ಅಭಿಷೇಕ್ ಬಚ್ಚನ್ ಗೆಳತಿ ನಿಮ್ರತ್ ಕೌರ್ ಮದುವೆ ಪ್ಲಾನ್ ಏನು? ಹರಿದಾಡುತ್ತಿರುವ ವಿಡಿಯೋದಲ್ಲಿ ಏನಿದೆ?

By ಫಿಲ್ಮಿಬೀಟ್ ಡೆಸ್ಕ್

ಕಳೆದ ಕೆಲವು ತಿಂಗಳಿನಿಂದ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಅನ್ನೋ ಸುದಿ ಸದ್ದು ಮಾಡುತ್ತಿದೆ. ಹೇಗಾಗಿದೆ ಅಂದರೆ, ಅವರು ಬಿಡುತ್ತಿಲ್ಲ. ಇವರಿಬ್ಬರೂ ಏನೂ ಹೇಳುತ್ತಿಲ್ಲ ಅನ್ನೋ ಸ್ಥಿತಿ ನಿರ್ಮಾಣ ಆಗಿದೆ. ಬಾಲಿವುಡ್ ಅಂಗಳದಿಂದ ಐಶ್ವರ್ಯಾ ಹಾಗೂ ಅಭಿಷೇಕ್ ವಿಚ್ಛೇದನದ ಬಗ್ಗೆನೇ ಚರ್ಚೆ. ಗ್ಯಾಪ್‌ನಲ್ಲಿ ಬಿಗ್ ಪುತ್ರನೊಂದಿ ನಟಿಯ ಹೆಸರು ಕೂಡ ತಳುಕು ಹಾಕಿಕೊಂಡಿದೆ.

ಐಶ್ವರ್ಯಾ ರೈ ಗಂಡನ ಮನೆಯಿಂದ ದೂರ ಉಳಿದಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅತ್ತೆ ಜಯಾ ಬಚ್ಚನ್ ಹಾಗೂ ಮಾವ ಅಮಿತಾಭ್ ಬಚ್ಚನ್ ಅವರ ವಿರುದ್ಧ ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ. ಇದು ಪತಿ ಅಭಿಷೇಕ್ ಬಚ್ಚನ್ ಅವರಿಗೂ ಕಿರಿಕಿರಿಯನ್ನು ಉಂಟು ಮಾಡಿದೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಲೇ ಇತ್ತು. ಇನ್ನೇನು ವಿಚ್ಚೇದನ ಕೊಟ್ಟೇ ಬಿಟ್ಟರು ಅನ್ನುವ ಮಟ್ಟಕ್ಕೂ ಸುದ್ದಿ ಹಬ್ಬಿತ್ತು.

Aishwarya Rai Abhishek Bachchan divorce rumors here is Nimrat Kaur Wedding Plans

ತಮ್ಮ ಡಿವೋರ್ಸ್ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿರುವುದನ್ನು ಕಂಡು ಅಭಿಷೇಕ್‌ ಬಚ್ಚನ್ ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಅಭಿಷೇಕ್ ಬಚ್ಚನ್ ಹಾಗೂ ಮತ್ತೊಬ್ಬ ಬಾಲಿವುಡ್ ನಟಿ ನಿಮ್ರತ್ ಕೌರ್ ನಡುವೆ ಏನೋ ನಡೀತಾ ಇದೆ. ಈ ನಟಿಯಿಂದಲೇ ಈ ಜೋಡಿ ದಾಂಪತ್ಯ ಮುರಿದು ಬಿದ್ದಿದ್ದೆ ಅನ್ನೋ ಮಾತು ಕೇಳಿ ಬರುತ್ತಿದೆ. ಇದೇ ಗ್ಯಾಪ್‌ನಲ್ಲಿ ಮದುವೆ ಬಗ್ಗೆ ನಿಮ್ರತ್ ಕೌರ್ ಹೇಳಿಕೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ಹರಿದಾಡುತ್ತಿದ್ದಂತೆ ಅಭಿಷೇಕ್ ಬಚ್ಚನ್ ಹಾಗೂ ನಿಮ್ರತ್ ಕೌರ್ ಶೀಘ್ರದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಅನ್ನೋ ಸುದ್ದಿಗಳು ಓಡಾಡುತ್ತಿವೆ. ಅಸಲಿಗೆ ಅಭಿಷೇಕ್ ಹೊಸ ಗರ್ಲ್‌ಫ್ರೆಂಡ್ ಎಂದು ಹೇಳಲಾಗುತ್ತಿರುವ ನಿಮ್ರತ್ ಕೌರ್ ಹಳೆಯ ವಿಡಿಯೋದಲ್ಲಿ ಮದುವೆ ಬಗ್ಗೆ ಏನು ಹೇಳಿದ್ದಾರೆ? ಆ ವಿಡಿಯೋದಲ್ಲಿ ಚರ್ಚೆಯಾಗುವಂತಹ ವಿಷಯ ಏನಿದೆ? ತಿಳಿಯಲು ಮುಂದೆ ಓದಿ.

