ತಿಗೆ

ದುಡ್ಡು ಎಲ್ಲಿ ಹೆಚ್ಚಿರುತ್ತೆ ಅಲ್ಲಿ ಪ್ರೀತಿ ಕಡಿಮೆ ಇರುತ್ತೆ ಎನ್ನುವ ಮಾತನ್ನು ಹಲವರು ಹೇಳುತ್ತಾರೆ. ಕೆಲವರ ಬದುಕಿನಲ್ಲಿ ದುಡ್ಡು..ಆಸ್ತಿ.. ಐಶ್ವರ್ಯ.. ಹೆಚ್ಚಾದಂತೆ ನೆಮ್ಮದಿ ನಿಧಾನವಾಗಿ ಮಾಯವಾಗುತ್ತೆ. ಚಿತ್ರರಂಗದಲ್ಲಿಯಂತೂ ಇದಕ್ಕೆ ಹತ್ತು ಹಲವು ಉದಾಹರಣೆಗಳು ಕೂಡ ಇವೆ. ಇಲ್ಲಿ ಶ್ರೀಮಂತರೆಂದು ಕರೆಸಿಕೊಳ್ಳುವ ಅನೇಕರ ಬದುಕಿನಲ್ಲಿ ಪ್ರೀತಿ ಮರಿಚೀಕೆಯಾಗಿರುತ್ತೆ.

ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೆ.. ಆ ನಂತರ ಯಾಕೆ ಮದುವೆಯಾಗ್ತಾರೆ ಎನ್ನುವುದು ಅವರವರಿಗೆ ಗೊತ್ತಾದರೂ ಹಲವರ ದಾಂಪತ್ಯ ಇಲ್ಲಿ ಮುರಿದು ಬಿದ್ದಿವೆ. ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ.. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಹನ್ಸಿಕಾ ಮೋಟ್ವಾನಿ ಇದಕ್ಕೆ ಸದ್ಯದ ಉದಾಹರಣೆ.

ai-cleaning-image-ex-sil-muskaan-s-cryptic-jibe-amid-hansika-motwani-s-alimony-free-divorce

ಹೌದು, ಕನ್ನಡದ ''ಬಿಂದಾಸ್'' ಸೇರಿ ಉತ್ತರ ಮತ್ತು ದಕ್ಷಿಣದಲ್ಲಿ ಹಲವು ಚಿತ್ರಗಳನ್ನು ಮಾಡಿರುವ ಹನ್ಸಿಕಾ 2022ರಲ್ಲಿ ಸೊಹೇಲ್ ಖತುರಿಯಾ ಅವರನ್ನು ಮದುವೆಯಾಗಿದ್ದರು. ಈ ಸೊಹೇಲ್ ಖತುರಿಯಾ ಬೇರೆ ಯಾರು ಅಲ್ಲ ಬದಲಿಗೆ ಹನ್ಸಿಕಾ ಅವರ ಆಪ್ತ ಗೆಳತಿ ರಿಂಕಿಯ ಗಂಡ.

ಆ ಕಾಲದಲ್ಲಿ ಈ ವಿಚಾರ ತುಂಬಾ ಸದ್ದು ಮಾಡಿತ್ತು. ಗೆಳತಿಯ ಮನೆಯನ್ನು ಮುರಿದು ಮದುವೆಯಾಗ್ತಿದ್ದಾರೆ ಎಂದು ಹನ್ಸಿಕಾ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು.

ಆದರೂ ತಲೆ ಕೆಡಿಸಿಕೊಳ್ಳದ ಹನ್ಸಿಕಾ ಡಿಸೆಂಬರ್‌ 4-2022ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ''Mundota Fort''ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಹೀಗೆ ಮದುವೆಯಾದ ಹನ್ಸಿಕಾ ಮೊನ್ನೆ ಮೊನ್ನೆ ತಮ್ಮ ಕೈ ಹಿಡಿದ ಸೊಹೇಲ್ ಖತುರಿಯಾ ಅವರ ಕೈಯನ್ನು ಬಿಟ್ಟಿದ್ದಾರೆ. ವಿಚ್ಚೇದನ ನೀಡಿದ್ದಾರೆ. ಈ ಮೂಲಕ ತಮ್ಮ ಮೂರುವರೆ-ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ.

ಸೊಹೇಲ್ ಖತುರಿಯಾ ಅವರಿಂದ ಹನ್ಸಿಕಾ ಯಾವುದೇ ಜೀವನಾಂಶ ಪಡೆದಿಲ್ಲ ಎನ್ನುವ ಸುದ್ದಿ ಇದೆ. ಸದ್ಯ ಗೌರವ ಪೂರ್ಣವಾಗಿ ಹಳೆಯ ಜೀವನಕ್ಕೆ ಗುಡ್ ಬೈ ಹೇಳಿ ಹೊಸ ಜೀವನವನ್ನು ಹನ್ಸಿಕಾ ಎದುರು ನೋಡುತ್ತಿದ್ದಾರೆ. ನೆಮ್ಮದಿಯನ್ನು ಅರಸುತ್ತಿದ್ದಾರೆ. ಆದರೆ ಇವರನ್ನು ನೆಮ್ಮದಿಯಾಗಿರಲು ಬಿಡಬಾರದೆಂದು ಹನ್ಸಿಕಾ ಅವರ ಮಾಜಿ ಅತ್ತಿಗೆ ಮುಸ್ಕಾನ್ ಶಪಥ ಮಾಡಿದಂತೆ ಇದೆ.

