ಆಸ್ತಿ ಮತ್ತು ಹಣಕ್ಕೋಸ್ಕರ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಕಿರಿಕ್, ಇಬ್ಬರ ಜಗಳಕ್ಕೆ ಕಾರಣ ಬಹಿರಂಗ !

ಅದೃಷ್ಟ..ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ..ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ,ಅದು ಆಧಾರ ರಹಿತವಾದ ನಂಬಿಕೆ ಎನ್ನುವುದು ವಿಜ್ಞಾನಿಗಳ ವಾದ.ಕಾಲ ಕಾಲಕ್ಕೆ ಈ ಕುರಿತು ಚರ್ಚೆ ನಡೆಯುತ್ತಲೇ ಬಂದಿದೆ. ವಿಜ್ಞಾನ ಮತ್ತು ಜ್ಯೋತಿಷ್ಯದ ಕುರಿತು ನಾನಾ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ.

ಈ ವಾದ-ವಿವಾದಗಳ ನಡುವೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದ ಕುರಿತು ಭವಿಷ್ಯವಾಣಿ ಕೇಳಿ ಬಂದಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರದ ಸಖತ್ ಸದ್ದು ಮಾಡುತ್ತಿದೆ. ಹೌದು, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನ ಕಳೆದ ಹಲವು ದಿನಗಳಿಂದ ಚರ್ಚೆಯಲ್ಲಿದೆ. ಇನ್ನೇನು ಇಬ್ಬರು ವಿಚ್ಛೇದನಕ್ಕೆ ಅರ್ಜಿಯನ್ನು ಕೂಡ ಸಲ್ಲಿಸಲಿದ್ದಾರೆ ಎನ್ನುವಷ್ಟರ ಮಟ್ಟಿಗೆ ಇಬ್ಬರ ಕುರಿತು ವರದಿಗಳು ಪ್ರಕಟವಾಗಿವೆ.

aishwarya-abhishek-bachchans-marriage-still-uncertain-says-tarot-reader-its-about-money

ಆದರೆ, ಐಶ್ವರ್ಯ ಮತ್ತು ಅಭಿಷೇಕ್ ಈ ಕುರಿತು ಇಲ್ಲಿಯವರೆಗೆ ಮೌನ ಮುರಿದಿಲ್ಲ. ಬದಲಿಗೆ ಕಾಲ ಕಾಲಕ್ಕೆ ಜೊತೆಯಾಗಿ ಇಬ್ಬರು ಕಾಣಿಸಿಕೊಳ್ಳುವ ಮೂಲಕ ಡಿವೋರ್ಸ್ ವದಂತಿಗಳನ್ನು ಹರಡುತ್ತಿರುವವರಿಗೆ ಸರಿಯಾದ ಉತ್ತರ ನೀಡುತ್ತಾ ಬಂದಿದ್ದಾರೆ. ಹೀಗಿರುವಾಗ ಇದೀಗ ಡಾ ಗೀತಾಂಜಲಿ ಸಕ್ಸೇನಾ ಇಬ್ಬರ ದಾಂಪತ್ಯ ಜೀವನದ ಕುರಿತು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಸಿದ್ಧಾರ್ಥ್ ಕಣ್ಣನ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ಯಾರೋ ಕಾರ್ಡ್ ರೀಡರ್ ಮತ್ತು ಜ್ಯೋತಿಷಿ ಡಾ ಗೀತಾಂಜಲಿ ಸಕ್ಸೆನಾ ಮುಂಬರುವ 5 ತಿಂಗಳು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಪಾಲಿಗೆ ತುಂಬಾನೇ ಮಹತ್ವದ ದಿನಗಳು ಎಂದು ಹೇಳಿದ್ದಾರೆ. ಸೆಪ್ಟೆಂಬರ್‌ವರೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಬದುಕಿದರೆ ಮುಂದೆ ಇಬ್ಬರನ್ನು ಯಾರು ಬೇರ್ಪಡಿಸಲು ಸಾಧ್ಯ ಇಲ್ಲ ಎಂದು ಹೇಳಿರುವ ಡಾ ಗೀತಾಂಜಲಿ ಸಕ್ಸೆನಾ ಐಶ್ವರ್ಯ ರೈ ಸುತ್ತ ಮುತ್ತ ತುಂಬಾನೇ ನಿಬಂಧನೆಗಳನ್ನು ಹೇರಲಾಗಿದೆ ಇದರಿಂದ ಐಶ್ವರ್ಯ ಕಿರಿಕಿರಿಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು ತಮ್ಮ ಸಂಬಂಧ ಉಳಿಸಿಕೊಳ್ಳಲು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಶಕ್ತಿಮೀರಿ ಪ್ರಯತ್ನವನ್ನು ಪಡುತ್ತಿದ್ದಾರೆ ಎಂದು ಹೇಳಿರುವ ಗೀತಾಂಜಲಿ ಸಕ್ಸೆನಾ ಸೆಪ್ಟೆಂಬರ್‌ವರೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಪರಸ್ಪರ ದೂರು ಇರುವುದು ಉತ್ತಮ, ಇಬ್ಬರು ಆಗ ಶಾಂತಿ ಮತ್ತು ನೆಮ್ಮದಿಯಿಂದ ಇರಬಹುದು ಎಂದು ಕೂಡ ಹೇಳಿದ್ದಾರೆ. ಇಷ್ಟೇ ಅಲ್ಲ ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಅದನ್ನು ಹೊರತು ಪಡಿಸಿದರೆ ಇಬ್ಬರ ನಡುವೆ ಭಾವನಾತ್ಮಕ ಒತ್ತಡ ಮತ್ತು ಸಮಸ್ಯೆ ಇಲ್ಲ ಎಂದು ಕೂಡ ಗೀತಾಂಜಲಿ ಸಕ್ಸೆನಾ ಹೇಳಿದ್ದಾರೆ.

