ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ದೂರವಾಗುವುದು ಖಚಿತ-ನಿಶ್ಚಿತ..? ಸಾಕ್ಷಿ ಇಲ್ಲಿದೆ..!

ಸಿನಿಮಾ ನಾಯಕಿಯರು ಯಾರಾದರೂ ಹುಡುಗನ ಜೊತೆ ಕಾಣಿಸಿಕೊಂಡರಷ್ಟೇ ಅವರ ಅಭಿಮಾನಿಗಳು ತಲೆ ಕೆದರಿಕೊಳ್ಳಲ್ಲ. ಮದುವೆಯಾದ ತಮ್ಮ ನೆಚ್ಚಿನ ನಾಯಕಿ ತನ್ನ ಗಂಡನ ಜೊತೆ ಕಾಣಿಸಿಕೊಳ್ಳದೇ ಇದ್ದರೂ ಕೂಡ ತಲೆಯೆಲ್ಲ ಕೆಡಿಸಿಕೊಂಡು ಕೂರುತ್ತಾರೆ. ಉದಾಹರಣೆಗೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರನ್ನೇ ತೆಗೆದುಕೊಳ್ಳಿ.

ಹೌದು, ಅಸಲಿಗೆ .. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಅನುಮಾನ ಅನೇಕರಲ್ಲಿದೆ. ಇಬ್ಬರೂ ಯಾವ ಕ್ಷಣದಲ್ಲಾದರೂ ಅಧಿಕೃತವಾಗಿ ಬೇರೆಯಾಗಬಹುದು ಎನ್ನುವ ಮಾತು ಕೂಡ ಮುಂಬೈನಲ್ಲಿ ಕೇಳಿ ಬರುತ್ತಿದೆ. ಇನ್ನೂ ಈ ವರ್ಷದ ಆರಂಭದಲ್ಲಿಯೇ ಐಶ್ವರ್ಯ ರೈ ತಮ್ಮ ಕರಿಮಣಿ ಮಾಲೀಕ ಅಭಿಷೇಕ್ ಬಚ್ಚನ್ ಅವರ ಮನೆಯಿಂದ ಬ್ಯಾಗ್ ಸಮೇತ ಹೊರ ಬಂದಿದ್ದಾರೆ ಅನ್ನುವ ಸುದ್ದಿ ಕೂಡ ಹಲವು ದಿನಗಳಿಂದ ಅಂತೆ-ಕಂತೆಯ ಸಂತೆಯಲ್ಲಿದೆ.

aishwarya-rai-and-abhishek-bachchan-attend-anants-wedding-separately-fueling-divorce-rumours

ಸಂದರ್ಭ ಮತ್ತು ಸನ್ನಿವೇಶ ಹೀಗಿರುವಾಗ ಕೇಳಿ ಬರುತ್ತಿರುವ ಈ ಮಾತುಗಳಿಗೆ ಪುಷ್ಟಿ ನೀಡುವಂತೆ ಐಶ್ವರ್ಯ ರೈ ತಮ್ಮ ಗಂಡ ಅಭಿಷೇಕ್ ಬಚ್ಚನ್ ಕುಟುಂಬದಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ತಮ್ಮ ಅತ್ತೆ-ಮಾವ-ಗಂಡನ ಜೊತೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಸಮಾರಂಭಕ್ಕೆ ಬಾರದೇ, ತಮ್ಮ ಮಗಳು ಆರಾಧ್ಯ ಜೊತೆ ಪ್ರತ್ಯೇಕವಾಗಿ ಬಂದು ಹೋಗಿದ್ದಾರೆ.

ಹೌದು, ಮಹಾರಾಷ್ಟ್ರದ ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಸ್ವರ್ಗವೇ ಧರೆಗಿಳಿದಿದೆ. ಲೋಕಲ್ To ಗ್ಲೋಬಲ್ ಸ್ಟಾರ್‌ಗಳಿಂದ ಮದುವೆ ಸಭಾಂಗಣ ತುಂಬಿ ತುಳುಕುತ್ತಿದೆ. ಇನ್ನೂ ಹೇಳಿ ..ಕೇಳಿ ... ಇದು ಕೋಟ್ಯಾಧಿಪತಿಯ ಕಿರಿಯ ಕೂಸಿನ ಮದುವೆ. ಪಾಪರಾಜಿಗಳ ಅಬ್ಬರ ಕೇಳಬೇಕಾ..? ಇಡೀ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನ ಕ್ಯಾಮರಾಗಳು ಸುತ್ತುವರೆದಿವೆ.

