For Quick Alerts
  ALLOW NOTIFICATIONS  
  For Daily Alerts

  ಸೋದರ ಸಂಬಂಧಿಯ ಮದುವೆ ಸಂಭ್ರಮದಲ್ಲಿ ಐಶ್ವರ್ಯಾ ರೈ: ಡಾನ್ಸ್ ವಿಡಿಯೋ ವೈರಲ್

  |

  ಮಾಜಿ ವಿಶ್ವ ಸುಂದರಿ, ಖ್ಯಾತ ನಟಿ ಐಶ್ವರ್ಯಾ ರೈ ಇತ್ತೀಚಿಗಷ್ಟೆ ತನ್ನ ಸೋದರ ಸಂಬಂಧಿ ಶ್ಲೋಕಾ ಶೆಟ್ಟಿ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಐಶ್ವರ್ಯಾ ರೈ ಪತಿ, ಖ್ಯಾತ ನಟ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಜೊತೆ ಮದುವೆಯಲ್ಲಿ ಭಾಗಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

  ಐಶ್ವರ್ಯಾ ರೈ ಎಷ್ಟೇ ಖ್ಯಾತಿ, ವಿಶ್ವ ಸುಂದರಿ ಪಟ್ಟ ಪಡೆದಿದ್ದರು ಕುಟುಂಬದ ಕಾರ್ಯಕ್ರಮಗಳಿಗೆ ತಪ್ಪದೆ ಹಾಜರಾಗುತ್ತಾರೆ. ಕರಾವಳಿ ಸುಂದರಿ ಐಶ್ ಕೇವಲ ಮುಂಬೈನಲ್ಲಿ ಮಾತ್ರವಲ್ಲದೇ ಕರಾವಳಿಯಲ್ಲಿ ಕಾರ್ಯಕ್ರಮ ನಡೆದರೂ ಭಾಗಿಯಾಗುತ್ತಾರೆ. ಇದೀಗ ಸೋದರ ಸಂಬಂಧಿಯ ಮದುವೆ ಸಂಭ್ರಮದಲ್ಲಿ ಕಾಣಿಸಿಕೊಳ್ಳುವ ಜೊತೆಗೆ ಮಸ್ತ್ ಡಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

  ತಮಿಳಿನ ಖ್ಯಾತ ನಟನ ಕುಟುಂಬದ ಜೊತೆ ಐಶ್ವರ್ಯಾ ರೈ ದಂಪತಿತಮಿಳಿನ ಖ್ಯಾತ ನಟನ ಕುಟುಂಬದ ಜೊತೆ ಐಶ್ವರ್ಯಾ ರೈ ದಂಪತಿ

  ಕೆಂಪು ಬಣ್ಣದ ಅದ್ದೂರಿ ಡ್ರೆಸ್‌ನಲ್ಲಿ ಕಂಗೊಳಿಸುತ್ತಿದ್ದ ಐಶ್ವರ್ಯಾ ಮದುವೆ ಶಾಸ್ತ್ರಗಳಲ್ಲೂ ಭಾಗಿಯಾಗಿದ್ದರು. ಮದುಮಗಳು ಶೋಕ್ಲಾ ಶೆಟ್ಟಿಗೆ ಆರತಿ ಮಾಡಿ ದೀಪ ಬೆಳಗುವ ಶಾಸ್ತ್ರದಲ್ಲಿ ಐಶ್ ಭಾಗಿಯಾಗಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮದುವೆ ಸಂಗೀತ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯಾ ಜೊತೆ ಸಖತ್ ಡಾನ್ಸ್ ಮಾಡಿದ್ದಾರೆ.

  ದೇಸಿ ಗರ್ಲ್ ಹಾಡಿಗೆ ಹೆಜ್ಜೆ ಹಾಕಿರುವ ಐಶ್ ದಂಪತಿಯ ವಿಡಿಯೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅಂದಹಾಗೆ ವಿವಾಹದ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಬಿಳಿ ಬಣ್ಣದ ಲೆಹಂಗಾದಲ್ಲಿ ಮಿಂಚಿರುವ ಮಗಳು ಆರಾಧ್ಯ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿರುವ ಐಶ್ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ಹರಿದುಬರುತ್ತಿದೆ.

