ವಿಚ್ಛೇದನದ ವದಂತಿ ನಡುವೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಮುಖದಲ್ಲಿ ಅರಳಿದ ನಗು...!

ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಇಂದು ನಿನ್ನೆಯದಲ್ಲ. ಅನೇಕ ದಿನಗಳಿಂದ ಈ ಮಾತು ಕೇಳಿ ಬರುತ್ತಾನೇ ಇದೆ. ಆದರೆ.. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಅಭಿಷೇಕ್ ಬಚ್ಚನ್ ಆಗಲಿ ಐಶ್ವರ್ಯ ರೈ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಕಾರಣಕ್ಕೆ ಅನೇಕರು ಹರಿದಾಡುತ್ತಿರುವ ಈ ವಿಚಾರವನ್ನು ನಿಜಾ ಎಂದುಕೊಂಡಿದ್ದಾರೆ. ಇನ್ನೂ ಕೆಲವರು ಅಭಿಷೇಕ್ ಬಚ್ಚನ್ ಅವರಿಂದ ಐಶ್ವರ್ಯ ರೈ ಯಾವುದೇ ಕಾರಣಕ್ಕೂ ದೂರವಾಗಲ್ಲ ಎನ್ನುವ ವಾದ ಮಾಡುತ್ತಿದ್ದಾರೆ. ಇದರ ನಡುವೆ ಈಗ ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯ ಜೊತೆ ಸಂಭ್ರಮದ ಅಲೆಯಲ್ಲಿ ತೇಲುತ್ತಿರುವ ವಿಡಿಯೋ ವೈರಲ್ ಆಗಿದೆ.

ಹೌದು, ನಿಮಗೆ ನೆನಪಿದ್ದರೆ.. ಜುಲೈನಲ್ಲಿ ಅದ್ಧೂರಿಯಾಗಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಂದಿದ್ದರು. ಆದರೆ ಜೊತೆಯಲ್ಲಿ ಬಾರದ ಇಬ್ಬರು ಪ್ರತ್ಯೇಕವಾಗಿ ಬಂದು ಕ್ಯಾಮರಾಗಳ ಮುಂದೆ ನಗೆ ಬೀರಿದ್ದರು. ಅಭಿಷೇಕ್ ಮತ್ತು ಐಶ್ವರ್ಯ ಅವರ ಈ ನಡೆ ಹತ್ತು ಹಲವು ಪ್ರಶ್ನೆಗಳಿಗೆ ಕಾರಣವಾಗಿತ್ತು. ಅನೇಕರಲ್ಲಿನ ಅನುಮಾನವನ್ನೂ ಹೆಚ್ಚಿಸಿತ್ತು. ಇಬ್ಬರ ನಡುವೆ ಸಂಬಂಧ ಹಳಸಿರುವುದು ನೂರಕ್ಕೆ ನೂರು ಸತ್ಯ ಎನ್ನುವ ಮಾತು ಕೇಳಿ ಬಂದಿತ್ತು.

aishwarya-rai-and-abhishek-bachchan-s-sweet-moments-at-anant-ambani-s-wedding-have-gone-viral-amid-d

ಆದರೆ.. ಅಸಲಿಗೆ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನ ಹೊರಗಡೆ ನಾನೊಂದು ತೀರ.. ನೀನೊಂದು ತೀರ ಎಂಬಂತೆ ಓಡಾಡಿದ್ದ ಇಬ್ಬರು, ಮದುವೆಯ ಸಮಾರಂಭದಲ್ಲಿ ಜೊತೆ ಜೊತೆಯಾಗಿಯೇ ಇದ್ದರು. ಮದುವೆಯ ಕಾರ್ಯಕ್ರಮಗಳನ್ನು ಅಕ್ಕ-ಪಕ್ಕ ಕುಳಿತುಕೊಂಡು ಕಣ್ತುಂಬಿಕೊಂಡಿದ್ದರು. ಹೀಗೆ ಇಬ್ಬರು ಖುಷಿ ಖುಷಿಯಾಗಿರುವ ಕ್ಷಣಗಳು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ಮಹೋತ್ಸವದ ಡಾಕ್ಯುಮೆಂಟರಿಯಲ್ಲಿ ಸೆರೆಯಾಗಿವೆ. ಬಿಡುಗಡೆಯಾಗಿರುವ ಡಾಕ್ಯುಮೆಂಟರಿಯ ಟೀಸರ್ ಇಬ್ಬರ ದಾಂಪತ್ಯ ಜೀವನದ ಕುರಿತು ಹೊಸದೊಂದು ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ.