aishwarya-rai-and-abhishek-bachchan-attend-anants-wedding-separately-fueling-divorce-rumours

ಇನ್ನೂ.. ಬಂದವರೆಲ್ಲ ಈ ಕ್ಯಾಮರಾಗಳಿಗೆ ಫೋಸ್ ನೀಡಲು ಎಂದೇ ಜಾಗವನ್ನೂ ನಿಗಧಿ ಮಾಡಲಾಗಿದೆ. ಹೀಗೆ ಗುರುತಿಸಲಾದ ಪ್ರದೇಶಕ್ಕೆ ಅಮಿತಾಭ್ ಬಚ್ಚನ್ ತಮ್ಮ ಕುಟುಂಬದ ಜೊತೆ ಆಗಮಿಸಿದ್ದಾರೆ. ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಶ್ವೇತಾ ಬಚ್ಚನ್, ನಿಖಿಲ್ ನಂದಾ, ನವ್ಯಾ ನವೇಲಿ, ಮತ್ತು ಅಗಸ್ತ್ಯ ಜೊತೆ ಫೋಟೋ ಕ್ಲಿಕಿಸಿಕೊಂಡಿದ್ದಾರೆ.

ಆದರೆ..ಈ ಫ್ಯಾಮಿಲಿ ಫೋಟೋಗೆ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಜೊತೆ ಬಂದು ಫೋಸ್‌ ಕೊಡಲಿಲ್ಲ. ಬದಲಿಗೆ ಬಚ್ಚನ್ ಕುಟುಂಬ ಅಲ್ಲಿಂದ ತೆರಳಿದ ನಂತರ ತಮ್ಮ ಮುದ್ದಿನ ಮಗಳು ಆರಾಧ್ಯ ಜೊತೆ ಬಂದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.

ಸದ್ಯಕ್ಕೆ ಅಭಿಷೇಕ್ ತಮ್ಮ ಕುಟುಂಬದ ಜೊತೆ ಹಾಗೂ ಐಶ್ವರ್ಯ ತಮ್ಮ ಪುತ್ರಿಯ ಜೊತೆ ಕಾಣಿಸಿಕೊಂಡ ಫೋಟೋ ಮತ್ತು ವಿಡಿಯೋ ಈಗ ವೈರಲ್ ಆಗಿವೆ. ಅನೇಕರ ಮನದಲ್ಲಿ ಹತ್ತಾರು ಪ್ರಶ್ನೆಗಳನ್ನೂ ಕೂಡ ಹುಟ್ಟು ಹಾಕಿವೆ. ಕೆಲವರು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ ಎನ್ನುತ್ತಿದ್ದರೆ,ಸಂಸಾರ ಅಂದ ಮೇಲೆ ಸರಸ-ವಿರಸ ಇದ್ದಿದ್ದೇ ಆದರೆ ತಮ್ಮ ನಡುವೆ ಅನ್ಯೋನ್ಯತೆಯ ಕೊರತೆ ಇದೆ ಎಂಬ ಸಂದೇಶವನ್ನು ಇಬ್ಬರು ಈ ತರ ರವಾನೆ ಮಾಡಬಾರದಿತ್ತು ಅನ್ನುತ್ತಿದ್ದಾರೆ. ವಿಚ್ಛೇದನ ನೀಡದೇ ಜಗತ್ತಿನ ಪಾಲಿಗೆ ಸತಿ-ಪತಿಗಳಂತೆ ಇಬ್ಬರೂ ಬದುಕುತ್ತಿರುವುದಕ್ಕೆ ಅಮಿತಾಬ್ ಬಚ್ಚನ್ ಮಾತ್ರ ಕಾರಣ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಮುನಿಸು ಮರೆತು ಜೊತೆಯಾಗಿ ಬಾಳಿ ಎಂಬ ಸಲಹೆಯನ್ನೂ ಕೊಡ್ತಿದ್ದಾರೆ. ಮನವಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X