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಐಶ್ವರ್ಯಾ ರೈ ವರ್ಷದ ಬಳಿಕ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಚಿತ್ರರಂಗಕ್ಕೆ ಮರಳಿರುವ ಐಶ್ವರ್ಯಾ ರೈ, ಮಣಿರತ್ನಂ ನಿರ್ದೇಶನದ ಪೊನ್ನಿಯಂ ಸೆಲ್ವನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಲ್ಲಿ ನಟಿ ಐಶ್ವರ್ಯಾ ರೈ ಅವರದ್ದು ವಿಲನ್ ಪಾತ್ರ. ಐಶ್ವರ್ಯಾ ರೈ ಮಾತ್ರವೇ ಅಲ್ಲದೆ ರಿಯಾಜ್ ಖಾನ್, ಕನ್ನಡದ ನಟ ಕಿಶೋರ್ ಸಹ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಕಾಶ್ ರೈಗೆ ಪ್ರಮುಖ ಪಾತ್ರವನ್ನು ಮಣಿರತ್ನಂ ನೀಡಿದ್ದು ಆ ಪಾತ್ರಕ್ಕಾಗಿ ಮೊದಲು ಅಮಿತಾಬ್ ಬಚ್ಚನ್ ಅವರನ್ನು ಕೇಳಲಾಗಿತ್ತು. ತ್ರಿಶಾ ಚೋಳ ರಾಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ 31 ಮುಖ್ಯ ಪಾತ್ರಗಳಿವೆ. ಬಹುತೇಕ ಪಾತ್ರಗಳಿಗೆ ಸ್ಟಾರ್ ನಟ-ನಟಿಯರನ್ನೇ ಮಣಿರತ್ನಂ ಆಯ್ಕೆ ಮಾಡಿರುವುದು ವಿಶೇಷ.

  Aishwarya Rai Bachchan Dance with her husband Abhishek Bachchan in cousin Wedding

  ಸದ್ಯ ಈ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು, ಇತ್ತೀಚಿಗಷ್ಟೆ ಚಿತ್ರೀಕರಣಕ್ಕೆಂದು ಪಾಂಡಿಚೆರಿಗೆ ಬಂದಿದ್ದರು. ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯಾ ಜೊತೆ ಕೆಲ ದಿನಗಳು ಪಾಂಡಿಚೆರಿಯಲ್ಲಿ ಬೀಡುಬಿಟ್ಟಿದ್ದರು. ಈ ಸಮಯದಲ್ಲಿ ಐಶ್ವರ್ಯಾ ಪತಿ ಅಭಿಷೇಕ್ ಜೊತೆ ತಮಿಳಿನ ಖ್ಯಾತ ನಟ ಶರತ್ ಕುಮಾರ್ ಕುಟುಂಬವನ್ನು ಭೇಟಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು.

  ಐಶ್ವರ್ಯಾ ಭೇಟಿಯಾಗಿರುವ ಫೋಟೋಗಳನ್ನು ಶರತ್ ಕುಮಾರ್ ಮಗಳು, ನಟಿ ವರಲಕ್ಷ್ಮಿ ಶರತ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಾ ಬಚ್ಚನ್ ಮೂವರು ಶರತ್ ಕುಮಾರ್ ಕುಟುಂಬದ ಜೊತೆ ಕಳೆದ ಸಂತಸದ ಕ್ಷಣಗಳ ಫೋಟೋವನ್ನು ವರಲಕ್ಷ್ಮಿ ಶೇರ್ ಸಂಭ್ರಮ ಪಟ್ಟಿದ್ದರು.

  ಐಶ್ವರ್ಯಾ ಅನೇಕ ವರ್ಷಗಳ ಬಳಿಕ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2010ರಲ್ಲಿ ಬಿಡುಗಡೆಯಾದ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ರೊಬೋಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮಣಿರತ್ನಂ ಸಿನಿಮಾ ಮೂಲಕ ಮತ್ತೆ ಸೌತ್ ಕಡೆ ಮುಖ ಮಾಡಿದ್ದಾರೆ. ಅಂದಹಾಗೆ ಐಶ್ವರ್ಯಾ ರೈ ಕೊನೆಯದಾಗಿ 2018ರಲ್ಲಿ ಬಿಡುಗಡೆಯಾದ ಫನ್ನೆ ಖಾನ್ ಸಿನಿಮಾದಲ್ಲಿ ನಟಿಸಿದ್ದರು. ಇದೀಗ 3 ವರ್ಷದ ಬಳಿಕ ಮತ್ತೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ.

  English summary
  Actress Aishwarya Rai Bachchan Dance with her husband Abhishek Bachchan in cousin Wedding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X