ಈ ಟೀಸರ್‌ನಲ್ಲಿ ವೈಭವೋಪೇತ ಮದುವೆಯ ಅದ್ಭುತ- ಅನನ್ಯ ಕ್ಷಣಗಳಿವೆ. ಆದರೆ, ಇಲ್ಲಿ ಎಲ್ಲರ ಕಣ್ಣು ಕುಕ್ಕಿದ್ದು ಮಾತ್ರ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್. ಸೋಫಾದ ಮೇಲೆ ಮಗಳು ಆರಾಧ್ಯ ಜೊತೆ ಇಬ್ಬರು ಕುಳಿತು ಸಂಭ್ರಮದ ಅಲೆಯಲ್ಲಿ ತೇಲಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಸಮಾರಂಭ ನೋಡುತ್ತಾ ಖುಷಿ ಖುಷಿಯಾಗಿ ಕಾಲ ಕಳೆದಿದ್ದಾರೆ. ಮತ್ತೊಂದು ಕಡೆ ಅಮಿತಾಭ್ ಬಚ್ಚನ್ ತಮ್ಮ ಪತ್ನಿ ಜಯಾ ಬಚ್ಚನ್ ಜೊತೆ ಕುಳಿತುಕೊಂಡಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳ ಗಮನವನ್ನು ಸೆಳೆದಿದೆ.

ಅಂದ್ಹಾಗೇ ಮೊನ್ನೆಯಷ್ಟೇ ಅಮಿತಾಭ್ ಬಚ್ಚನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಐಶ್ವರ್ಯ ರೈ ಶುಭಾಶಯವನ್ನು ಕೋರಿದ್ದರು. ಅಮಿತಾಭ್ ಜೊತೆ ಆರಾಧ್ಯ ಇರುವ ಫೋಟೋ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯಗಳು ಪಾ-ದಾದಾಜಿ, ದೇವರ ಆಶೀರ್ವಾದ ಸದಾ ಮೇಲಿರಲಿ ಎಂದರು. ಇನ್ನೂ ಇದೆಲ್ಲದರ ನಡುವೆ ಅಭಿಷೇಕ್ ಬಚ್ಚನ್ ಮತ್ತು ದಸವಿ ಚಿತ್ರದ ನಾಯಕಿ ನಿಮ್ರತ್ ಕೌರ್ ನಡುವೆ ಇದ್ದ ಅನೈತಿಕ ಸಂಬಂಧದಿಂದ ಬೇಸತ್ತು ಐಶ್ವರ್ಯ ರೈ ವಿಚ್ಛೇದನ ಪಡೆಯುವ ನಿರ್ಧಾರವನ್ನು ಮಾಡಿದ್ದಾರೆ ಎಂದು ರೆಡ್ಡಿಟ್‌ನಲ್ಲಿ ಬಳಕೆದಾರರೊಬ್ಬರು ವಾದ ಮಂಡಿಸಿದ್ದರು. ಒಟ್ನಲ್ಲಿ ಸದ್ಯಕ್ಕೆ ಅನಂತ್ ಅಂಬಾನಿ ಮದ್ವೆಯಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಈ ಸಂಭ್ರಮದ ಕ್ಷಣಗಳು ಅವರ ಅಭಿಮಾನಿಗಳ ಸಂಭ್ರಮವನ್ನೂ ಹೆಚ್ಚಿಸಿವೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X