»   » ವ್ಹಾವ್!! ಮರಿ ಸುಂದರಿ ಆರಾಧ್ಯ ಬಚ್ಚನ್ ಚಿತ್ರಗಳನ್ನು ನೋಡಿ

ವ್ಹಾವ್!! ಮರಿ ಸುಂದರಿ ಆರಾಧ್ಯ ಬಚ್ಚನ್ ಚಿತ್ರಗಳನ್ನು ನೋಡಿ

Posted By: ಸೋನು ಗೌಡ
Subscribe to Filmibeat Kannada

ಯಾವುದೇ ಸಿನಿ ಸ್ಟಾರ್ ಗಳಿಗೂ ತಮ್ಮ ತಮ್ಮ ಮಕ್ಕಳು ಅಂದ್ರೆ ತುಂಬಾನೇ ಇಷ್ಟ ಇರುತ್ತೆ ಅಲ್ವಾ. ಅಂತೆಯೇ ನಮ್ಮ ಬಾಲಿವುಡ್ ತಾರೆ ಐಶ್ವರ್ಯ ರೈ ಬಚ್ಚನ್ ಗೂ ತಮ್ಮ ಮುದ್ದಿನ ಮಗಳು ಆರಾಧ್ಯ ಅಂದ್ರೆ ಪಂಚಪ್ರಾಣ.

ಮಗಳು ಹುಟ್ಟಿದಾಗಿನಿಂದ ಸ್ವಲ್ಪ ದೊಡ್ಡವಳಾಗುವವರೆಗೂ ಚಿತ್ರರಂಗಕ್ಕೆ ಕಾಲಿಡದ ಐಶ್ವರ್ಯ ರೈ ಮುದ್ದು ಮಗಳ ಲಾಲನೆ-ಪಾಲನೆ ಜೊತೆಗೆ ಆರೈಕೆಯಲ್ಲಿ ತೊಡಗಿದ್ದರು. ಇದೀಗ ತುಂಬಾ ದಿನಗಳ ನಂತರ ಕೊಂಚ ಬಿಡುವು ಮಾಡಿಕೊಂಡು 'ಜಸ್ಬಾ' ಚಿತ್ರದಲ್ಲಿ ನಟಿಸುವ ಮೂಲಕ ಮತ್ತೆ ಬಿಟೌನ್ ಗೆ ಮರಳಿದ್ದಾರೆ.

ಇದೀಗ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ಪ್ರೀತಿಯ ಮಗಳ ಕುರಿತಾದ ನೆನಪುಗಳ ಒಂದು ಸಣ್ಣ ಬಂಡಲನ್ನೇ ಹೊರತಂದಿದ್ದಾರೆ. ಅಂದಹಾಗೆ ಮರಿ ಸುಂದರಿ ಆರಾಧ್ಯ ಸುರಸುಂದರಿ ಐಶ್ವರ್ಯ ರೈ ಬಚ್ಚನ್ ರಂತೆ ತುಂಬಾ ಸೆನ್ಸಿಟೀವ್‌ ಅಂತೆ.

ಅಂತೂ ಸದ್ಯಕ್ಕೆ ಬಿಟೌನ್ ನಲ್ಲಿ ಕ್ಯೂಟೆಸ್ಟ್ ಸ್ಟಾರ್ ಕಿಡ್ ಅಂದ್ರೆ ಅದು ಬಚ್ಚನ್ ಫ್ಯಾಮಿಲಿಯ ಪುಟ್ಟ ಸುಂದರಿ ಆರಾದ್ಯ ಬಚ್ಚನ್. ಅಂದಹಾಗೆ ನಟಿ ಐಶ್ವರ್ಯ ರೈ ಬಚ್ಚನ್ ಅವರಿಗೆ ಗಣೇಶ ಹಬ್ಬ ಅಂದ್ರೆ ತುಂಬಾ ಇಷ್ಟವಂತೆ, ಜೊತೆಗೆ ಪ್ರತಿ ವರ್ಷ ಅವರು ಗಣೇಶ ಹಬ್ಬವನ್ನು ಆಚರಿಸುತ್ತಾರೆ.

ಇನ್ನು ಮರಿ ಸುಂದರಿ ಆರಾಧ್ಯ ಬಚ್ಚನ್ ಕೂಡ ಅಮ್ಮನಂತೆ ಪ್ರತಿದಿನ ಸಂಜೆ ಗಣೇಶ ವಿಗ್ರಹಕ್ಕೆ ಪೂಜಿಸುವುದು, ದೀಪ ಹಚ್ಚುವುದು, ಜೊತೆಗೆ ಆರತಿ ಬೆಳಗುವುದು ಮುಂತಾದವುಗಳನ್ನು ಮಾಡುತ್ತಾಳಂತೆ.

