ಅಪಸ್ವರಗಳಿಲ್ಲದ ಐಶೂ ಅನುರೂಪ ದಾಂಪತ್ಯಕ್ಕೆ 8 ವರ್ಷ

By ಉದಯರವಿ

ಬಾಲಿವುಡ್ ತಾರೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ದಾಂಪತ್ಯಗೀತೆಗೆ ಇಂದಿಗೆ 8 ವರ್ಷಗಳು ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗಾಗಿ ಅವರ ಮದುವೆ ಫೋಟೋಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಹಳೆ ಮದುವೆ ಫೋಟೋಗಳನ್ನು ನೋಡುತ್ತಾ ಹೋದಂತೆ ಆಲ್ಬಂ ಸರಿಸುತ್ತಿದ್ದರೆ ಕಾಲ ಹಿಂದೆಕ್ಕೆ ಸರಿದ ಅನುಭವವಾಗುತ್ತದೆ.

ಐಶ್ ಮತ್ತು ಅಭಿ ಅವರು 'ಧೂಮ್ 2' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಬೇಕಾದರೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆಗಲೇ ಇಬ್ಬರೂ ಡೇಟಿಂಗ್ ಮಾಡಲು ಶುರು ಮಾಡಿದ್ದು. ತನಗಿಂತಲೂ ವಯಸ್ಸಿನಲ್ಲಿ ಚಿಕ್ಕವರಾದ ಅಭಿಷೇಕ್ ಬಚ್ಚನ್ ಪ್ರೀತಿಗೆ ಬಿದ್ದ ಐಶು ಮದುವೆ ಏಪ್ರಿಲ್ 20, 2007ರಲ್ಲಿ ಅದ್ದೂರಿಯಾಗಿ ನಡೆದುಹೋಯಿತು.

ಮದುವೆಗೂ ಮುನ್ನ ಇಬ್ಬರೂ ಕೆಲವು ಚಿತ್ರಗಳಲ್ಲಿ ಬೆರೆತು ಅಭಿನಯಿಸಿದ್ದಾರೆ. ಆಗಲೇ ಇಬ್ಬರ ನಡುವೆ ಒಂದು ವಿಧವಾದ ಆತ್ಮೀಯತೆ ಬೆಸೆದುಕೊಂಡಿತ್ತು. ಆ ಅನುಬಂಧವೇ ಇಬ್ಬರನ್ನೂ ಏಳು ಹೆಜ್ಜೆ ಹಾಕುವಂತೆ ಮಾಡಿತು. ಐಶ್ವರ್ಯಾ ವಯಸ್ಸಿನಲ್ಲಿ ಹಿರಿಯರಾದರೂ ಅವರಿಬ್ಬರ ಮದುವೆ ವಯಸ್ಸು ಅಡ್ಡಿಬರಲಿಲ್ಲ. [ಗತವೈಭವಕ್ಕೆ ಮರಳಿದ ಮಾಜಿ ಸುಂದರಿ ಐಶ್ವರ್ಯಾ ರೈ]

ಇವರಿಬ್ಬರ ಪ್ರೇಮಕ್ಕೆ ಸಂಕೇತವಾಗಿ 'ಆರಾಧ್ಯ' ಜನಿಸಿದರು. ಎಂಟು ವರ್ಷಗಳ ದಾಂಪತ್ಯ ಜೀವನದಲ್ಲಿ ಇವರಿಬ್ಬರ ನಡುವೆ ಯಾವುದೇ ರೀತಿಯ ಒಡಕು, ಬಿರುಕು ಕಾಣಿಸಿಕೊಳ್ಳಲಿಲ್ಲ. ಅವರ ಅನುರೂಪ ದಾಂಪತ್ಯ ಹೀಗೇ ನೂರ್ಕಾಲ ಇರಲಿ ಎಂದು ಹಾರೈಸುತ್ತಾ ಅವರ ಮದುವೆ ಆಲ್ಬಂ ಒಮ್ಮೆ ತಿರುವಿ ಹಾಕೋಣ ಬನ್ನಿ.

ಬಾಲಿವುಡ್ ನ ಅತ್ಯಂತ ಅದ್ದೂರಿ ಮದುವೆ

ಬಾಲಿವುಡ್ ನ ಅತ್ಯಂತ ಅದ್ದೂರಿ ಮದುವೆ

ಬಾಲಿವುಡ್ ನಲ್ಲಿ ನಡೆದಂತಹ ಅತ್ಯಂತ ಅದ್ದೂರಿ ವಿವಾಹಗಳಲ್ಲಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿವಾಹವೂ ಒಂದು.

ಆಗಲೇ 8 ವರ್ಷಗಳು ಕಳೆದು ಹೋದವೆ!

ಆಗಲೇ 8 ವರ್ಷಗಳು ಕಳೆದು ಹೋದವೆ!

ತನ್ನ ಮಗ ಮದುವೆ ನಡೆದು ಆಗಲೇ 8 ವರ್ಷಗಳು ಉರುಳಿವೆ ಎಂದರೆ ನನಗೆ ನಂಬಲಿಕ್ಕೇ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಮಿತಾಬ್ ಬಚ್ಚನ್.

ಕುದುರೆ ಏರಿ ಬಂದ ರಾಜಕುಮಾರ

ಕುದುರೆ ಏರಿ ಬಂದ ರಾಜಕುಮಾರ

ವಿವಾಹ ಮಹೋತ್ಸವದಲ್ಲಿ ಕುದುರೆ ಏರಿ ಬಂದ ರಾಜಕುಮಾರ ಅಭಿಷೇಕ್ ಬಚ್ಚನ್.

