ವಿಚ್ಛೇದನದ ವದಂತಿ ನಡುವೆ ಅಭಿಷೇಕ್ ಬಚ್ಚನ್ ಮನೆ ಸೇರಿದ ''ಐಶ್ವರ್ಯ''..!

ಸಂಸಾರ ಅಂದಮೇಲೆ ಜಗಳ ರೋಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಮತ್ತೆ ಒಂದಾಗಬಹುದು. ಇನ್ನೂ ಕೆಲವೊಮ್ಮೆ ಕೆಲ ದಿನಗಳವರೆಗೆ ದೂರ ಇದ್ದು ಆ ನಂತರ ಮತ್ತೆ ಒಂದೇ ಸೂರಿನಡಿ ಬದುಕಲು ಶುರು ಮಾಡಬಹುದು. ಇದೆಲ್ಲವೂ ಮಾಮೂಲು. ಆದರೆ, ಬಣ್ಣದ ಲೋಕದಲ್ಲಿ ಈ ಚಿಕ್ಕ ವಿಚಾರನೇ ದೊಡ್ಡದು. ಗಂಡ-ಹೆಂಡತಿ ಕೆಲ ಕಾಲ ಜೊತೆಯಾಗಿ ಕಾಣಿಸಿಕೊಳ್ಳದಿದ್ದರೆ ಅವರ ಸಂಬಂಧ ಹಳಸಿದೆ ಎಂದೇ ಅನೇಕರು ಅಂದುಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಮಾಡಲು ಶುರು ಮಾಡುತ್ತಾರೆ. ಇದಕ್ಕೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಾಂಸಾರಿಕ ಜೀವನ ಸದ್ಯದ ಉದಾಹರಣೆ.

ಹೌದು, ಕಳೆದ ಕೆಲ ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವೆ ಸಂಬಂಧ ಅಷ್ಟಕಷ್ಟೇ ಎನ್ನುವ ಮಾತು ಕೇಳಿ ಬರುತ್ತಿದೆ. ಯಾವುದೇ ಕ್ಷಣದಲ್ಲಾದರೂ ಅಭಿಷೇಕ್ ಬಚ್ಚನ್ ಅವರಿಂದ ಐಶ್ವರ್ಯ ರೈ ದೂರವಾಗಬಹುದು ಎನ್ನುವ ಮಾತು ಕೂಡ ದಶದಿಕ್ಕುಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಜೊತೆ ಈ ವರ್ಷದ ಆರಂಭದಲ್ಲಿಯೇ ಅಭಿಷೇಕ್ ಬಚ್ಚನ್ ಮನೆಯಿಂದ ಗಂಟುಮೂಟೆ ಸಮೇತ ಹೊರ ಬಂದು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿದೆ.

Aishwarya Rai and Aaradhya were seen at Jalsa amid separation rumors with Abhishek Bachchan

ಇನ್ನೂ ಅಂಬಾನಿ ಮಗನ ಮದುವೆಯಲ್ಲಿ ಕೂಡ ಐಶ್ವರ್ಯ ರೈ ತಮ್ಮ ಮಗಳ ಜೊತೆ ಕಾಣಿಸಿಕೊಂಡಿದ್ದರೇ ಹೊರತು ಅಮಿತಾಬ್ ಬಚ್ಚನ್ -ಅಭಿಷೇಕ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಜೊತೆ ಕಾಣಿಸಿಕೊಂಡಿರಲಿಲ್ಲ. ತಮ್ಮ ಮಗಳ ಜೊತೆ ಐಶ್ವರ್ಯ ನ್ಯೂಯಾರ್ಕ್‌ ಪ್ರವಾಸಕ್ಕೆ ಹೋದಾಗ ಕೂಡ ಅಭಿಷೇಕ್ ಬಚ್ಚನ್ ಇರಲಿಲ್ಲ. ಅಭಿಷೇಕ್ ಬಚ್ಚನ್ ಪ್ಯಾರಿಸ್ ಗೆ ಪ್ರಯಾಣ ಮಾಡಿದಾಗ ಕೂಡ ಅಭಿಷೇಕ್ ಬಚ್ಚನ್ ಪಕ್ಕದಲ್ಲಿ ಐಶ್ವರ್ಯ ರೈ ಅಭಿಮಾನಿಗಳ ಕಣ್ಣಿಗೆ ಕಾಣಿಸಲಿಲ್ಲ.

ಇವರ ಈ ನಡಾವಳಿಗಳಿಂದ ಇವರಿಬ್ಬರ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಅನುಮಾನ ಹೆಚ್ಚಾಗುತ್ತಾನೇ ಬರುತ್ತಿತ್ತು. ತಮ್ಮ ನೆಚ್ಚಿನ ಜೋಡಿ ಎಲ್ಲಿ ದೂರವಾಗುತ್ತೆ ಎನ್ನುವ ಆತಂಕ ಕೂಡ ಇವರ ಅಭಿಮಾನಿಗಳನ್ನು ಕಾಡುತ್ತಿತ್ತು. ಆದರೆ ಈಗ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಜೊತೆ ಅಭಿಷೇಕ್ ಬಚ್ಚನ್ ಮನೆಗೆ ಬಂದಿದ್ದಾರೆ. ಅಭಿಷೇಕ್ ಮನೆಯಾದ ಜಲ್ಸಾದ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮಾತನಾಡುತ್ತಿರುವವರ ಬಾಯಿಯನ್ನೂ ಕೂಡ ಐಶ್ವರ್ಯ ಮುಚ್ಚಿಸಿದ್ದಾರೆ. ಮಗಳನ್ನು ಸೀದಾ ಶಾಲೆಯಿಂದ ಕರೆದುಕೊಂಡು ಅಭಿಷೇಕ್ ಬಚ್ಚನ್ ಮನೆಗೆ ಐಶ್ವರ್ಯ ರೈ ಬಂದಿರುವುದನ್ನು ನೋಡಿದ ಅನೇಕರು ಈಗ ಅಭಿಷೇಕ್ ಮನೆಗೆ ಮಹಾರಾಣಿ ಮರಳಿದಳು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಸಂಬಂಧ ಸರಿಯಾಗಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ ಎನ್ನುತ್ತಿದ್ದಾರೆ. ಇದರ ನಡುವೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಅಸಂಖ್ಯಾತ ಅಭಿಮಾನಿಗಳೂ ಈ ವಿಡಿಯೋ ನೋಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

More from Filmibeat

English summary
Aishwarya Rai was seen at the Bachchan family's Jalsa residence with her daughter Aaradhya amid ongoing separation rumors involving Abhishek Bachchan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X