ai-cleaning-image-ex-sil-muskaan-s-cryptic-jibe-amid-hansika-motwani-s-alimony-free-divorce

ಹೌದು, ಮುಸ್ಕಾನ್ ನ್ಯಾನ್ಸಿ ಜೇಮ್ಸ್.. ಹನ್ಸಿಕಾ ಅವರಂತೆಯೇ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಬಂದವರು. ''ಥೋಡಿ ಖುಷಿ ಥೋಡೆ ಘಮ್''.. ''ಭಾರತ್ ಕಾ ವೀರ್ ಪುತ್ರ''..''ಅದಾಲತ್''.. ''ಏಜೆಂಟ್ ರಾಘವ್''.. ಇವರ ಕೆಲ ಪ್ರಮುಖ ಧಾರಾವಾಹಿಗಳು.

ಇಂಥಾ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ಅವರ ಮೇಲೆ ಹನ್ಸಿಕಾ ಅವರ ಸಹೋದರ ಪ್ರಶಾಂತ್ ಮೋಟ್ವಾನಿ ಅವರಿಗೆ ಪ್ರೀತಿಯಾಗಿತ್ತು. 2020ರಲ್ಲಿ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಮಾರ್ಚ್ 2021ರಲ್ಲಿ ರಾಜಸ್ಥಾನದ ಉದಯಪುರದಲ್ಲಿರುವ ರಾಯಲ್ ರಿಟ್ರೀಟ್ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ಮದುವೆ ಕೂಡ ನಡೆದಿತ್ತು.

ಆದರೆ ಇವರ ಈ ಪ್ರೀತಿ ಕೇವಲ ಒಂದೇ ವರ್ಷಕ್ಕೆ ಹಳಸಿತ್ತು. 2022ರಲ್ಲಿ ದಾಂಪತ್ಯ ಜೀವನ ಮುರಿದು ಬಿತ್ತು. ಆ ನಂತರ ಡಿಸೆಂಬರ್ 18, 2024 ರಂದು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ತಮ್ಮ ಮಾಜಿ ಪತಿ ಪ್ರಶಾಂತ್, ಹನ್ಸಿಕಾ ಮತ್ತು ಅವರ ತಾಯಿ ಜ್ಯೋತಿ ಮೋಟ್ವಾನಿ ವಿರುದ್ಧ ಮುಸ್ಕಾನ್ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 498-A, 323, 504, 506, ಮತ್ತು 32 ಅಡಿಯಲ್ಲಿ ದೂರು ದಾಖಲಿಸಿದ್ದರು. ಕೌಟುಂಬಿಕ ದೌರ್ಜನ್ಯ, ಮಾನಸಿಕ ಕಿರುಕುಳ ಮತ್ತು ಹಣದ ಬೇಡಿಕೆಯ ಆರೋಪ ಮಾಡಿದರು. ಹನ್ಸಿಕಾ ಅವರು ತಮ್ಮ ಸಂಸಾರದಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಆರೋಪಿಸಿದ್ದರು.

ಇಷ್ಟೇ ಅಲ್ಲ ಈ ಮಾನಸಿಕ ಒತ್ತಡದಿಂದಾಗಿ ತಮಗೆ ಬೆಲ್ಸ್ ಪಾಲ್ಸಿ (Bell's Palsy) ಎಂಬ ಮುಖದ ಪಾರ್ಶ್ವವಾಯು ಸಮಸ್ಯೆ ಎದುರಾಯಿತು ಎಂದು ಕೂಡ ಮುಸ್ಕಾನ್ ಹೇಳಿದ್ದರು. ಮುಸ್ಕಾನ್ ಮಾಡಿದ್ದ ಈ ಆರೋಪಕ್ಕೆ ತಿರುಗೇಟು ನೀಡಿದ್ದ ಹನ್ಸಿಕಾ ತಾವು ನೀಡಿದ್ದ ₹27 ಲಕ್ಷ ಸಾಲವನ್ನು ಹಿಂದಿರುಗಿಸಬೇಕೆಂದು ಮುಸ್ಕಾನ್ ಅವರಿಗೆ ನೋಟಿಸ್ ನೀಡಿದ್ದರು. ಹೈಕೋರ್ಟ್‌ನ ಮೊರೆ ಹೋಗಿದ್ದರು.

ai-cleaning-image-ex-sil-muskaan-s-cryptic-jibe-amid-hansika-motwani-s-alimony-free-divorce