ಆಗಲೇ ಎಷ್ಟೆಲ್ಲಾ ಗ್ರ್ಯಾಂಡ್ ಆಗಿತ್ತು

ಆಗಲೇ ಎಷ್ಟೆಲ್ಲಾ ಗ್ರ್ಯಾಂಡ್ ಆಗಿತ್ತು

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮದುವೆ ನಡುದು 8 ವರ್ಷಗಳು ಪೂರ್ಣವಾಗುತ್ತಿದ್ದರೂ, ಎಷ್ಟೆಲ್ಲಾ ಗ್ರ್ಯಾಂಡ್ ಆಗಿ ಅವರ ಮದುವೆ ನಡೆದಿದೆ ಎನ್ನಿಸುತ್ತದೆ.

ಐಶೂಗೆ ಪ್ರಪೋಸ್ ಮಾಡಿದ ಸಮಯ

ಐಶೂಗೆ ಪ್ರಪೋಸ್ ಮಾಡಿದ ಸಮಯ

ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿಬಂದ 'ಗುರು' ಚಿತ್ರದ ಶೂಟಿಂಗ್ ಸಮಯದಲ್ಲಿ ತನ್ನ ಮನಸ್ಸಿನಲ್ಲಿರುವ ಆಸೆಯನ್ನು ಐಶ್ವರ್ಯಾ ರೈ ಅವರಿಗೆ ಅಭಿಷೇಕ್ ಹೇಳಿದರು. ಐಶ್ವರ್ಯಾ ಸಹ ಓಕೆ ಎಂದಿದ್ದರು. ಇವರಿಬ್ಬರ ಪ್ರೇಮದ ಮೊದಲ ಅಧ್ಯಾಯ ಶುರುವಾಗಿದ್ದು ಹೀಗೆ.

ಈಗಲೂ ಐಶ್ವರ್ಯಾ ರೈ ನವವಧುನೇ

ಈಗಲೂ ಐಶ್ವರ್ಯಾ ರೈ ನವವಧುನೇ

ವಿವಾಹ ವೇದಿಕೆಗೆ ಬರುತ್ತಾ ತುಸು ನಾಚಿದ ಮಧುಮಗಳು ಐಶ್ವರ್ಯಾ ರೈ. ಈಗಲೂ ಐಶ್ವರ್ಯಾ ರೈ ಅವರನ್ನು ನೋಡಿದರೆ ನವವಧುವಿನಂತೆಯೇ ಕಂಗೊಳಿಸುತ್ತಾರೆ.

ಐಶೂ ಸಿಕ್ಕುದ್ದು ನನ್ನ ಅದೃಷ್ಟ

ಐಶೂ ಸಿಕ್ಕುದ್ದು ನನ್ನ ಅದೃಷ್ಟ

ಐಶ್ವರ್ಯಾ ತನ್ನ ಪತ್ನಿಯಾಗಿ ನನಗೆ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ ಎಂದು ಎಷ್ಟೋ ಸಹ ಹೇಳಿದ್ದಾರೆ ಅಭಿಷೇಕ್ ಬಚ್ಚನ್. ಇವರಿಬ್ಬರ ನಡುವಿನ ಪ್ರೇಮದ ಬಂಧ ಗಟ್ಟಿಯಾಗಿರುವುದಕ್ಕೆ ಇದೇ ಕಾರಣ.

ಅಡುಗೆ ಮಾಡುವುದನ್ನೂ ಕಲಿತ ಐಶೂ

ಅಡುಗೆ ಮಾಡುವುದನ್ನೂ ಕಲಿತ ಐಶೂ

ತನ್ನ ಗಂಡನಿಗಾಗಿ ಅಡುಗೆ ಮಾಡುವುದನ್ನು ಕಲಿಯುವುದರ ಜೊತೆಗೆ, ಅದೆಷ್ಟೋ ರುಚಿರುಚಿಯಾದ ತಿಂಡಿ ತಿನಿಸುಗಳನ್ನು ಮಾಡಿ ಬಡಿಸುತ್ತಾರಂತೆ ಐಶ್ವರ್ಯಾ.

ತಂದೆ ತಾಯಿಯೂ ಓಕೆ ಎಂದ ಗಳಿಗೆ

ತಂದೆ ತಾಯಿಯೂ ಓಕೆ ಎಂದ ಗಳಿಗೆ

ಇನ್ನು ತಾನು ಐಶ್ವರ್ಯಾ ರೈ ಕೈಹಿಡಿಯುತ್ತಿರುವ ವಿಚಾರವನ್ನು ತನ್ನ ತಂದೆ ತಾಯಿಗೆ ಹೇಳಿದ ಕೂಡಲೆ ಅವರೂ ಒಪ್ಪಿದರಂತೆ.

ಅಪಸ್ವರಗಳಿಲ್ಲ ಅನುರೂಪ ದಾಂಪತ್ಯ

ಅಪಸ್ವರಗಳಿಲ್ಲ ಅನುರೂಪ ದಾಂಪತ್ಯ

ಕಳೆದ 8 ವರ್ಷಗಳಿಂದ ಎಷ್ಟೋ ಅನ್ಯೋನ್ಯವಾಗಿರುವ ಇವರಿಬ್ಬರ ದಾಂಪತ್ಯ ಜೀವನ ನೋಡುಗರ ಕಣ್ಣಿಗೆ ಆನಂದ ಪುಳಕ. ಈ 8 ವರ್ಷಗಳಲ್ಲಿ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಎಂದಿಗೂ ಅಪಸ್ವರ ಕೇಳಿಬರಲಿಲ್ಲ.

More from Filmibeat

English summary
It's been 8 years since the Bollywood's 'IT' couple, Aishwarya Rai and Abhishek Bachchan entered wedlock. On their 8th anniversary, what can be better than seeing their unseen wedding pics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X