Aishwarya Rai Abhishek Bachchan divorce rumors here is Nimrat Kaur Wedding Plans

ಅಭಿಷೇಕ್ ಬಚ್ಚನ್ ಹಾಗೂ ನಿಮ್ರತ್ ಕೌರ್ ಇಬ್ಬರೂ 'ದಸ್ವಿ' ಅನ್ನುವ ಸಿನಿಮಾ ಒಟ್ಟಿಗೆ ನಟಿಸಿದ್ದರು. ಅದರಲ್ಲಿ ನಿಮ್ರತ್ ಕೌರ್ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದ ಪ್ರಚಾರದ ವೇಳೆ ಅಭಿಷೇಕ್ ಬಚ್ಚನ್ ಹಾಗೂ ನಿಮ್ರತ್ ಕೌರ್ ಒಟ್ಟಿಗೆ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ವೇಳೆ ಇಬ್ಬರಿಗೂ ದಾಂಪತ್ಯದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. 2022ರಲ್ಲಿ ನಡೆದ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಅವರ 15 ವರ್ಷಗಳ ದಾಂಪತ್ಯದ ಪ್ರಶ್ನೆ ಮಾಡಲಾಗಿತ್ತು.

ಆ ವೇಳೆ ಇಷ್ಟು ಸುದೀರ್ಘ ಕಾಲದ ದಾಂಪತ್ಯ ಬಗ್ಗೆ ಪ್ರಶ್ನೆ ಕೇಳಿದಾಗ ನಿಮ್ರತ್ ಕೌರ್ ಮಧ್ಯೆ ಪ್ರವೇಶ ಮಾಡಿದ್ದರು. ಈಗಿನ ಮದುವೆಗಳು ಎಲ್ಲಿ ಸುಧೀರ್ಘ ಕಾಲ ಉಳಿಯುತ್ತವೆ ಎಂದು ಹೇಳಿದ್ದರು. ಆಗ ಅಭಿಷೇಕ್ ಬಚ್ಚನ್ ಈಕೆಯ ಕಡೆಗೆ ಲುಕ್ ಕೊಟ್ಟಿದ್ದರು. ತಕ್ಷಣವೇ ನಿಮ್ರತ್ ಕೌರ್ ನಾನು ತಮಾಷೆಗೆ ಹೇಳಿದ್ದು. ಯಾರನ್ನು ಅವಮಾನಿಸುವ ಉದ್ದೇಶವಿರಲಿಲ್ಲ ಎಂದಿದ್ದರು.

ಹಾಗೇ ಮದುವೆ ಬಗ್ಗೆ ಹೇಳಿಕೆಯನ್ನು ಕೊಟ್ಟಿದ್ದರು. ಸೂಕ್ತವಾದ ವ್ಯಕ್ತಿ ಸರಿಯಾದ ಸಮಯಕ್ಕೆ ಸಿಕ್ಕಿದ ಬಳಿಕ ಮದುವೆ ಆಗುತ್ತೇನೆ. ಇನ್ನೂ ಮದುವೆ ಆಗಿಲ್ಲ ಅಂದರೆ, ಆಕೆಗೆ ಮದುವೆ ಇಷ್ಟವಿಲ್ಲ ಎಂದಲ್ಲ. ವಿವಾಹ ಅನ್ನೋದು ಪ್ಲಾನ್ ಮಾಡಿ ಆಗುವುದಲ್ಲ. ಅದು ನ್ಯಾಚುರಲ್ ಆಗಿ ನಡೆಯಬೇಕು ಎಂದು ಹೇಳಿದ್ದರು. ಅದೇ ವಿಡಿಯೋ ಈಗ ನೆಟ್ಟಿಗರು ವೈರಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

More from Filmibeat

English summary
Aishwarya Rai, Abhishek Bachchan divorce rumors here is Nimrat Kaur Wedding Plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X