ಸದ್ಯ ಹನ್ಸಿಕಾ ಮೋಟ್ವಾನಿಯ ದಾಂಪತ್ಯ ಜೀವನ ಮುರಿದು ಬಿದ್ದ ಬೆನ್ನಲ್ಲಿಯೇ ಮುಸ್ಕಾನ್ ಸೋಶಿಯಲ್ ಮೀಡಿಯಾದಲ್ಲಿ ಸಮರ ಸಾರಿದ್ದಾರೆ. ಪರೋಕ್ಷವಾಗಿ ಹನ್ಸಿಕಾ ವಿರುದ್ಧ ಕಿಡಿ ಕಾರುತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸರಣಿ ಸ್ಟೋರಿಗಳನ್ನು ಹಂಚಿಕೊಳ್ತಿರುವ ಮುಸ್ಕಾನ್ ನನಗೆ ಯಾರ ವೈಯಕ್ತಿಕ ಜೀವನದ ಬಗ್ಗೆಯೂ ಸಂಬಂಧವಿಲ್ಲ, ಆದರೆ ನಾನು ಹಲವು ಗಾಢವಾದ ಸತ್ಯಗಳನ್ನು ಮರೆಮಾಚಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಮುಖವಾಡ ಕಳಚುವ ಸಮಯ ಎಂಬರ್ಥದಲ್ಲಿ ಸ್ಟೋರಿ ಹಾಕಿಕೊಂಡಿದ್ಧಾರೆ.

AI ಈಗ ಇಮೇಜ್ ಕ್ಲೀನಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ ಎಂದು ವ್ಯಂಗ್ಯ ಕೂಡ ಮಾಡಿರುವ ಮುಸ್ಕಾನ್, ಜೀವನಾಂಶದ ಸ್ಟೋರಿಯನ್ನು ತೇಲಿ ಬಿಡುವ ಮೂಲಕ ಡ್ಯಾಮೇಜ್ ಆದ ಹನ್ಸಿಕಾ ಅವರ ಇಮೇಜ್‌ ತುಂಬಾನೇ ಪರಿಶುದ್ದವಾಗಿದೆ ಎಂದು ಎಲ್ಲರೆದುರು ತೋರಿಸುವ ಪ್ರಯತ್ನವನ್ನು ಅವರ ಪಿಆರ್ ತಂಡ ಮಾಡುತ್ತಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ai-cleaning-image-ex-sil-muskaan-s-cryptic-jibe-amid-hansika-motwani-s-alimony-free-divorce

ಇದಲ್ಲದೇ ಕರ್ಮಕ್ಕೆ ತಕ್ಕಂತೆ ಫಲ.. ದೇವರ ಬಳಿ ಕಣ್ಣೀರು ಹಾಕುತ್ತಾ ನಿಮ್ಮನ್ನು ಯಾರಾದರೂ ಮಾತನಾಡುವಂತೆ ಮಾಡಿದ್ದರೆ, ಅವರನ್ನು ನಮ್ಮ ಜೀವನದಿಂದ ಶಾಶ್ವತವಾಗಿ ದೂರ ಇಡಬೇಕು ಎಂದು ಕೂಡ ಮುಸ್ಕಾನ್ ತಮ್ಮ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ನಾಲ್ಕು ಜನ ಈಗ ಅಕ್ಕನಿಗೆ ಏನೂ ಹೇಳುವುದಿಲ್ಲ. ಯಾಕೆಂದರೆ ಅವರ ಬುಡವನ್ನೇ ಅಕ್ಕಾ ಕಿತ್ತೆಸೆಯಬಹುದು ಎಂದು ಅವರಿಗೆ ಗೊತ್ತು, ಆ ಅಕ್ಕ ಬೇರೆ ಯಾರು ಅಲ್ಲ ಬದಲಿಗೆ ನಾನೇ ಎಂದು ಕೂಡ ಬರೆದುಕೊಂಡಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ಹನ್ಸಿಕಾ ಮೋಟ್ವಾನಿ ತಮ್ಮ ವೈಯಕ್ತಿಕ ಬದುಕಿನತ್ತ ಗಮನ ಕೊಡುತ್ತಿದ್ಧಾರೆ. ಆದರೆ ಪರಿಸ್ಥಿತಿ ಮತ್ತು ಮನಸ್ಥಿತಿ ಎರಡು ಹನ್ಸಿಕಾ ಅವರ ಪರವಾಗಿಲ್ಲ. ಪೂರಕವಾಗಿಲ್ಲ. ಮಸ್ಕಾನ್ ಸುಳಿವು ನೀಡುತ್ತಿರುವ "ಗಾಢವಾದ ರಹಸ್ಯ ಸತ್ಯಗಳು" ನಿಜವಾಗಿಯೂ ಹೊರ ಬರುತ್ತಾವಾ.? ಕಾದು ನೋಡಬೇಕಿದೆ.

More from Filmibeat

English summary
Hansika Motwani's divorce takes a messy turn as ex-SIL Muskaan claims 'hidden deep truths.' Get the full story on the legal battle and the AI image controversy.
Read more about: hansika motwani divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X