ಅಂದ್ಹಾಗೇ ಕಳೆದ ಕೆಲ ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಮದುವೆ ಸಮಾರಂಭದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಒಟ್ಟಿಗೆ ತಮ್ಮ ಕಜರಾ ರೇ ಹಾಡಿಗೆ ಹೆಜ್ಜೆಯನ್ನು ಹಾಕಿದ್ದರು. ಇದರಿಂದ ಇವರ ಅಭಿಮಾನಿಗಳು ನಿರಾಳರಾಗಿದ್ದರು. ಆದರೆ, ಮೊನ್ನೆ ಮ್ಯಾಡಾಕ್ ನಿರ್ಮಾಣ ಸಂಸ್ಥೆ 20 ವರ್ಷ ಪೂರೈಸಿದ ಹಿನ್ನೆಲೆ ಅದ್ಧೂರಿ ಪಾರ್ಟಿಯನ್ನು ಹಮ್ಮಿಕೊಂಡಿತ್ತು. ಈ ಪಾರ್ಟಿಯಲ್ಲಿ ಅಭಿಷೇಕ್ ಬಚ್ಚನ್ ತಮ್ಮ ತಾಯಿ ಜಯಾ ಬಚ್ಚನ್ ಮತ್ತು ಸಹೋದರಿಯ ಮಗಳು ನವ್ಯಾ ನವೇಲಿ ಜೊತೆ ಕಾಣಿಸಿಕೊಂಡಿದ್ದರು.

ಈ ಪಾರ್ಟಿಗೆ ಐಶ್ವರ್ಯ ರೈ ಗೈರಾಗಿದ್ದರು. ಇದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಅತ್ತೆ ಇದ್ದಲ್ಲಿ ಸೊಸೆ ಇರುವುದಿಲ್ಲ ಸೊಸೆ ಇದ್ದಲ್ಲಿ ಅತ್ತೆ ಇರುವುದಿಲ್ಲ ಎನ್ನುವ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿತ್ತು. ಇದೀಗ ಇದರ ನಡುವೆ ಡಾ.ಗೀತಾಂಜಲಿ ಸಕ್ಸೆನಾ ಇಬ್ಬರ ದಾಂಪತ್ಯ ಜೀವನದ ಕುರಿತು ಮಾತುಗಳನ್ನಾಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X