ಜೊತೆಗೆ ಇವರ ಮನೆಯಲ್ಲಿ ಸಣ್ಣ ಗಣಪತಿ ವಿಗ್ರಹದಿಂದ ಹಿಡಿದು ದೊಡ್ಡ ಗಣಪತಿ ವಿಗ್ರಹಗಳನ್ನು ಇವರು ಸಂಗ್ರಹಿಸಿ ಇಟ್ಟಿದ್ದಾರಂತೆ. ಒಟ್ನಲ್ಲಿ ಹೇಳಬೇಕೆಂದರೆ ಒಂದು ಸಣ್ಣ ಗಣೇಶನ ಗುಡಿಯನ್ನೇ ಅಮ್ಮ-ಮಗಳು ಸೇರಿ ನಿರ್ಮಾಣ ಮಾಡಿದ್ದಾರಂತೆ. ಮುಂದೆ ಓದಿ.

ಬೆಕ್ಕಿನ ಕಣ್ಣಿನ ಸುಂದರಿ ಐಶ್ ಜೊತೆ ಮರಿ ಸುಂದರಿ ಆರಾಧ್ಯ

ಕಾರ್ಯಕ್ರಮವೊಂದರಲ್ಲಿ ಅಮ್ಮ-ಮಗಳು. ಬೆಕ್ಕಿನ ಕಂಗಳ ಚೆಲುವೆ ಐಶ್ವರ್ಯ ರೈ ಬಚ್ಚನ್ ಮಗಳು ಆರಾಧ್ಯ ಜೊತೆ ಕ್ಯಾಮರಕಣ್ಣಿಗೆ ಸೆರೆಸಿಕ್ಕಿದ್ದು ಹೀಗೆ

ಕೃಷ್ಣರಾಜ್ - ಆರಾಧ್ಯ- ಐಶ್ವರ್ಯ ರೈ

ಬಾಲಿವುಡ್ ಬೆಡಗಿ ಐಶ್ವರ್ಯ ರೈ ಬಚ್ಚನ್ ತಮ್ಮ ತಂದೆ ಕೃಷ್ಣರಾಜ್ ಹಾಗೂ ಮಗಳು ಆರಾಧ್ಯ ಬಚ್ಚನ್ ಜೊತೆ ಕಂಡುಬಂದ ದೃಶ್ಯ.

ಅಮ್ಮನ ಬಿಗಿ ಅಪ್ಪುಗೆಯಲ್ಲಿ ಪುಟ್ಟ ಆರಾಧ್ಯ

ಮರಿ ಸುಂದರಿ ಆರಾಧ್ಯ ಬಚ್ಚನ್ ಪುಟ್ಟ ಮಗುವಾಗಿದ್ದಾಗ ಐಶ್ವರ್ಯ ರೈ ಜೊತೆ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಪರಿ ಇದು

ಗಣೇಶ ದೇವಸ್ಥಾನದಲ್ಲಿ

ಹಬ್ಬದಂದು ಗಣೇಶ ದೇವಾಲಯದಲ್ಲಿ ಅಮ್ಮನೊಂದಿಗೆ ಮರಿ ಸುಂದರಿ ಆರಾಧ್ಯ ಫೊಟೋ ಒಂದಕ್ಕೆ ಕ್ಯೂಟ್ ಫೋಸ್

ಕ್ಯೂಟ್ ಫೋಸ್

ಸುಂದರಿ ಅಮ್ಮನೊಂದಿಗೆ ಪುಟ್ಟ ಚೆಲುವೆ ಆರಾಧ್ಯ ಫೊಟೋ ಗೆ ನೀಡಿದ ಕ್ಯೂಟ್ ಪೋಸ್ ನೋಡಿ

ಫ್ಯಾಮಿಲಿ ಫೋಟೋ

ಪ್ರೀತಿಯ ಅಜ್ಜಿ ಹಾಗೂ ತಾತನೊಂದಿಗೆ ಮರಿ ಐಶು(ಆರಾಧ್ಯ) ಹಾಗೂ ಸುಂದರಿ ಐಶ್ವರ್ಯ ರೈ ಬಚ್ಚನ್

ವೃಂದ-ಐಶು- ಆರಾಧ್ಯ

ಶಾಪಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಕ್ಯಾಮರ ಕಣ್ಣಿಗೆ ಸೆರೆಸಿಕ್ಕ ಆರಾಧ್ಯ, ಐಶು ಹಾಗೂ ಐಶ್ವರ್ಯ ರೈ ತಾಯಿ ವೃಂದ

English summary
Aishwarya Rai Bachchan's daughter Aaradhya Bachchan is one of the cutest star kids of Bollywood. Recently, Aishwarya revealed that her little bundle of joy Aaradhya is very sensitive, just like her.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada