ಅಮಿತಾಬ್, ಅಭಿಷೇಕ್ ಬಳಿಕ ಈಗ ಐಶ್ವರ್ಯಾ ರೈ ಗೆ ಕೊರೊನಾ ಪಾಸಿಟಿವ್

ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದ ಬಳಿಕ ಈಗ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯಾಗೆ ಸಹ ಕೊರೊನಾ ಪಾಸಿಟಿವ್ ಆಗಿರುವುದು ಗೊತ್ತಾಗಿದೆ.

Recommended Video

ಶಿವಣ್ಣನ ಅಭಿಮಾನಿಗಳು ನಂಗೆ ಏನ್ ಮಾಡ್ತಾರೋ ಅನ್ನೋ ಭಯ ಆಗಿತ್ತು | Vijay Raghavendra | Filmibeat Kannada

ನಿನ್ನೆ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿತ್ತು. ಇಬ್ಬರನ್ನೂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಐಶ್ವರ್ಯಾ ರೈ ಮತ್ತು ಜಯಾ ಬಚ್ಚನ್ ಅವರಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ ಎನ್ನಲಾಗುತ್ತು, ಆದರೆ ಇದೀಗ ಬಂದ ಸುದ್ದಿಯ ಪ್ರಕಾರ ಐಶ್ವರ್ಯಾ ರೈ ಹಾಗೂ ಅವರ ಪುತ್ರಿ ಆರಾಧ್ಯಾಗೂ ಸಹ ಕೊರೊನಾ ಸೋಂಕು ತಗುಲಿದೆ.

ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಸ್ತುತ ಐಶ್ವರ್ಯಾ ರೈ ಹಾಗೂ ಆರಾಧ್ಯಾರನ್ನೂ ಅಲ್ಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.

ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್

ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್

ಮೊದಲಿಗೆ ಐಶ್ವರ್ಯಾ ರೈ ಮತ್ತು ಜಯಾ ಬಚ್ಚನ್ ಅವರಿಗೆ ಮೊದಲಿಗೆ ಆಂಟಿಜೆನ್ ಎಂಬ ಪರೀಕ್ಷೆಯನ್ನು ಮಾಡಲಾಗಿತ್ತು, ಅದರ ಫಲಿತಾಂಶದಂತೆ ಇಬ್ಬರಿಗೂ ನೆಗೆಟಿವ್ ಬಂದಿತ್ತು. ಆದರೆ ಇದೀಗ ಗಂಟಲು ದ್ರವದ ಪರೀಕ್ಷಾ ವರದಿ ಬಂದಿದ್ದು, ಐಶ್ವರ್ಯಾ ರೈ ಹಾಗೂ ಆರಾಧ್ಯಾ ಗೆ ಕೊರೊನಾ ಇರುವುದು ಧೃಡಪಟ್ಟಿದೆ.

ಜಯಾ ಬಚ್ಚನ್ ಅವರಿಗೂ ಆತಂಕ

ಜಯಾ ಬಚ್ಚನ್ ಅವರಿಗೂ ಆತಂಕ

ಅಮಿತಾಬ್ ಕುಟುಂಬದ ಜಯಾ ಬಚ್ಚನ್ ಅವರಿಗೂ ಕೊರೊನಾ ಆತಂಕ ಎದುರಾಗಿದ್ದು, ಅವರ ವರದಿಗಾಗಿ ಕಾಯಲಾಗುತ್ತಿದೆ. ಇನ್ನುಳಿದಂತೆ, ಅಮಿತಾಬ್ ಕುಟುಂಬದೊಂದಿಗೆ ಕಳೆದ ಹತ್ತು ದಿನದಲ್ಲಿ ಸಂಪರ್ಕ ಹೊಂದಿದವರು ಸ್ವಯಂ ಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅಮಿತಾಬ್ ಮನವಿ ಮಾಡಿದ್ದಾರೆ.

More from Filmibeat

English summary
Actress Aishwarya Rai and her daughter Aradhya tested corona virus positive. Amitabh Bachchan, Abhishek Bachchan tested positive yesterday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X